Saturday, July 27, 2024

Latest Posts

ಐಎಸ್‍ಎಸ್‍ಎಫ್ ವಿಶ್ವಕಪ್ ಟೂರ್ನಿ:  ಅಗ್ರಸ್ಥಾನದೊಂದಿಗೆ  ವಿಶ್ವಕಪ್ ಪೂರೈಸಿದ ಭಾರತ

- Advertisement -

ಚಾಂಗ್‍ವಾನ್ (ದ.ಕೊರಿಯಾ): ಅಮೋಘ ಪ್ರದರ್ಶನ ನೀಡಿದ ಭಾರತೀಯ ಶೂಟರ್‍ಗಳು ಐಎಸ್‍ಎಸ್‍ಎಫ್  ಶೂಟಿಂಗ್ ವಿಶ್ವಕಪ್‍ನಲ್ಲಿ  15 ಪದಕಗಳನ್ನು ಬೇಟೆಯಾಡಿ ಅಗ್ರಸ್ಥಾನದೊಂದಿಗೆ ಪೂರೈಸಿದ್ದಾರೆ.

ಭಾರತ ತಲಾ 5 ಚಿನ್ನ, 6 ಬೆಳ್ಳಿ ಮತ್ತು  4 ಕಂಚಿನೊಂದಿಗೆ ಒಟ್ಟು 15 ಪದಕಗಳನ್ನು ಗೆದ್ದುಕೊಂಡಿದೆ.

ಬುಧಾವಾರ ಕೊನೆಯ ದಿನ ಪುರುಷರ ರಾಪಿಡ್ ಪಿಸ್ತೂಲ್ ತಂಡದ ವಿಭಾಗದಲ್ಲಿ  ಭಾರತದ ಅನಿಶ್ ಭಾನವಾಲಾ, ವಿಜಯ್‍ವೀರ್ ಸಿಂಗ್ ಮತ್ತು ಸಮೀರ್ ಬೆಳ್ಳಿ ಪದಕ ಗೆದ್ದು ಮಿಂಚಿದರು.

ಮಾರ್ಟಿನ್, ಥಾಮಸ್ ತೆಹಾನ್ ಮತ್ತು ಮಾತೆಜ್ ರಾಮಪುಲಾ ನೇತೃಥ್ವದ ಬಲಿಷ್ಠ ಜೆಕ್ ಗಣರಾಜ್ಯ ವಿರುದ್ಧ ಭಾರತ 10-2 ಅಂಕಗಳ ಮುನ್ನಡೆ ಪಡೆಯಿತು. ನಂತರ  ಕುಸಿದ ಭಾರತ 15-17 ಅಂಕಗಳಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತ್ತು. ಸ್ಕೀಟ್ ಮಿಶ್ರ ತಂಡದ ವಿಭಾಗದಲ್ಲಿ  ಭಾರತದ ಮೈರಾಜ್ ಅಹಮದ್ ಮತ್ತು ಮುದ್ದಾಲ್ ದೇಸ್ವಾಲಾ 150 ಅಂಕಗಳಲ್ಲಿ 138 ಅಂಕ ಪಡೆದು 9ನೇ ಸ್ಥಾನ ಪಡೆದರು.

2019ರ ಐಎಸ್‍ಎಸ್‍ಎï ವಿಶ್ವಕಪ್‍ನಲ್ಲಿ  ಭಾರತ ಎಲ್ಲಾ ಐದು ಹಂತಗಳನ್ನು ಗೆದ್ದುಕೊಂಡಿತ್ತು. 2021ರಲ್ಲಿ ಟೂರ್ನಿಯನ್ನು ಮೊಟಕುಗೊಳಿಸಲಾಗಿತ್ತು.

ಮುಂದೆ ಅಕ್ಟೋಬರ್‍ನಲ್ಲಿ  ಐಎಸ್‍ಸ್‍ಎಫ್ ವಿಶ್ವಕಪ್ ಚಾಂಪಿಯನ್‍ಶಿಪ್ ಅನ್ನ ಕೈರೋದಲ್ಲಿ ನಡೆಯಲಿದೆ.

ವಿಶ್ವ ಚಾಂಪಿಯನ್‍ಶಿಪ್‍ನಲ್ಲಿಯೂ ಒಳ್ಳೆಯ ಪ್ರದರ್ಶನ ನೀಡಿದರೆ 2024ರ ಪ್ಯಾರಿಸ್ ಒಲಿಂಪಿಕ್ ಗೇಮ್ಸ್‍ಗೆ ಪ್ರತಿನಿಸಲು ಅವಕಾಶ ಸಗಲಿದೆ.

ಸೆಪ್ಟೆಂಬರ್‍ನಲ್ಲಿ  ಐಎಸ್‍ಎಸ್‍ಎï ಶಾಟ್ ಗನ್ ವಿಶ್ವಕಪ್ ನಡೆಯಲಿದ್ದು  ಭಾರತದ ಶಾಟ್ ಗನ್ ತಂಡ ಕ್ರೋವೇಷಿಯಾಗೆ ಪ್ರಯಾಣ ಬೆಳೆಸಲಿದೆ.

- Advertisement -

Latest Posts

Don't Miss