Saturday, July 12, 2025

Latest Posts

ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ: ವಿಶ್ವಸಂಸ್ಥೆ, ರೆಡ್ ಕ್ರಾಸ್ ಆತಂಕ

- Advertisement -

International News: ನಿನ್ನೆ ಗಾಜಾದ ಅಲ್ ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲ್ ಸೇನೆ ದಾಳಿ ಮಾಡಿ, ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ, ವಿಶ್ವಸಂಸ್ಥೆ ಮತ್ತು ರೆಡ್‌ಕ್ರಾಸ್ ಆತಂಕ ವ್ಯಕ್ತಪಡಿಸಿದ್ದು, ಆಸ್ಪತ್ರೆ ಯುದ್ಧ ಭೂಮಿಯಲ್ಲ. ಇಲ್ಲಿರುವ ನಾಗರಿಕರು, ರೋಗಿಗಳು ಮತ್ತು ವೈದ್ಯರನ್ನು ರಕ್ಷಿಸಬೇಕು ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್, ನೀವು ಇರಾನ್ ವಿದೇಶಾಂಗ ಸಚಿವರನ್ನು ಭೇಟಿಯಾಗುವ ಮುನ್ನ ಅಥವಾ ನಂತರ ಇದನ್ನು ಟ್ವೀಟ್ ಮಾಡಿದ್ದೀರಾ..? ಉಗ್ರರು ಅಡಿಕೊಳ್ಳಲು ಆಸ್ಪತ್ರೆಯನ್ನು ಬಳಸಿಕೊಳ್ಳುವ ಭಯೋತ್ಪಾದಕ ಸಂಘಟನೆಗೆ ಹಣ ಮತ್ತು ಶಸ್ತ್ರಾಸ್ತ್ರ ನೀಡುವುದನ್ನು ನಿಲ್ಲಿಸುವಂತೆ ನೀವು ಅವರಿಗೆ ಹೇಳುವುದಿಲ್ಲವೇ..? ಎಂದು ಹೇಳುವ ಮೂಲಕ, ಇರಾನ್ ವಿರುದ್ಧ ಇಸ್ರೇಲ್ ವಾಗ್ದಾಳಿ ನಡೆಸಿದೆ.

ಇಸ್ರೇಲ್ ವಿರುದ್ಧವಾಗಿರುವ ಇರಾನ್, ಇಸ್ರೇಲನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಲು, ವಿಶ್ವಸಂಸ್ಥೆಗೆ ಒತ್ತಾಯಿಸಿತ್ತು. ಅಲ್ಲದೇ ಇಸ್ರೇಲ್ ವಿರುದ್ಧ ಒಂದಾಗಲು ಇರಾನ್ ಹಲವು ರಾಷ್ಟ್ರಗಳಿಗೆ ಕರೆ ನೀಡಿತ್ತು. ಏಕೆಂದರೆ, ಇರಾನ್ ದೇಶವು ಇಸ್ರೇಲ್ ವಿರುದ್ಧ ಹೋರಾಡುತ್ತಿರುವ ಹಮಾಸ್‌ಗೆ ಶಸ್ತ್ರಾಸ್ತ್ರ ಮತ್ತು ಮಿಲಿಟರಿ, ಹಣಕಾಸಿನ ನೆರವು ನೀಡುತ್ತಿದೆ.

ಅಲ್ಲದೇ, ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ನಮ್ಮ ಪಾತ್ರವೇನೂ ಇಲ್ಲ. ಆದರೆ ಇದೊಂದು ಯಶಸ್ಸಿನ ಸಂಕೇತವೆಂದು, ಇಸ್ರೇಲ್ ಮೇಲಿನ ದಾಳಿಯನ್ನು, ಇರಾನ್ ಸಂಭ್ರಮಿಸಿತ್ತು. ಇದೀಗ, ವಿಶ್ವಸಂಸ್ಥೆ ಇಸ್ರೇಲ್ ವಿರುದ್ಧ ಆತಂಕ ವ್ಯಕ್ತಪಡಿಸಿದ್ದಕ್ಕೆ, ಇಸ್ರೇಲ್ ಪರೋಕ್ಷವಾಗಿ ಇದೆಲ್ಲ ಇರಾನ್ ಗೆ ಬೆಂಬಲಿಸುವ ಪರಿ ಎಂದು ಆರೋಪಿಸಿದೆ.

ಇಸ್ರೇಲ್ ಸಪೋರ್ಟ್‌ಗೆ ಬಂದ ಅಮೆರಿಕ: ಮಿಡಲ್‌ ಈಸ್ಟ್‌ನಲ್ಲಿ ಪಡೆಗಳ ನಿಯೋಜನೆ ವಿಸ್ತರಣೆ

ಅಲ್ ಶಿಫಾ ಆಸ್ಪತ್ರೆಗೆ ನುಗ್ಗಿದ ಇಸ್ರೇಲ್ ಸೇನೆ: ಶಂಕಿತ ಹಮಾಸ್ ಕಮಾಂಡ್ ಸೆಂಟರ್ ನಾಶ್

ಗಾಜಾದಲ್ಲಿರುವ ಹಮಾಸ್ ಉಗ್ರರ ಸಂಸತ್ತ ಕಟ್ಟಡವನ್ನೇ ವಶಪಡಿಸಿಕೊಂಡ ಇಸ್ರೇಲ್ ಸೇನೆ

- Advertisement -

Latest Posts

Don't Miss