International News: ಲಷ್ಕರ್ ಎ ತೋಯ್ಬಾ ಎಂಬ ಉಗ್ರ ಸಂಘಟನೆಯನ್ನು ನಿಷೇಧ ಮಾಡಲು, ಭಾರತ ಮನವಿ ಮಾಡದಿದ್ದರೂ ಕೂಡ, ಭಾರತಕ್ಕೆ ಬೆಂಬಲಿಸಿರುವ ಇಸ್ರೇಲ್, ತನ್ನ ದೇಶದಲ್ಲಿ ಪಾಕ ಮೂಲದ, ಲಷ್ಕರ್ ಉಗ್ರ ಸಂಘಟನೆಯನ್ನು ನಿಷೇಧ ಮಾಡಿದೆ.
ಇಸ್ರೇಲ್ ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯ ಹಲವು ತಿಂಗಳಿನಿಂದ ತಮ್ಮ ದೇಶದಲ್ಲಿ ಯಾವ ಯಾವ ಉಗ್ರ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂಬ ಲೀಸ್ಟ್ ತಯಾರಿಸುತ್ತಿತ್ತಂತೆ. ಆ ಲೀಸ್ಟ್‌ನಲ್ಲಿ ಇದೀಗ ಲಷ್ಕರ್ ಸಂಘಟನೆ ಸೇರಿದೆ. 2008ರಲ್ಲಿ ಈ ಉಗ್ರ ಸಂಘಟನೆ ಮುಂಬೈ ತಾಜ್, ಓಬೆರಾಯ್ ಹೊಟೇಲ್ ಮೇಲೆ ದಾಳಿ ಮಾಡಿದ್ದು, ಈ ದಾಳಿಯಲ್ಲಿ ಹಲವು ಭಾರತೀಯರು ಮತ್ತು ವಿದೇಶಿಗರು ಕೂಡ ಹತ್ಯೆಗೀಡಾಗಿದ್ದರು. 15 ವರ್ಷದ ಹಿಂದೆ ನಡೆದ ಈ ನರಮೇಧದಲ್ಲಿ 175 ಜನ ಮೃತಪಟ್ಟಿದ್ದರು. 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಉಗ್‌ರ ಹಫೀಜ್ ಸಯ್ಯದ್ ಈ ದಾಳಿಯ ರೂವಾರಿಯಾಗಿದ್ದ.
ಲಷ್ಕರ್ ಎ ತೊಯ್ಬಾ ಎಂಬ ಉಗ್ರ ಸಂಘಟನೆ ಇನ್ನು ಕೂಡ, ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಈ ಸಂಘಟನೆಯಿಂದ ಹಲವು ದೇಶಗಳಿಗೆ ಅಪಾಯವಿದೆ. ಹಾಗಾಗಿ ಇಸ್ರೇಲ್‌ನಲ್ಲಿ ಈ ಸಂಘಟನೆಯನ್ನು ನಿಷೇಧಿಸಲಾಗಿದೆ. ಇಷ್ಟೇ ಅಲ್ಲದೇ, ಮುಂದೆ ಉಗ್ರರ ದಾಳಿ ನಡೆದರೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು, ಇಸ್ರೇಲ್ ಭಾರತಕ್ಕೆ ಬೆಂಬಲಿಸಿ ಹೋರಾಡಲಿದೆ ಎಂದು ಹೇಳಿದೆ.
ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.
ಇಸ್ರೇಲ್‌ಗೆ ಪಾಕ್ ಸಪೋರ್ಟ್: ಹಮಾಸ್ ವಿರುದ್ಧ ಶಸ್ತ್ರಾಸ್ತ್ರ ಸರಬರಾಜು..?
ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಅಧಿಕಾರಿಗೆ ಜೀವ ಬೆದರಿಕೆ..!