Sunday, September 8, 2024

Latest Posts

ಗಾಜಾ ಮೇಲೆ ಇಸ್ರೇಲ್ ದಾಳಿ: 180ಕ್ಕೂ ಹೆಚ್ಚು ಜನರ ಸಾವು..

- Advertisement -

International News: ಅಕ್ಟೋಬರ್ 7ರಂದು ಇಸ್ರೇಲ್- ಹಮಾಸ್ ಯುದ್ಧ ಶುರುವಾಗಿದ್ದು, ಕಳೆದ 1 ವಾರ ಕದನ ವಿರಾಮ ಏರ್ಪಟ್ಟಿತ್ತು. ಆದರೆ ಹಮಾಸ್ ಒತ್ತೆಯಾಳುಗಳ ಬಿಡುಗಡೆಯ ಪಟ್ಟಿಯನ್ನು ಇಸ್ರೇಲ್‌ಗೆ ಒಪ್ಪಿಸದೇ, ಇಸ್ರೇಲ್ ಮೇಲೆ ರಾಕೇಟ್ ದಾಳಿ ಮಾಡಿ, ಕದನ ವಿರಾಮ ಉಲ್ಲಂಘನೆ ಮಾಡಿದೆ. ಹೀಗಾಗಿ ಯುದ್ಧ ಮತ್ತೆ ಮುಂದುವರಿದಿದ್ದು, ಗಾಜಾ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಈ ವೇಳೆ 180ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಇಸ್ರೇಲ್ ಒತ್ತೆಯಾಳುಗಳನ್ನು ಹಮಾಸ್ ಮತ್ತು ಪ್ಯಾಲೇಸ್ತಿನ್ ಖೈದಿಗಳನ್ನು ಇಸ್ರೇಲ್ ಸೇನೆ ಕದನ ವಿರಾಮದ ವೇಳೆ ರಿಲೀಸ್ ಮಾಡಿತ್ತು. ಬರೀ 4 ದಿನಗಳ ಕದನ ವಿರಾಮ ತೆಗೆದುಕೊಳ್ಳಬೇಕೆಂದು ಈ ಮೊದಲು ನಿರ್ಧಾರವಾಗಿತ್ತು. ಆದರೆ ಕದನ ವಿರಾಮ ವಿಸ್ತರಣೆಗೊಂಡಿದ್ದು, 1 ವಾರಗಳ ಕಾಲ ಮುಂದುವರಿಯಿತು.

ಆದರೆ ಶುಕ್ರವಾರದ ದಿನ ಹಮಾಸ್ ಬಿಡುಗಡೆ ಮಾಡಬೇಕಿದ್ದ ಇಸ್ರೇಲ್ ಒತ್ತೆಯಾಳುಗಳ ಲೀಸ್ಟ್‌ನ್ನು ಬೆಳಿಗ್ಗೆ 7 ಗಂಟೆಯೊಳಗೆ ಇಸ್ರೇಲ್‌ಗೆ ಒಪ್ಪಿಸಿರಲಿಲ್ಲ. ಮತ್ತು ಇಸ್ರೇಲ್ ಮೇಲೆ ರಾಕೇಟ್ ದಾಳಿ ಕೂಡ ನಡೆಸಿತ್ತು. ಈ ಮೂಲಕ ಮತ್ತೆ ಗಾಜಾದಲ್ಲಿ ಯುದ್ಧ ಶುರುವಾಗಿದ್ದು, ಹಲವು ಕಟ್ಟಡಗಳನ್ನು ನಾಶ ಮಾಡಲಾಗಿದೆ. ಅಲ್ಲದೇ ಯುದ್ಧದಲ್ಲಿ 180ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ರಾಕೇಟ್ ದಾಳಿ ಮಾಡಿ ಸಾವಿರಕ್ಕೂ ಹೆಚ್ಚು ಮಂದಿಯ ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಕೂಡ ಗಾಜಾದ ಮೇಲೆ ದಾಳಿ ಮಾಡಿ, ಹಮಾಸ್ ಉಗ್ರರು ಮತ್ತು 13 ಸಾವಿರಕ್ಕೂ ಹೆಚ್ಚು ಪ್ಯಾಲೇಸ್ತಿನ್ ನಾಗರಿಕರ ನಾಶ ಮಾಡಿತ್ತು.

ಚೀನಾದಲ್ಲಿ H9N2 ಆರ್ಭಟ : ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಮುನ್ನೆಚ್ಚರಿಕಾ ಕ್ರಮ

ಇಸ್ರೇಲ್- ಹಮಾಸ್ ನಡುವಿನ ಕದನ ವಿರಾಮ ಅಂತ್ಯ: ಮತ್ತೆ ಶುರುವಾಯ್ತು ಯುದ್ಧ

8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು! ರಷ್ಯಾ ಮಹಿಳೆಯರಿಗೆ ಪುಟಿನ್ ಕರೆ

- Advertisement -

Latest Posts

Don't Miss