Saturday, June 21, 2025

Latest Posts

Israel-Hamas : ಬಿಸ್ಮಿಲ್ಲಾಎಂದರೆ ಮಾತ್ರ ನೀರು…!

- Advertisement -

International News : ಒಂದು ಕೈಯಲ್ಲಿ ಹಸುಗೂಸು ಮತ್ತೊಂದು ಕೈಯಲ್ಲಿ ಎಕೆ47. ಒಂದೆಡೆ ಮಕ್ಕಳು ಅಲುತ್ತಿದ್ದರೆ ಮತ್ತೊಂದೆಡೆ ರಕ್ಕಸರ ಅಟ್ಟಹಾಸದ ನಗು ಥೇಟ್ ಪೈಶಾಚಿಕ ಕೃತ್ಯದ ವೀಡಿಯೋ ಇದೀಗ ವೈರಲ್ ಆಗಿದೆ. ಹೌದು ಹಮಾಸ್ ಉಗ್ರರ ಅಟ್ಟಹಾಸದ ಮತ್ತೊಂದು ವೀಡಿಯೋ ಇದೀಗ ವೈರಲ್ ಆಗಿದೆ.

ಇಸ್ರೇಲ್‌ ಮೇಲೆ ದಾಳಿ ಮಾಡಿ ಹಸುಗೂಸುಗಳು ಸೇರಿ ಅನೇಕ ಮಕ್ಕಳನ್ನು ಸೆರೆಯಾಗಿಸಿದ ವೀಡಿಯೋ ಒಂದನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಇದರಲ್ಲಿ 1 ಕೈಯಲ್ಲಿ ಹಸುಗೂಸು, ಮತ್ತೊಂದರಲ್ಲಿ ಎಕೆ 47 ಹಿಡಿದಿರುವ ಉಗ್ರರು ಪೈಶಾಚಿಕವಾಗಿ ವರ್ತಿಸುವುದು ಕಂಡುಬಂದಿದೆ. ಈ ವಿಡಿಯೋದ ಕೊನೆಯಲ್ಲಿ ಹಮಾಸ್‌ ಉಗ್ರನೊಬ್ಬ ಬಾಯಾರಿದ ಒಂದು ಮಗುವಿಗೆ ಕುಡಿಯಲು ನೀರು ಕೊಡುವ ಮುನ್ನ ‘ಬಿಸ್ಮಿಲ್ಲಾ’ ಎನ್ನುವಂತೆ ಹೇಳುತ್ತಾನೆ.
ಪಾಪ ಏನೂ ಅರಿಯದ ಮಗು ಬಿಸ್ಮಿಲ್ಲಾ ಎನ್ನುತ್ತದೆ. ಬಳಿಕ ಆತ ನೀರು ಕೊಡುತ್ತಾನೆ. ಈ ದೃಶ್ಯ ನಿಜಕ್ಕೂ ಕರುಳು ಹಿಂಡುವಂತಿದೆ.

ಇನ್ನೊಂದೆಡೆ ಎರಡು ಶಿಶುಗಳನ್ನು ಹಮಾಸ್‌ ಉಗ್ರನೊಬ್ಬ ಕೈಯಲ್ಲಿ ಎತ್ತಿಕೊಂಡಿದ್ದಾನೆ. ತಮ್ಮ ಪೋಷಕರಿಗಾಗಿ ಅಳುತ್ತಿರುವ ಮಕ್ಕಳ ಸುತ್ತ ಎಕೆ-47 ಗನ್‌ ಹಿಡಿದು ನಿಂತಿರುವ ಉಗ್ರರ ಈ ವಿಡಿಯೋ ವೈರಲ್‌ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

30 ಸೆಕೆಂಡಿನ ಈ ವಿಡಿಯೋದಲ್ಲಿ ಅಳುತ್ತಿರುವ ಮಕ್ಕಳನ್ನು ಸಮಾಧಾನಪಡಿಸಲು ಉಗ್ರರು ಯತ್ನಿಸುತ್ತಿರುವುದು, ತೊಟ್ಟಿಲಲ್ಲಿ ಮಗುವೊಂದನ್ನು ಮಲಗಿಸುತ್ತಿರುವುದು, ಗಾಯಗೊಂಡಿರುವ ಬಾಲಕನೋರ್ವನ ಕಾಲಿಗೆ ಉಗ್ರರು ಬ್ಯಾಂಡೇಜ್‌ ಸುತ್ತುತ್ತಿರುವುದು ಕಂಡು ಬಂದಿದೆ.

ಈ ವಿಡಿಯೋವನ್ನು ಹಮಾಸ್‌ ಮೂಲಗಳೇ ಮೊದಲು ಬಿಡುಗಡೆ ಮಾಡಿಕೊಂಡಿದ್ದು, ಬಳಿಕ ಇಸ್ರೇಲ್‌ ಪಡೆಯು ಹಮಾಸ್‌ ಉಗ್ರರ ಕ್ರೌರ್ಯ ತೋರಿಸಲು ಇದನ್ನು ಹಂಚಿಕೊಂಡಿದೆ. ಈ ಬಗ್ಗೆ ಟ್ವೀಟ್‌ ಮಾಡಿದ ಇಸ್ರೇಲ್‌ ಪಡೆ ‘ನೀವು ಅವರ ಗಾಯಗಳನ್ನು ನೋಡಬಹುದು. ಅವರ ಅಳುವನ್ನು ಕೇಳಬಹುದು. ಹಮಾಸ್‌ನಿಂದ ತಮ್ಮದೇ ಸ್ವಂತ ಮನೆಗಳಲ್ಲಿ ಒತ್ತೆಯಾಳಾಗಿರುವ ಮಕ್ಕಳು ಭಯದಿಂದ ನಡುಗುತ್ತಿದ್ದಾರೆ. ಅಲ್ಲದೇ ಮಕ್ಕಳ ಪೋಷಕರು ಪಕ್ಕದ ಕೋಣೆಗಳಲ್ಲಿ ಹೆಣವಾಗಿ ಬಿದ್ದಿರುತ್ತಾರೆ. ಇವರೇ ನಾವು ಸೋಲಿಸಲಿರುವ ಉಗ್ರರು’ ಎಂದಿದೆ.

ಈ ನಡುವೆ ಗಾಜಾದಲ್ಲಿ ಹಮಾಸ್‌ ಅಲ್ಲಿನ ನಾಗರಿಕರನ್ನು ಮಾನವ ತಡೆಗೋಡೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಇಸ್ರೇಲ್‌ ಆರೋಪಿಸಿದೆ. ತಾನು ಹಮಾಸ್‌ ಉಗ್ರರ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಆ ಉಗ್ರರು ತಮಗೆ ಅಡ್ಡಲಾಗಿ ಜನರನ್ನು ಎದುರು ನಿಲ್ಲಿಸಿಕೊಂಡು ಬಚಾವಾಗಲು ಪ್ರಯತ್ನಿಸುತ್ತಿದ್ದಾರೆ ಎಂದಿದೆ. ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ…………………

Israel : ಕಲಿಯುಗದ ಒನಕೆ ಓಬವ್ವ…! : ಇಸ್ರೇಲ್ ನಲ್ಲಿ ಪುನರುಚ್ಚಾರ ಒನಕೆ ಓಬವ್ವ ಕಥೆ..!

ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ನಿಧನ ಹೊಂದಿದ್ದಾರೆ ಎಂದು ಸುಳ್ಳ ಸುದ್ದಿಗೆ ಸ್ಪಷ್ಟನೆ ನೀಡಿದ ಪುತ್ರಿ ನಂದನಾ ದೇವ್ ಸೇನ್

ನೈಜೀರಿಯಾದ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ: 37 ಜನರು ಸಾವು..!

- Advertisement -

Latest Posts

Don't Miss