International News : ಪ್ರಧಾನಿ ಮೋದಿಯವರನ್ನು ಇಸ್ರೇಲ್‌ನ ಕೈಗೊಂಬೆ ಎಂದು ಮಾಲ್ಡೀವ್ಸ್ ಸಚಿವರು ಹೀಯಾಳಿಸಿದ್ದಕ್ಕೆ, ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅಲ್ಲದೇ, ಎಷ್ಟೋ ಭಾರತೀಯರು ಮಾಲ್ಡೀವ್ಸ್ ಫ್ಲೈಟ್, ರೂಮ್ ಬುಕಿಂಗ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಕೋಟಿ ಕೋಟಿ ಲಾಸ್ ಆಗಿದೆ. ಇದೀಗ ಪ್ಯಾಲೆಸ್ತಿನ್ ಮತ್ತು ಇಸ್ರೇಲ್ ಯುದ್ಧದ ವೇಳೆ ಇಸ್ರೇಲ್ ಪರ ಇದ್ದ ಭಾರತಕ್ಕೂ ತಾನು ಸಾಥ್ ಕೊಡುತ್ತೇನೆ ಎಂದು, ಇಸ್ರೇಲ್ ಮುಂದೆ ಬಂದಿದೆ.
ಲಕ್ಷದ್ವೀಪದ ಅಭಿವೃದ್ಧಿಗಾಗಿ ಇಸ್ರೇಲ್ ಕೂಡ ನಿಮ್ಮೊಂದಿಗಿದೆ ಎಂದು ಭಾರತಕ್ಕೆ ತಿಳಿಸಿದೆ. ಈ ಮೂಲಕ ಇಸ್ರೇಲ್ ವಿರುದ್ಧ ಮೋದಿಗೆ ಟಾಂಗ್ ಕೊಡ್ಡಿದ್ದ ಮಾಲ್ಡೀವ್ಸ್‌ಗೆ ಟಕ್ಕರ್ ಕೊಡಲು, ಇಸ್ರೇಲ್ ತಯಾರಾಗಿದೆ. ಲಕ್ಷದ್ವೀಪದ ಸಮುದ್ರವನ್ನು ಇನ್ನಷ್ಟು ಕ್ಲೀನ್ ಮಾಡಿ, ಅದರಲ್ಲಿ ಇನ್ನಷ್ಟು ವಾಟರ್ ಆ್ಯಕ್ಟಿವಿಟೀಸ್ ಮಾಡಲು ಅನುಕೂಲವಾಗುವಂತೆ ಮಾಡಬೇಕು. ಈ ಕೆಲಸಕ್ಕಾಗಿ ನಾವು ನಾಳೆಯೇ ತಯಾರಾಗಿದ್ದೇವೆ ಎನ್ನುವ ಮೂಲಕ ಇಸ್ರೇಲ್, ಭಾರತದ ಪರ ಬ್ಯಾಟಿಂಗ್ ಮಾಡಿದೆ.
ಒಟ್ಟಾರೆಯಾಗಿ ಮೋದಿಗಿಂತ ಪವರ್ ಫುಲ್ ಅಂಬಾಸೀಡರ್ ಬೇರೆ ಬೇಕಾ ಅನ್ನೋದು ಮೋದಿ ಅಭಿಮಾನಿಗಳ ಮಾತು. ಮೋದಿಯ ಒಂದು ಫೋಟೋ, ವೀಡಿಯೋ ಲಕ್ಷದ್ವೀಪದ ಪ್ರವಾಸೋದ್ಯಮದ ಲಕ್ ಚೇಂಜ್ ಮಾಡಿದೆ. ಮಾಲ್ಡೀವ್ಸ್ ಪ್ರವಾಸೋದ್ಯಮವನ್ನು ತಲೆಕೆಳಗಾಗಿಸಿದೆ. ಈ ಬಗ್ಗೆ ಚರ್ಚಿಸಲು ಮಾಲ್ಡೀವ್ಸ್ ಅಧ್ಯಕ್ಷರೇ ಭಾರತಕ್ಕೆ ಬರಲಿದ್ದಾರೆಂಬ ಸುದ್ದಿ ಇದೆ.