Sunday, March 16, 2025

Latest Posts

ಸಿರಿಯಾದ ಇರಾನ್ ಕಚೇರಿ ಮೇಲೆ ಇಸ್ರೇಲ್ ದಾಳಿ: 11ಮಂದಿಯ ದುರ್ಮರಣ

- Advertisement -

international News: ಸಿರಿಯಾ ಇರಾನ್‌ ಕಚೇರಿ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, 11 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಇರಾನ್ ಇಸ್ರೇಲ್‌ನ ಬದ್ಧ ವೈರಿ. ಅಕ್ಟೋಬರ್‌ನಿಂದ ಶುರುವಾಗಿರುವ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಇರಾನ್ ಹಮಾಸ್ ಉಗ್ರರಿಗೆ ಸಪೋರ್ಟ್ ಮಾಡಿ, ಇಸ್ರೇಲ್‌ನನ್ನು ಬಗ್ಗುಬಡಿಯಲು ಪ್ರಯತ್ನಿಸುತ್ತಿದೆ. ಅಲ್ಲದೇ, ಇರಾನ್ ಹಮಾಸ್ ಉಗ್ರರಿಗೆ ಯುದ್ಧ ಸಾಮಾಗ್ರಿಗಳನ್ನು ಸರಬರಾಜು ಮಾಡುತ್ತಿದೆ. ಹಾಗಾಗಿ ಇರಾನ್ ಮಿಲಿಟರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸಿರಿಯಾದಲ್ಲಿರುವ ಇರಾನ್ ಕಚೇರಿ ಮೇಲೆ ದಾಳಿ ಮಾಡಿದೆ. ದಾಳಿಯಲ್ಲಿ ಪೊಲೀಸ್‌ ಅಧಿಕಾರಿಗಳು ಗಾಯಗೊಂಡರೆ, ಹಲವರು ಮೃತಪಟ್ಟಿದ್ದಾರೆ.

ದಾಳಿಯಿಂದ ಪೂರ್ತಿ ಇರಾನ್ ಕಚೇರಿ ಧ್ವಂಸವಾಗಿದೆ. 8 ಇರಾನ್ ಪ್ರಜೆಗಳು, ಇಬ್ಬರು ಸಿರಿಯಾ ಪ್ರಜೆಗಳು, ಓರ್ವ ಲೆಬನಿಸ್, ಮೃತಪಟ್ಟಿದ್ದಾರೆ. 5 ಇರಾನ್ ಸೇನಾಧಿಕಾರಿಗಳು ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ 11 ಜನರ ಶವ ಸಿಕ್ಕಿದ್ದು, ಕಟ್ಟದ ತೆರವುಗೊಳಿಸುವ ವೇಳೆ, ಇನ್ನಷ್ಟು ಜನರ ಶವ ಸಿಗುವ ಸಾಧ್ಯತೆ ಇದೆ. ಅಲ್ಲದೇ, ಸಾವಿನ ಸಂಖ್ಯೆಯೂ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇಸ್ರೇಲ್‌ನಲ್ಲಿ ಅಲ್ ಜಜೀರಾ ವಾಹಿನಿ ನಿಷೇಧ: ಬೆಂಜಮಿನ್ ನೆತನ್ಯಾಹು

ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ದಿ ಪಡಿಸೋಣ: ಸಂಸದೆ ಸುಮಲತಾ

ಅಡ್ಡದಾರಿಯಲ್ಲಿ ಚುನಾವಣೆ ಎದುರಿಸಲು ಹೋದರೆ, ಸೋಲು ಕಟ್ಟಿಟ್ಟ ಬುತ್ತಿ: ಅಮಿತ್ ಶಾ ವಿರುದ್ಧ ಸಿಎಂ ವಾಗ್ದಾಳಿ

- Advertisement -

Latest Posts

Don't Miss