International News: ಹಮಾಸ್ ಉಗ್ರರು ತಮ್ಮ ಅಡಗು ತಾಣವಾಗಿಸಿಕೊಂಡಿದ್ದ ಅಲ್ ಶಿಫಾ ಆಸ್ಪತ್ರೆಯ ಸುತ್ತಲು, ಇಸ್ರೇಲ್ ಸೇನೆ ಹಲವು ದಿನಗಳಲ್ಲಿ ಕಾಯುತ್ತಿದ್ದು, ಇಂದು ದಾಳಿ ನಡೆಸಿ, ಶಂಕಿತ ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿದೆ.
ಗಾಜಾದ ಈ ಆಸ್ಪತ್ರೆಯಲ್ಲಿ 39ಕ್ಕೂ ಹೆಚ್ಚು ಶಿಶುಗಳು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಏಕೆಂದರೆ ಅವುಗಳ ಚಿಕಿತ್ಸೆಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲವೆಂದು, ನಾವು ಈಗಾಗಲೇ ನಿಮಗೆ ಸುದ್ದಿ ಕೊಟ್ಟಿದ್ದೆವು. ಅದೇ ಆಸ್ಪತ್ರೆಯಲ್ಲಿ ಉಗ್ರರು, ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು, ಅಡಗು ತಾಣವಾಗಿಸಿಕೊಂಡಿದ್ದರು.
ಇದನ್ನು ಮೊದಲೇ ಅರಿತಿನ ಇಸ್ರೇಲ್ ಸೇನೆ ಕೂಡ, ಆಸ್ಪತ್ರೆಯನ್ನು ಸುತ್ತುವರಿದು, ದಾಳಿ ನಡೆಸುವ ನಿರ್ಧಾರ ಮಾಡಿತ್ತು. ಹಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಇಸ್ರೇಲ್ ಸೇನೆ, ಇಂದು ಆಸ್ಪತ್ರೆಯ ಒಳನುಗ್ಗಿ ವೈಮಾನಿಕ ದಾಳಿ ನಡೆಸಿದೆ. ಅಲ್ಲಿದ್ದ ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿದೆ.
ಇನ್ನು ಈ ಆಸ್ಪತ್ರೆಯ ಸ್ಥಿತಿ ಅದೆಷ್ಟು ಕೆಟ್ಟದಾಗಿತ್ತೆಂದರೆ, ಇಲ್ಲಿ ಇನ್‌ಕ್ಯೂಬೇಟರ್‌ನಲ್ಲಿ ವಿದ್ಯುತ್ ಸರಬರಾಜಾಗದೇ, 7 ನವಜಾತ ಶಿಶುಗಳು ಸಾವನ್ನಪ್ಪಿದ್ದು, ಇದರೊಂದಿಗೆ ಹಲವು ರೋಗಿಗಳ ಶವಗಳು, ಆಸ್ಪತ್ರೆಯ ಹಲವು ಭಾಗಗಳಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು. ಈ ಕಾರಣಕ್ಕೆ ಇಡೀ ಆಸ್ಪತ್ರೆ, ರಕ್ತಸಿಕ್ತವಾಗಿ, ಕೊಳೆತ ಶವಗಳ ವಾಸನೆ ಬರುತ್ತಿತ್ತು ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
1000ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಹಮಾಸ್ ಕಮಾಂಡರ್ ಹತ್ಯೆ..
ಗಾಜಾದ ಮಕ್ಕಳ ಆಸ್ಪತ್ರೆಯಲ್ಲಿ ಸುರಂಗ ನಿರ್ಮಿಸಿದ ಉಗ್ರರು: ವೀಡಿಯೋ ರಿಲೀಸ್ ಮಾಡಿದ ಇಸ್ರೇಲ್ ಸೇನೆ