Hubli News: ಹುಬ್ಬಳ್ಳಿ: ನಿನ್ನೆ ರಾತ್ರಿ ಮೃತ ಅಂಜಲಿ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಪೊಲೀಸರ ವಿರುದ್ಧ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡೋಕೆ ಆಗಲ್ಲ ಅಂದ್ರೆ ಜಾಗ ಖಾಲಿ ಮಾಡಿ. ಅಂಜಲಿ ಕೊಲೆ ಆಘಾತಕಾರಿ ಬೆಳವಣಿಗೆ. ಆರೋಪಗಳಿಗೆ ಕಾನೂನಿನ ಭಯವು ಇಲ್ಲ ಪೊಲೀಸರ ಭಯವೂ ಇಲ್ಲ. ಏನು ಮಾಡಿದರೂ ನಡೆಯುತ್ತೆ ಅನ್ನೋ ಭಾವನೆ ಮೂಡಿದೆ. ನೇಹಾ ಪ್ರಕರಣ ನಡೆದ ನಂತರವೂ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಸಿಎಂ ಸೇರಿ ಇತರ ನಾಯಕರು ದೊಡ್ಡ ದೊಡ್ಡ ಮಾತುಗಳನ್ನಾಡಿದರು. ಏನೂ ಮಾಡದೆ ಇರೋ ಪರಿಣಾಮ ಈ ಹತ್ಯೆ ನಡೆದಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.
ಆರೋಪಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಪೊಲೀಸರೇ ಪರೋಕ್ಷವಾಗಿ ಆರೋಪಿಗೆ ಕೊಲೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಪೊಲೀಸ್ ಠಾಣೆಗಳು ಇರುವುದಾದರೂ ಯಾಕೆ…? ವಿರೋಧ ಪಕ್ಷದವರು ಹೇಳಿಕೆ ಕೊಟ್ಟರೆ ರಾಜಕೀಯ ಅಂತಾರೆ. ಇಷ್ಟೆಲ್ಲಾ ಕೊಲೆ ನಡೆದರೂ ನಾವು ಬಾಯಿ ಮುಚ್ಕೊಂಡು ಕೂಡಬೇಕೇ..? ನೀವು ರಾಜಕಾರಣವನ್ನಾದರೂ ಅನ್ನಿ ಮಹಾರಾಜಕಾರಣವನ್ನಾದ್ರೂ ಅನ್ನಿ. ನಿಮ್ಮ ಕೈಯಲ್ಲಿ ಕಾನೂನು ಕಾಪಾಡಲು ಆಗೋಲ್ಲ ಅಂದ್ರೆ ಕೂಡಲೇ ಜಾಗ ಖಾಲಿ ಮಾಡಿ. ಸಂವೇದನಾಶೀಲ ಸರ್ಕಾರ ಬೇಕಲ್ಲವೇ..? ಪೊಲೀಸರ ಅಮಾನತ್ತಿನಿಂದ ಈ ಪ್ರಕರಣಕ್ಕೆ ನ್ಯಾಯ ಸಿಗುತ್ತೆಯೇ..? ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ರಚನೆ ಮಾಡಬೇಕು. ಆರೋಪಿಯನ್ನು ಪತ್ತೆ ಹಚ್ಚಿ ಒಂದು ಒಳಗೆ ಹಾಕಿ. ಗಲ್ಲು ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಿ. ನಮ್ಮ ಹೋರಾಟವನ್ನು ಇಲ್ಲಿಗೆ ಕೈ ಬಿಡಲ್ಲ. ಇದೇ ರೀತಿ ಕೊಲೆ ಪ್ರಕರಣ ನಡೆದರೆ ಜನವೇ ಸರ್ಕಾರದ ವಿರುದ್ಧ ತಿರುಗಿ ಬೀಳ್ತಾರೆ. ಅಂಜಲಿ ಕುಟುಂಬಸ್ಥರಿಗೆ ಕೂಡಲೇ ಪರಿಹಾರ ಕೊಡಬೇಕು ಎಂದು ಹುಬ್ಬಳ್ಳಿಯಲ್ಲಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ
ಕೊ* ಪ್ರಕರಣಗಳಲ್ಲಿ ಸರ್ಕಾರದ ಲೋಪ ಹೆಚ್ಚಾಗಿ ಕಾಣುತ್ತಿದೆ: ಶಾಸಕ ಟೆಂಗಿನಕಾಯಿ




