Thursday, April 3, 2025

Latest Posts

ದುರುಪಯೋಗವಾಗುತ್ತಿದೆಯಾ ಸಾಹುಕಾರ್ ಹೆಸರು..? ಹೆಲ್ಮೆಟ್ ಹಾಕದೇ ಗಾಂಚಾಲಿ ತೋರಿಸಿದ ಬೈಕ್ ಚಾಲಕ

- Advertisement -

Chikkodi News: ಚಿಕ್ಕೋಡಿ: ಚಿಕ್ಕೋಡಿಯಲ್ಲಿ ರಮೇಶ್ ಜಾರಕಿಹೊಳಿ ಸಾಹುಕಾರ್ ಅಂತಲೇ ಫೇಮಸ್. ಅವರ ಹೆಸರು ಕೇಳಿದ್ರೆ, ಪೊಲೀಸರು ಗಪ್‌ಚುಪ್ ಆಗ್ತಾರೆ. ಆದರೆ ಕಂಡ ಕಂಡವರೆಲ್ಲ ಸಾಹುಕಾರ್ ಹೆಸರು ಹೇಳಿ, ಇದರ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.

ರಸ್ತೆ ಮೇಲೆ ಹೆಲ್ಮೆಟ್ ಹಾಕಿಕೊಳ್ಳದೇ ಓಡಾಡುವವರಿಗೆ ಸಾಹುಕಾರ್ ಎಂಬ ಪದ ಅಸ್ತ್ರವಾಯ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಹೇರಿಯಲ್ಲಿ, ಹೆಲ್ಮೆಟ್ ಹಾಕಿಲ್ಲ ಫೈನ್ ಕಟ್ಟಿ ಎಂದಿದ್ದಕ್ಕೆ ಸಾಹುಕರ್ ಹೆಸರು ಹೇಳಿ, ಪೊಲೀಸರಿಗೆ ಭಯ ಹುಟ್ಟಿಸಲು ಯತ್ನಿಸಿದ್ದಾರೆ.

ವಿಠ್ಠಲ್ ಲಗಳಿ ಎಂಬಾತ ಬೈಕ್‌ನಲ್ಲಿ ಬರುತ್ತಿದ್ದ ವೇಳೆ, ಕೆಪಿ ಆಕ್ಟನಡಿ ಕೇಸ್ ಹಾಕುತ್ತಿದ್ದ ಹಾರೂಗೇರಿ ಠಾಣೆ ಶಿವಾನಂದ ಕಾರಜೋಳ ಈತನನ್ನು ತಡೆದಿದ್ದಾರೆ. ಯಾಕೆ ಹೆಲ್ಮೆಟ್ ಹಾಾಕಿಲ್ಲ, ಫೈನ್ ಕಟ್ಟು ಎಂದಾಗ, ನಾನು ಸಾಹುಕಾರ್ ಕಡೆಯವನು, ಜಾತಿನಿಂದನೆ ಕೇಸ್ ಹಾಕ್ತೀನಿ ಅಂತಾ ಪಿಎಸ್‌ಐಗೆ ಆವಾಜ್ ಹಾಕಿದ್ದಾರೆ. ಅಲ್ಲದೇ ಬಾಡಿ ಕ್ಯಾಮೆರಾ ಹಾಕಿದ್ದ ಪಿಎಸ್‌ಐ ವೀಡಿಯೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ.

ಇನ್ನು ಸಾರ್ವಜನಿಕರು ಕೂಡ ವಿಠ್ಠಲ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸಾಹುಕಾರ್ ಹೆಸರಲ್ಲಿ ರೂಲ್ಸ್ ಬ್ರೇಕ್ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ, ಸಾಹುಕಾರ್ ಹೆಸರು ಎಲ್ಲೆಡೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿ, ಆಕ್ರೋಶ ಹೊರಹಾಕಿದ್ದಾರೆ.

- Advertisement -

Latest Posts

Don't Miss