Thursday, November 7, 2024

Latest Posts

ಇಸ್ರೇಲ್- ಹಮಾಸ್ ಯುದ್ಧ: ಸಾವು- ಬದುಕಿನ ಮಧ್ಯೆ 39 ಶಿಶುಗಳ ಹೋರಾಟ

- Advertisement -

International News: ಹಮಾಸ್ ಉಗ್ರರ ಟಾರ್ಗೇಟ್ ಆಗಿರುವ ಗಾಜಾದಲ್ಲಿ ಯುದ್ಧವಾಗಿ, ಹಲವು ಸಾವು ನೋವು ಸಂಭವಿಸುತ್ತಿದೆ. ಅಲ್ಲಿನ ಜನರ ಸ್ಥಿತಿ ಚಿಂತಾಜನಕವಾಗಿದ್ದರೆ, ಅಲ್ಲಿನ ಆಸ್ಪತ್ರೆಯ ಸ್ಥಿತಿ ಹೀನಾಯವಾಗಿದೆ. ಗಾಜಾದ ಆಸ್ಪತ್ರೆಯೊಂದರಲ್ಲಿ 39 ಶಿಶುಗಳು ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಗಾಜಾದ ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕೆ ನಿಲ್ಲಿಸಲಾಗಿದೆ. ಹೀಗಾಗಿ ರೋಗಿಗಳಿಗೆ ಆಪರೇಷನ್ ಮಾಡುವುದನ್ನೇ ನಿಲ್ಲಿಸಲಾಗಿದೆ. ಈ ಕಾರಣಕ್ಕಾಗಿ ಒಂದು ಪುಟ್ಟ ಕಂದಮ್ಮ ಸೇರಿ 6 ರೋಗಿಗಳು ಸಾವನ್ನಪ್ಪಿದ್ದಾರೆ. ಇಷ್ಟೇ ಅಲ್ಲದೇ, ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿಯಾದ ಕಾರಣ, ಒಬ್ಬರು ಸಾವನ್ನಪ್ಪಿದ್ದಾರೆ. ಈ ರೀತಿಯ ಸಾವು ನೋವು ಇಲ್ಲಿ ಸಾಮಾನ್ಯಾವಾಗಿ ಹೋಗಿದೆ. ಹಾಗಾಗಿ ಇಲ್ಲಿರುವ ವೈದ್ಯರು, ನರ್ಸ್‌ಗಳು, ರೋಗಿಗಳಿಗೆ ತಾವು ಸಾಯುವುದು ಖಚಿತ ಎಂದು ಗೊತ್ತಿದ್ದು, ಅವರೆಲ್ಲ ಅದೇ ಹೆದರಿಕೆಯಲ್ಲಿಯೇ ಬದುಕುತ್ತಿದ್ದಾರೆ.

ಗಾಜಾದ ಶಿಫಾ ಆಸ್ಪತ್ರೆಯ ಸುತ್ತಲೂ ಹಮಾಸ್ ಉಗ್ರರು ನೆಲೆಸಿದ್ದು, ಅಲ್ಲೇ ಸುರಂಗ ಮಾರ್ಗ ಕೊರೆದು, ಶಸ್ತ್ರಾಸ್ತ್ರಗಳನ್ನು, ಟ್ಯಾಂಕರ್‌ಗಳನ್ನು ಇಟ್ಟಿದ್ದಾರೆಂದು ಶಂಕಿಸಿ, ಇಸ್ರೇಲ್ ಸೇನೆ ಆಸ್ಪತ್ರೆಯನ್ನೇ ವಶಪಡಿಸಿಕೊಂಡಿದೆ. ಹಾಗಾಗಿ ಆ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಯನ್ನೇ ನಿಲ್ಲಿಸಲಾಗಿದೆ.  ಇನ್ನು ಶಿಫಾ ಆಸ್ಪತ್ರೆಯಲ್ಲಿ ಇನ್‌ಕ್ಯೂಬೆಟರ್‌ನಲ್ಲಿ 39 ಮಕ್ಕಳನ್ನು ಇರಿಸಲಾಗಿದ್ದು, ಈ ಮಕ್ಕಳು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ವಿದ್ಯುತ್ ಪೂರೈಕೆ ಸರಿಯಾಗಿ ಆಗದಿದ್ದಲ್ಲಿ, ಈ ಮಕ್ಕಳ ಪ್ರಾಣಕ್ಕೆ ಕುತ್ತು ಬರುತ್ತದೆ.

ಇನ್ನು ಭಯಾನಕ ವಿಚಾರ ಅಂದ್ರೆ, ಇಲ್ಲಿನ ಆಸ್ಪತ್ರೆಯಲ್ಲಿ ಸರಿಯಾಗಿ ಆಹಾರ ಸಿಗುತ್ತಿಲ್ಲ, ನೀರು ಬರುತ್ತಿಲ್ಲ. ವಿದ್ಯುತ್, ಇಂಟರ್‌ನೆಟ್ ಯಾವುದೂ ಇಲ್ಲ. ಆಸ್ಪತ್ರೆಯಲ್ಲಿ ಇರುವವರೆಲ್ಲ, ಜಗತ್ತಿನಿಂದಲೇ ಬೇರ್ಪಟ್ಟರಂತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಹಮಾಸ್ ಭಯೋತ್ಪಾದಕರ ಮೇಲೆ ದಾಳಿ ಮಾಡಿದ ಇಸ್ರೇಲ್, ರಾಕೇಟ್ ಧ್ವಂಸ, ಹಲವರ ಸಾವು

ಗಾಜಾದಲ್ಲಿ ಯುದ್ಧವಾಗುತ್ತಿದ್ದರೂ, 57 ಮುಸ್ಲಿಂ ರಾಷ್ಟ್ರಗಳ ಶೃಂಗಸಭೆಗೆ ಕರೆ..

ಗಾಜಾದಲ್ಲಿ ಮಕ್ಕಳ ದುರ್ಮರಣ, ಆಹಾರ ನೀರಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕಂದಮ್ಮಗಳು

- Advertisement -

Latest Posts

Don't Miss