Sunday, November 9, 2025

Latest Posts

ಅನ್ನಭಾಗ್ಯ, ಕ್ಷೀರಭಾಗ್ಯಕ್ಕೆ ಕನ್ನ, ಅಕ್ರಮ ಪಡಿತರ ದಾಸ್ತಾನು ಪತ್ತೆ!

- Advertisement -

ಯಾದಗಿರಿ ಗುರುಮಠಕಲ್ ಪಟ್ಟಣದ ಹೊರವಲಯದಲ್ಲಿರುವ ನರೆಂದ್ರ ರಾಠೋಡ ಕುಟುಂಬದ ಶ್ರೀ ಲಕ್ಷ್ಮೀ ತಿಮ್ಮಪ್ಪ ಕಾಟನ್ ಮತ್ತು ಜಿನ್ನಿಂಗ್ ಮಿಲ್ ಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ, ಜೋಳ ಹಾಗೂ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿ ಪ್ಯಾಕೆಟ್‌ಗಳು ಅಕ್ರಮವಾಗಿ ಸಂಗ್ರಹಿಸಲ್ಪಟ್ಟಿರುವುದು ಪತ್ತೆಯಾಗಿದೆ. ಈ ಹಿಂದೆ ಯಾದಗಿರಿಯಿಂದ ಅಮೆರಿಕಾಗೆ ಅಕ್ರಮ ಅಕ್ಕಿ ಸಾಗಾಟ ಮಾಡಲಾಗಿತ್ತು ಎಂದು ವರದಿಯಾಗಿತ್ತು.

ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಅಯ್ಯಪ್ಪ ರಾಠೋಡ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ದಾಳಿ ವೇಳೆ ದಾಸ್ತಾನಿನ ಪ್ರಮಾಣವನ್ನು ಪರಿಶೀಲಿಸಿರುವ ಅಧಿಕಾರಿಗಳು, ಯೋಜನೆಗೆ ಬಳಸಬೇಕಿದ್ದ ಬಹುಮೌಲ್ಯದ ಆಹಾರ ಪದಾರ್ಥಗಳನ್ನು ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದಲ್ಲದೆ, ದುರುಪಯೋಗದ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ. ನೇತೃತ್ವದ ತಂಡ ದಾಳಿ ನಡೆಸಿದಾಗ ಪಡಿತರ ಅಕ್ಕಿ ಪತ್ತೆಯಾಗಿತ್ತು.

ಸತತ ಮೂರು ದಿನಗಳ ಪರಿಶೀಲನೆ ಮತ್ತು ಅಕ್ಕಿಯ ತೂಕ, ಮೌಲ್ಯ ನಿರ್ಧಾರದ ನಂತರ, ₹1.21 ಕೋಟಿ ಮೌಲ್ಯದ ಪಡಿತರ ಅಕ್ಕಿಯ ಅಕ್ರಮ ದಾಸ್ತಾನಿನ ಕುರಿತು ನರೇಂದ್ರ ರಾಠೋಡ, ಅಯ್ಯಪ್ಪ ರಾಠೋಡ, ಚಂದ್ರಿಕಾ ಮತ್ತು ಲಕ್ಷ್ಮೀಬಾಯಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಕ್ಕಿ ಪತ್ತೆ, ಪ್ರಕರಣ ದಾಖಲಾಗುವ ಸಾಧ್ಯತೆ ಹಿನ್ನಲೆ ಚಂದ್ರಕಾ, ಲಕ್ಷ್ಮೀಬಾಯಿ ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಸತತ ಮೂರು ದಿನಗಳ ಪರಿಶೀಲನೆ ನಂತರ ‘ಅಕ್ಕಿ ಮತ್ತು ಜೋಳದ ಅಕ್ರಮ ದಾಸ್ತಾನಿನ ಕುರಿತು ಆಹಾರ ನಿರೀಕ್ಷಕ ಅನ್ವ‌ರ್ ಹುಸೇನ್ ದೂರಿನನ್ವಯ ಅ.17 ರಂದು ಪ್ರಕರಣ ದಾಕಲಾಗಿದೆ ಮತ್ತು ಅ.18 ರಂದು ಪಿಎಂ ಪೋಷಣ ಶಕ್ತಿ ನಿರ್ಮಾಣ ಎಡಿ ಚೆನ್ನಪ್ಪ ಅವರು ನೀಡಿದ ದೂರಿನಂತೆ ‘ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಬೇಕಿದ್ದ ₹75,757.5 ಮೌಲ್ಯದ ‘ನಂದಿನಿ ಹೋಲ್ ಮಿಲ್ಕ್ ಪೌಡರ್’ 1 ಕೆ.ಜಿ. ತೂಕದ 222 ಪ್ಯಾಕೇಟ್‌ಗಳು ಪತ್ತೆಯಾದ ಕುರಿತು ಅಯ್ಯಪ್ಪ ರಾಠೋಡ ವಿರುದ್ಧ ಪ್ರಕರಣ ದಾಳಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss