Health Tips: ಗರ್ಭಧಾರಣೆ ತಡೆಯೋದಕ್ಕೆ ಕಾಂಡೋಮ್ ಬಳಸಲಾಗುತ್ತದೆ. ಆದರೆ ಕಾಂಡೋಮ್ ಬಳಸುವುದರಿಂದ ಕ್ಯಾನ್ಸರ್ ಬರುತ್ತದೆ ಅನ್ನೋ ಸುದ್ದಿ ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವೈದ್ಯರಾದ ಡಾ.ಪ್ರಕಾಶ್ ರಾವ್ ವಿವರಿಸಿದ್ದಾರೆ.
ಡಾ.ಪ್ರಕಾಶ್ ರಾವ್ ಅವರು ಸುಮಾರು 47 ವರ್ಷಗಳಿಂದ ಕುಟುಂಬ ವೈದ್ಯಕೀಯದಲ್ಲಿದ್ದು, ಕಾಂಡೋಮ್ ಧರಿಸೋದ್ಯಾಕೆ..? ನಿಜಕ್ಕೂ ಇದ್ನನು ಧರಿಸಿದರೆ, ಕ್ಯಾನ್ಸರ್ ಬರುತ್ತಾ ಅನ್ನೋ ಬಗ್ಗೆ ವಿವರಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಕಾಂಡೋಮನ್ನು 170 ವರ್ಷಗಳಿಂದ ಉಪಯೋಗಿಸಲಾಗುತ್ತಿದೆ. ಗರ್ಭಧಾರಣೆ ತಡೆಗಟ್ಟಲೆಂದೇ ಕಾಂಡೋಮ್ ಬಳಸಲಾಗುತ್ತದೆ.
ಮೇಲ್ ಕಾಂಡೋಮ್ಸ್ ಮತ್ತು ಫಿಮೇಲ್ ಕಾಂಡೋಮ್ಸ್ ಎರಡೂ ಇದೆ. ಆದರೆ ಮೇಲ್ ಕಾಂಡೋಮ್ಸ್ ಹೆಚ್ಚು ಬಳಕೆಯಾಗುತ್ತದೆ. ಇನ್ನು ಇದರ ಬಳಕೆಯಿಂದ ಯಾವ ಸೈಡ್ ಎಫೆಕ್ಟ್ ಕೂಡ ಆಗೋದಿಲ್ಲಾ ಅಂತಾರೆ ವೈದ್ಯರು. ಅಲ್ಲದೇ ಇದರ ಬಳಕೆಯಿಂದ ಕ್ಯಾನ್ಸರ್ ಕೂಡ ಬರೋದಿಲ್ಲ. ವೈದ್ಯಕೀಯ ವಿಷಯದಲ್ಲಿ ತಪ್ಪು ತಿಳುವಳಿಕೆಗಳ ಹರುಡುತ್ತಿರುವ ಕಾರಣ, ಈ ರೀತಿ ಅಪಪ್ರಚಾರವಾಗುತ್ತದೆ.
ಅಲ್ಲದೇ, ಕಾಂಡೋಮ್ ಬಳಕೆಯಿಂದ ಲೈಂಗಿಕ ರೋಗ, ಹೆಚ್‌ಐವಿಯನ್ನು ತಡೆಗಟ್ಟಬಹುದು. ಕೆಲವರು ಗರ್ಭ ಧರಿಸಬಾರದು ಎಂದು ಕೆಲ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದರಿಂದ ಹಾರ್ಮೋನಲ್ ಇಂಬ್ಯಾಲೆನ್ಸ್ ಆಗುತ್ತದೆ. ಆದರೆ ಕಾಂಡೋಮ್ ಬಳಸಿದರೆ, ಯಾವುದೇ ಅಪಾಯವಿಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.