International News: ಅಕ್ಟೋಬರ್ 7ಕ್ಕೆ ಶುರುವಾಗಿದ್ದ ಇಸ್ರೇಲ್- ಹಮಾಸ್ ಯುದ್ಧದಲ್ಲಿ ನಾಲ್ಕೈದು ದಿನಗಳ ಕಾಲ ಕದನ ವಿರಾಮವಿತ್ತು. ಇದೀಗ ಕದನ ವಿರಾಮ ಮುಗಿದಿದ್ದು, ಗಾಜಾದಲ್ಲಿ ಮತ್ತೆ ಯುದ್ಧ ಶುರುವಾಗಿದೆ.
ಮೊದಲು ಇಸ್ರೇಲ್ ಮತ್ತು ಹಮಾಸ್ ಯುದ್ಧದ ನಡುವೆ ನಾಲ್ಕೈದು ದಿನ ಕದನ ವಿರಾಮವೆಂದು ಹೇಳಲಾಗಿತ್ತು. ಅದು ವಿಸ್ತರಣೆಗೊಂಡು ಒಂದು ವಾರಗಳ ಕಾಲ ಕದನ ವಿರಾಮ ಏರ್ಪಟ್ಟಿತ್ತು. ಇದೀಗ ಕದನ ವಿರಾಮ ಮುಗಿದಿದ್ದು, ಗಾಜಾದಲ್ಲಿ ಮತ್ತೆ ಯುದ್ಧ ಆರಂಭಿಸಲಾಗಿದೆ.
ಇದಕ್ಕೆ ಕಾರಣವೇನೆಂದರೆ, ಹಮಾಸ್ ಬಿಡುಗಡೆ ಮಾಡಬೇಕಾಗಿದ್ದ ಒತ್ತೆಯಾಳುಗಳ ಪಟ್ಟಿಯನ್ನು ಒಪ್ಪಿಸದೇ, ಒಪ್ಪಂದದ ಉಲ್ಲಂಘನೆ ಮಾಡಿದೆ. ಮತ್ತು ಇಸ್ರೇಲ್ ಮೇಲೆ ರಾಕೇಟ್ ದಾಳಿ ನಡೆಸಿದೆಯಂತೆ. ಈ ಕಾರಣಕ್ಕೆ ಇಸ್ರೇಲ್ ಕೂಡ ಕದನ ವಿರಾಮ ಅಂತ್ಯಗೊಳಿಸಿ, ಹೋರಾಟಕ್ಕಿಳಿದಿದೆ.
ಅಕ್ಟೋಬರ್ 7ಕ್ಕೆ ಇಸ್ರೇಲ್ ಮೇಲೆ ಹಮಾಸ್ ರಾಕೇಟ್ ದಾಳಿ ಮಾಡಿ, ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೊಂದಿತ್ತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್, ಗಾಜಾದ ಮೇಲೆ ದಾಳಿ ಮಾಡಿ, ಹಮಾಸ್ ಉಗ್ರರು ಸೇರಿದಂತೆ, 13 ಸಾವಿರಕ್ಕೂ ಹೆಚ್ಚು ಪ್ಯಾಲೇಸ್ತಿನ್ ನಾಗರಿಕರನ್ನು ಇಸ್ರೇಲ್ ಕೊಂದು ಹಾಕಿತ್ತು. ಈ ರೀತಿಯಾಗಿ ಶುರುವಾಗಿದ್ದ ಯುದ್ಧ ಇನ್ನೂ ಮುಂದುವರೆದಿದೆ.
8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು! ರಷ್ಯಾ ಮಹಿಳೆಯರಿಗೆ ಪುಟಿನ್ ಕರೆ
ಚೀನಾದಲ್ಲಿ H9N2 ಆರ್ಭಟ : ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಮುನ್ನೆಚ್ಚರಿಕಾ ಕ್ರಮ