National News: ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್‌ಗೆ ಕ್ಯಾನ್ಸರ್ ಪತ್ತೆಯಾಗಿದೆ. ಆದಿತ್ಯ ಎಲ್ 1 ಉಡಾವಣೆ ದಿನವೇ ಸೋಮನಾಥ್‌ಗೆ ಕ್ಯಾನ್ಸರ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಸೋಮನಾಥ್, ಆದಿತ್ಯ ಎಲ್ 1 ಉಡಾವಣೆ ದಿನವೇ ತಮಗೆ ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಪತ್ತೆಯಾಗಿತ್ತು. ಆದರೆ ಕಿಮೋಥೆರಪಿ ಸೇರಿ, ಬೇರೆ ಬೇರೆ ಚಿಕಿತ್ಸೆ ಪಡೆದು ಬಳಿಕ ಮತ್ತೆ ಸೋಮನಾಥ್ ಕೆಲಸಕ್ಕೆ ಹಾಜರಾಗಿದ್ದರು.
ಚಂದ್ರಯಾನ 3ನೇ ಹೊತ್ತಿಗೆ ಸೋಮನಾಥ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದರೆ ಸೋಮನಾಥ್ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಿ, ಆರೋಗ್ಯವನ್ನು ನಿರ್ಲಕ್ಷಿಸಿದ್ದರು. ಬಳಿಕ ನಾರ್ಮಲ್ ರೂಟಿನ್ ಚೆಕಪ್‌ಗೆ ಹೋದಾಗ, ಕ್ಯಾನ್ಸರ್ ಇರುವುದು ಕಂಡುಬಂದಿದೆ. ಬಳಿಕ ಚೆನ್ನೈ ಆಸ್ಪತ್ರೆಗೆ ಹೋಗಿ, ಸ್ಕ್ಯಾನಿಂಗ್ ಮಾಡಿಸಿ, ಅದಕ್ಕೆ ಬೇಕಾದ ಎಲ್ಲ ರೀತಿಯ ಚಿಕಿತ್ಸೆ ಪಡೆದು, ಕ್ಯಾನ್ಸರ್ ಗೆದ್ದಿದ್ದಾರೆಂದು ಸೋಮನಾಥ್ ಹೇಳಿದ್ದಾರೆ. ಹಾಗಂತ ಸೋಮನಾಥ್ ಆರೋಗ್ಯ ನಿರ್ಲಕ್ಷಿಸದೇ, ಚಿಕಿತ್ಸೆ, ಪಥ್ಯ ಎಲ್ಲವನ್ನೂ ಮಾಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಾಗೊಮ್ಮೆ ಬೆಂಕಿ ಹಚ್ಚುವ ಕೆಲಸ ನಡೆದಿದೆ-ಶಾಸಕ ಟೆಂಗಿನಕಾಯಿ ಕಿಡಿ