Political News: ವಿಧಾನಸೌಧದಲ್ಲಿ ರಾಜ್ಯಸಭೆ ಫಲಿತಾಂಶ ಬಂದ ಬಳಿಕ, ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರ ಬಗ್ಗೆ, ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಬಸವರಾಜ ಬೊಮ್ಮಾಯಿ ಈ ಬಗ್ಗೆ ಟ್ವೀಟ್ ಮಾಡಿದ್ದು, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಅವರ ಗೆಲುವಿನ ಸಂದರ್ಭದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಪಾಕಿಸ್ತಾನ ಬೆಂಬಲಿಗರಿಗೆ ಸಹಾಯ, ಬೆಂಬಲ ಇದೆ ಎಂಬುದನ್ನು ತೋರಿಸುತ್ತದೆ. ವಿಧಾನಸಭೆ ಚುನಾವಣೆ ಗೆಲುವಿನ ಸಂದರ್ಭದಲ್ಲೂ ಬೆಳಗಾವಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿ ಪಾಕಿಸ್ತಾನದ ಧ್ವಜ ಹಾರಿಸಿದ್ದರು. ದೇಶದ್ರೋಹಿಗಳಿಗೆ ವಿಧಾನಸಭೆಯಲ್ಲಿ ಜಾಗ ಕೊಟ್ಟಿರುವುದು ಆತಂಕಕಾರಿ ಬೆಳವಣಿಗೆ, ಈ ವಿಷಯ ಅತ್ಯಂತ ಗಂಭೀರವಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಸರ್ಕಾರ ತಪ್ಪಿಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸದಾ ದೇಶದ್ರೋಹಿಗಳನ್ನು ಪೊರೆಯುವ ಕಾಂಗ್ರೆಸ್ ಪಕ್ಷ ಇಂದು ಆ ವಿಷಜಂತುಗಳನ್ನು ವಿಧಾನಸೌಧದ ಆವರಣದೊಳಗೆ ಬರುವಷ್ಟು ಓಲೈಕೆ ಮಾಡಿದೆ. ವಿಧಾನಸೌಧದ ಆವರಣದಲ್ಲೇ ಶತ್ರು ಪಾಕಿಸ್ತಾನದ ಪರ ಘೋಷಣೆ ಕೂಗಿದ ಕಾಂಗ್ರೆಸ್ ಪಕ್ಷದ ನಾಸಿರ್ ಬೆಂಬಲಿಗರು, ನಮಗ್ಯಾವ ಭಯವಿಲ್ಲ ಎಂದು ಸಾರಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಘಟನೆ ಜ್ವಲಂತ ಸಾಕ್ಷಿ. ಸಿಎಂ ಸಿದ್ದರಾಮಯ್ಯ ಅವರೇ ಈ ಕೂಡಲೇ ಆ ಎಲ್ಲ ದೇಶದ್ರೋಹಿಗಳನ್ನು ಬಂಧಿಸಿ, ಘಟನೆಯ ಕೂಲಂಕಷ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ ಎಂದು ನಳೀನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಸುನೀಲ್ ಕುಮಾರ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಗೆಲುವನ್ನು ದೇಶದ್ರೋಹಿಗಳು ಸಂಭ್ರಮಿಸುತ್ತಾರೆ ಎಂಬುದಕ್ಕೆ ಹೊಸ ನಿದರ್ಶನ ಸಿಕ್ಕಿದೆ. ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ನ ನಾಸೀರ್ ಹುಸೇನ್ ಪರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದ್ದಾರೆ. ಇಂತ ದೇಶದ್ರೋಹಿ ಕೃತ್ಯವನ್ನು ಸಹಿಸಲು ಸಾಧ್ಯವೇ ? ಸಿಎಂ ಸಿದ್ದರಾಮಯ್ಯನವರೇ , ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ದೇಶ ಪ್ರೇಮದ ನಿಜಬಣ್ಣ ಏನೆಂದು ಈ ಘೋಷಣೆ ಹೇಳುತ್ತಿಲ್ಲವೇ ? ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.
ನಾಸಿರ್ ಹುಸೇನ್ ಗೆದ್ದ ತಕ್ಷಣ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಬೆಂಬಲಿಗರು..
ತಮ್ಮೆಲ್ಲರ ಗೆಲುವು ನಾಡಿನ ನ್ಯಾಯದ ಕೂಗಿಗೆ ಬಲ ತಂದಿದೆ: ರಾಜ್ಯಸಭಾ ಗೆಲುವಿನ ಬಗ್ಗೆ ಸಿಎಂ ಮಾತು
ಪಾಕ್ ಪರ ಘೋಷಣೆ ಕೂಗಿದವರನ್ನು ಒದ್ದು ಒಳಗೆ ಹಾಕಿ -ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹ