Friday, November 14, 2025

Latest Posts

ಗಾಜಾದಲ್ಲಿ ಮೂವರು ಒತ್ತೆಯಾಳುಗಳನ್ನು ಹತ್ಯೆಗೈದ ಇಸ್ರೇಲ್ ಸೇನೆ..

- Advertisement -

International News: ಇಸ್ರೇಲ್ ಮತ್ತು ಹಮಾಸ್ ಯುದ್ಧ ಶುರುವಾಗಿ 2 ತಿಂಗಳು ಕಳೆದಿದೆ. ಕಳೆದ ತಿಂಗಳಲ್ಲಿ ಒಂದು ವಾರದ ಕದನ ವಿರಾಮ ಬಿಟ್ಟರೆ, ಈ ಯುದ್ಧ ಮತ್ತೆ ಮುಂದುವರಿದಿದ್ದು, ಪ್ರತಿದಿನ ಸಾವು ನೋವು ಸಂಭವಿಸಿದೆ. ಗಾಜಾದಲ್ಲಿ ನಡೆಯುತ್ತಿರುವ ಹಮಾಸ್- ಇಸ್ರೇಲ್ ಯುದ್ಧದಲ್ಲಿ ಉಗ್ರರೊಂದಿಗೆ ಅಮಾಯಕರು ಸಾವನ್ನಪ್ಪುತ್ತಿದ್ದಾರೆ.

ಇಂದು ಗಾಜಾದಲ್ಲಿ ಇಸ್ರೇಲ್ ಸೇನೆ ಆಕಸ್ಮಿಕವಾಗಿ ಮೂವರು ಒತ್ತೆಯಾಳುಗಳನ್ನು ಹತ್ಯೆಗೈದಿದೆ. ಈ ಮೂವರು ಇಸ್ರೇಲ್ ನವರೇ ಆಗಿದ್ದು, ಈ ಎಡವಟ್ಟಿನ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಮಾತನಾಡಿದ್ದು, ಇದೊಂದು ದೊಡ್ಡ ಪ್ರಮಾದ. ನಮ್ಮ ಸೇನೆಯವರು ಆಕಸ್ಮಿಕವಾಗಿ ನಮ್ಮದೇ ದೇಶದ ಪ್ರಜೆಗಳಿಗೆ ಗುಂಡಿಟ್ಟು ಹತ್ಯೆಗೈದಿದ್ದಾರೆ. ಆದರೆ ಇನ್ನು ಇಂಥ ತಪ್ಪುಗಳು ನಡೆಯುವುದಿಲ್ಲ. ಎಲ್ಲ ಒತ್ತೆಯಾಳುಗಳನ್ನು ನಾವು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತೇವೆ ಎಂದು ಹೇಳಿದ್ದಾರೆ.

ಸಮರ್ ತಲಲ್ಕಾ(22), ಯೋಟಮ್ ಹೈಮ್(28), ಅಲೋನ್ ಶಮ್ರೀಜ್(26) ಮೃತರೆಂದು ಗುರುತಿಸಲಾಗಿದೆ. ಇಸ್ರೇಲ್ ಸೇನೆ ಈ ಮೂವರನ್ನು ಉಗ್ರರೆಂದು ಭಾವಿಸಿ, ಇವರಿಗೆ ತಮ್ಮ ಜೀವಕ್ಕೆ ತೊಂದರೆಯಾಗುತ್ತದೆ ಎಂದು ತಪ್ಪು ತಿಳಿದು, ಗುಂಡಿಕ್ಕಿದ್ದಾರೆಂದು ಹೇಳಲಾಗಿದೆ. ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್‌ನ ಒಂದೂವರೆ ಸಾವಿರ ಜನರನ್ನು ದಾಳಿ ಮಾಡುವ ಮೂಲಕ, ಹತ್ಯೆ ಮಾಡಿತ್ತು. ಅದಕ್ಕೆ ಪ್ರತೀಕಾರವಾಗಿ, ಇಸ್ರೇಲ್ ಗಾಜಾದ ಮೇಲೆ ದಾಳಿ ಮಾಡಿ, 13 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತಿನ್ ನಾಯಗರಿಕರನ್ನು ಮತ್ತು ಹಮಾಸ್ ಉಗ್ರರ ಹತ್ಯೆ ಮಾಡಿತ್ತು. ಇದೀಗ ಯುದ್ಧ ಮುಂದುವರಿದಿದ್ದು, ಈ ಯುದ್ಧಕ್ಕೆ ಅಂತ್ಯ ಯಾವಾಗ ಸಿಗುವುದೋ, ಕಾದು ನೋಡಬೇಕಿದೆ.

ಉಳ್ಳಾಗಡ್ಡಿಮಠ ಬೆಂಬಲಿಗರಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಭರ್ಜರಿ ಸ್ವಾಗತ: ರಜತ್‌ಗೆ ಟಿಕೆಟ್ ನೀಡುವಂತೆ ಮನವಿ

‘ನಡ್ಡಾ ಅವರಿಗೆ ದಮ್ಮು-ತಾಕತ್ ಇದ್ದರೆ, ಆರೋಪಗಳ ತನಿಖೆಗೆ ಸತ್ಯಶೋಧನಾ ಸಮಿತಿಯೊಂದನ್ನು ಕಳಿಸಲಿ’

ರೈತರಿಗೆ ಗುಡ್ ನ್ಯೂಸ್: ಸಹಕಾರಿ ಸಾಲದ ಮೇಲಿನ ಬಡ್ಡಿ ಮನ್ನಾ

- Advertisement -

Latest Posts

Don't Miss