Sunday, September 15, 2024

Latest Posts

ಅಹಂ ಎನ್ನುವುದು ಈ ರಾಶಿಯವರ ಆಸ್ತಿ ಅಂತಲೇ ಹೇಳಬಹುದು

- Advertisement -

Horoscope: ಮನುಷ್ಯನಿಗೆ ಯಾವ ಗುಣವಿದ್ದರೂ ಅಹಂಕಾರ ಮಾತ್ರ ಇರಬಾರದು ಅಂತಾ ಹಿರಿಯರು ಹೇಳುತ್ತಾರೆ. ಏಕೆಂದರೆ, ಅಹಂಕಾರ ಅನ್ನೋದು, ನಮ್ಮ ಜೀವನವನ್ನು ಹಾಳು ಮಾಡುವ ಗುಣ, ಅಹಂಕಾರದಿಂದ ಮೆರೆದವರು, ಒಂದಲ್ಲ ಒಂದು ದಿನ ಸೋಲಲೇಬೇಕು. ಅದೇ ರೀತಿ ಕೆಲ ರಾಶಿಯವರಿಗೆ ಅಹಂ ಹೆಚ್ಚಾಗಿರುತ್ತದೆ. ಅದೇ ಅಹಂಕಾರ ಅವರನ್ನು ಮೂಲೆಗುಂಪು ಮಾಡುತ್ತದೆ. ಹಾಗಾದ್ರೆ ಅಹಂ ಹೆಚ್ಚಿರುವ ರಾಶಿಯವರು ಯಾರು ಅಂತಾ ತಿಳಿಯೋಣ ಬನ್ನಿ..

ಸಿಂಹ: ಸಿಂಹ ರಾಶಿಯವರಿಗೆ ಸದಾ ಕಾಲ ತಾನೇ ಮುಂದಾಳತ್ವ ವಹಿಸಬೇಕು ಎಂದಿರುತ್ತದೆ. ಅದು ಸಿಗದಿದ್ದಲ್ಲಿ, ಅವರ ಪ್ರಖ್ಯಾತಿಗೆ ಧಕ್ಕೆ ಬಂದಂತೆ ಎಂದೇ ಅವರು ಭಾವಿಸುತ್ತಾರೆ. ಹಾಗಾಗಿ ಇವರು ಸದಾ ಅಹಂ ಹೊಂದಿದವರಾಗಿರುತ್ತಾರೆ. ಇನ್ನೊಬ್ಬರು ಕೊಡುವ ಸಲಹೆಯನ್ನು ಇವರು ಕಡೆಗಣಿಸುತ್ತಾರೆ. ಏಕೆಂದರೆ ಇವರಿಗೆ ಇವರೇ ರಾಜರಾಗಿರುತ್ತಾರೆ. ಕೆಲವೊಮ್ಮೆ ಇದೇ ಗುಣ, ಇವರನ್ನು ಅವನತಿಯೆಡೆಗೆ ಕೊಂಡೊಯ್ಯುತ್ತದೆ.

ಕನ್ಯಾ: ಕನ್ಯಾ ರಾಶಿಯವರಿಗೆ ಅಹಂ ಹೆಚ್ಚು ಎನ್ನಬಹುದು. ಇನ್ನೊಬ್ಬರ ಸಲಹೆಯನ್ನು ಇವರು ಗೌರವಿಸುತ್ತಾರೆ. ಆದರೆ ಇವರಿಗೆ ಕೆಲವರನ್ನು ಕಂಡರೆ ಹಿಡಿಸುವುದಿಲ್ಲ. ಮತ್ತು ಈ ನಡುವಳಿಕೆಗೆ ಕಾರಣವಿರುವುದಿಲ್ಲ. ಅಂಥವರ ಬಳಿ ಇರುವ ಅಹಂಕಾರದಿಂದಲೇ ನಡೆದುಕೊಳ್ಳುತ್ತಾರೆ. ಇದರಿಂದಲೇ, ಇವರು ಇನ್ನೊಬ್ಬರ ದೃಷ್ಟಿಯಲ್ಲಿ ಮೂಲೆಗುಂಪಾಗುತ್ತಾರೆ.

ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ನಾಯಕತ್ವದ ಗುಣ ಇರುತ್ತದೆ. ಹಾಗಾಗಿ ಕೆಲಸದ ವಿಷಯದಲ್ಲಿ, ವಿದ್ಯಾಭ್ಯಾಸದ ವಿಷಯದಲ್ಲಿ ಇವರಿಗೆ ಹೆಚ್ಚು ಅಹಂ ಇರುತ್ತದೆ. ಈ ಅಹಂನಿಂದಲೇ ಕೆಲವು ಸಂಬಂಧಗಳನ್ನು ಕೂಡ ಹಾಳು ಮಾಡಿಕೊಳ್ಳುತ್ತಾರೆ.

ಮಕರ: ಮಕರ ರಾಶಿಯವರಿಗೆ ಹೆಚ್ಚು ಅಹಂ ಇದ್ದು, ಬೇರೆಯವರನ್ನು ಟೀಕಿಸುವ ಗುಣ ಇವರದ್ದಾಗಿರುತ್ತದೆ. ಇವರು ಮಾಡುವ ಕೆಲಸದಲ್ಲಿ ಪ್ರತಿಭಾವಂತರಾಗಿದ್ದರೂ ಕೂಡ ಇವರಲ್ಲಿರುವ ಅಹಂನಿಂದ ಆ ಪ್ರತಿಭೆಗೆ ಬೆಲೆ  ಸಿಗುವುದಿಲ್ಲ. ತಾನು ಮಾಡುತ್ತಿರುವುದಷ್ಟೇ ಸರಿ ಎಂಬ ಅಹಂ ಅವರಿಂದ ದೂರವಾಗುವ ತನಕ ಮಕರ ರಾಶಿಯವರು ಉದ್ಧಾರವಾಗುವುದಿಲ್ಲ.

- Advertisement -

Latest Posts

Don't Miss