Friday, October 18, 2024

Latest Posts

ಹಮಾಸ್ ಉಗ್ರರು ಬಚ್ಚಿಟ್ಟುಕೊಂಡಿದ್ದ ಸುರಂಗಕ್ಕೆ ಸಮುದ್ರ ನೀರು ಹರಿಸಿದ ಇಸ್ರೇಲ್

- Advertisement -

International News: ಅಕ್ಟೋಬರ್ 7ಕ್ಕೆ ಶುರುವಾದ ಹಮಾಸ್- ಇಸ್ರೇಲ್ ಯುದ್ಧಕ್ಕೆ ಹಿಂದೆಮ್ಮೊ 1 ವಾರದ ವಿರಾಮ ಸಿಕ್ಕಿತ್ತು. ಅದಾದ ಬಳಿಕ ಮತ್ತೆ ಯುದ್ಧ ಮುಂದುವರಿದಿದ್ದು, ಹಮಾಸ್ ಉಗ್ರರು ಬರೀ ಗಾಜಾದಲ್ಲಷ್ಟೇ ಅಲ್ಲ. ಪ್ರಪಂಚದ ಯಾವ ಮೂಲೆಯಲ್ಲಿದ್ದರೂ, ಅವರನ್ನು ಹುಡುಕಿಕೊಂಡು ಹೋಗಿ ಕೊಲ್ಲುತ್ತೇವೆ ಎಂದು ಇಸ್ರೇಲ್ ಪ್ರಧಾನಿ, ನೇತನ್ಯಾಹು ಹೇಳಿದ್ದರು.

ಇದೀಗ ಗಾಜಾದಲ್ಲಿರುವ ಹಮಾಸ್ ಉಗ್ರರ ಮೇಲೆ ಇಸ್ರೇಲ್ ಯುದ್ಧ ಸಾರಿದ್ದು, ಉಗ್ರರು ಬಚ್ಚಿಟ್ಟುಕೊಳ್ಳುತ್ತಿದ್ದ ಸುರಂಗಕ್ಕೆ ಸಮುದ್ರ ನೀರು ಹರಿಸಿದ್ದಾರೆ. ಈ ಮೂಲಕ ಅವಿತಿದ್ದ ಉಗ್ರರನ್ನ ಹೊರತೆಗೆದು, ಕೊಲ್ಲುವ ಉಪಾಯ ಮಾಡಿದ್ದಾರೆ. ಈ ಮೊದಲೇ ಹೇಳಿದಂತೆ ಹಮಾಸ್ ಉಗ್ರರು, ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಡಲು ಮತ್ತು ತಾವು ಬಚ್ಚಿಟ್ಟುಕೊಳ್ಳಲು ಗಾಜಾದಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸಿದ್ದರು.

ಶಾಲೆಗೆ ಮತ್ತು ತಾವಿರುವ ಜಾಗಕ್ಕೆ, ಆಸ್ಪತ್ರೆಗಳಿಗೆ ಸೇರುವಂತೆ ಸುರಂಗವನ್ನು ನಿರ್ಮಿಸಿಕೊಂಡಿದ್ದರು. ಈ ಮೂಲಕ ದಾಳಿ ನಡೆಸುವುದು, ರಾಕೇಟ್ ದಾಳಿ ಮಾಡುವುದೆಲ್ಲ ಮಾಡುತ್ತಿದ್ದರು. ಈ ವಿಷಯ ತಿಳಿದ ಬಳಿಕ, ಸುರಂಗಕ್ಕೆ ನುಗ್ಗಿದ್ದ ಇಸ್ರೇಲ್ ಪಡೆ, ಹಮಾಸ್ ಉಗ್ರರ ಶಸ್ತ್ರಾಸ್ತ್ರ ರಾಕೇಟ್ ಮತ್ತು ಹಲವು ವಸ್ತುಗಳನ್ನು ವಶಪಡಿಸಿಕೊಂಡಿತ್ತು.

ಅಲ್ಲದೇ ಹಲವು ಹಮಾಸ್ ಉಗ್ರರನ್ನು ಕೊಂದಿದ್ದು, ಕೆಲವರನ್ನು ವಶಕ್ಕೆ ಪಡೆದಿತ್ತು. ಆದರೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಮಾಸ್ ಉಗ್ರರು, ಸುರಂಗದಲ್ಲಿ ಅಡಗಿ ಕೂತಿರುವ ಮಾಹಿತಿ ಸಿಕ್ಕಿತ್ತು. ಈ ಕಾರಣಕ್ಕೆ ಹಲವು ದಿನಗಳ ಮುನ್ನವೇ, ಇಸ್ರೇಲ್ ಪಡೆ, ಈ ಸುರಂಗಗಳಿಗೆ ನೀರು ಸುರಿಸುವ ಉಪಾಯ ಮಾಡಿತ್ತು. ಇದೀಗ ಹಾಗೇ ಮಾಡಿದ್ದು, ಸುರಂಗಕ್ಕೆ ಸಮುದ್ರದ ನೀರು ಸುರಿಸಿದೆ ಎಂದು ಅಮೆರಿಕದ ಕೆಲ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಈ ಕೆಲಸದಿಂದ ಗಾಜಾದಲ್ಲಿ, ಕುಡಿಯುವ ನೀರಿಗೂ ಹಾಹಾಕಾರ ಬರುವ ಸಾಧ್ಯತೆ ಇದೆ ಎಂದು ಕೂಡ ಕಳವಳ ವ್ಯಕ್ತವಾಗಿದೆ.

ಹೆಜ್ಜಾಲ-ಚಾಮರಾಜನಗರ ಹೊಸ ರೈಲು ಮಾರ್ಗದ ಸದ್ಯದ ವಸ್ತುಸ್ಥಿತಿಯ ಬಗ್ಗೆ ಪ್ರಶ್ನಿಸಿದ ಸಂಸದೆ ಸುಮಲತಾ

ಇದೇ ದಿನ ಸಂಸತ್‌ ಮೇಲೆ ದಾಳಿ ನಡೆಸುುತ್ತೇನೆಂದು ಹೇಳಿದ್ದ ಖಲಿಸ್ತಾನಿ ಉಗ್ರ..

ಮಧ್ಯಪ್ರದೇಶದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಡಾ.ಮೋಹನ್ ಯಾದವ್

- Advertisement -

Latest Posts

Don't Miss