Health Tips: ಮೊದಲೆಲ್ಲ ವಯಸ್ಸಾದಂತೆ ಮರೆವಿನ ಖಾಯಿಲೆ ಶುರುವಾಗುತ್ತಿತ್ತು. ಇಂದಿನ ಜೀವಮಾನದಲ್ಲಿ, ಯುವಕರಿಗೆ ಮರೆವು ಶುರುವಾಗಿದೆ. ಹಾಗಾದ್ರೆ ಈ ಮರೆವಿನ ಖಾಯಿಲೆಗೆ ನಾವು ಯಾವ ರೀತಿಯಾಗಿ ಚಿಕಿತ್ಸೆ ಪಡೆಯಬೇಕು. ಇದಕ್ಕೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ವಿವರಿಸಿದ್ದಾರೆ.
ಮನೆಯಿಂದ ಇಲ್ಲೇ ವಾಕಿಂಗ್ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಹಿರಿಯರು, ಮನೆಗೆ ಬರುವಾಗ ದಾರಿ ತಪ್ಪಿರುವ ಸಾಕಷ್ಟು ಉದಾಹರಣೆಗಳಿದೆ. ಅಲ್ಲದೇ, ಮನೆಯಿಂದ ಹೊರಟು, ನಾನು ಎಲ್ಲಿ ಹೋಗಬೇಕಿತ್ತು ಅನ್ನೋದನ್ನೇ ಮರೆಯುವವರು ಇದ್ದಾರೆ. ಕೆಲ ಹಿರಿಯರಿಗೆ ವಯಸ್ಸಾದಂತೆ, ಎದುರಿಗೆ ಬಂದವರು ಯಾರೆಂದು ಮರೆತು ಹೋಗುತ್ತದೆ.
ಈ ರೀತಿ ಮರೆವು ಬರಲು ಕಾರಣ, ಮೆದುಳಿನ ಶಕ್ತಿ ಕಡಿಮೆಯಾಗುವುದು. ಈ ರೀತಿ ಮೆದುಳಿನ ಶಕ್ತಿಯಾಗಲು ಕಾರಣ, ದೈಹಿಕ ಶಕ್ತಿ ಕಡಿಮೆಯಾಗುವುದು. ವಯಸ್ಸಾದ ಬಳಿಕ, ದೈಹಿಕ ಶಕ್ತಿ ಕುಂದಿಹೋಗುವುದು ಸಾಮಾನ್ಯವಾಗಿರುತ್ತದೆ. ಇದೇ ಕಾರಣಕ್ಕೆ ಮರೆವು ಸಂಭವಿಸುತ್ತದೆ. ವಯಸ್ಸಾದಂತೆ ಸೇವಿಸಿದ ಆಹಾರ ಜೀರ್ಣವಾಗುವುದು ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಶಕ್ತಿ ಕಳೆದುಹೋಗುತ್ತದೆ. ಆಗ ದೇಹದಲ್ಲಿರುವ ಶಕ್ತಿಯೂ ಕಡಿಮೆಯಾಗುತ್ತದೆ.
ಇವೆಲ್ಲ ಸಮಸ್ಯೆಗಳಿಂದ ನಿದ್ದೆ ಮಾಡುವುದು ಕಡಿಮೆಯಾಗುತ್ತದೆ. ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ನಿದ್ರಾಹೀನತೆ ಸಮಸ್ಯೆ ಹೆಚ್ಚಾದಂತೆ, ಮಾನಸಿಕ ಶಕ್ತಿ ದೂರವಾಗುತ್ತದೆ. ಈ ರೀತಿಯಾಗಿ ಮರೆವು ಸಂಭವಿಸುತ್ತದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು ಎಂದು ತಿಳಿಯಲು ಈ ವೀಡಿಯೋ ನೋಡಿ.