Political News: ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಮತ್ತು ಮಾಜಿ ಸಚಿವ ಬಿ.ಸಿ,ಪಾಟೀಲ್ ಮಧ್ಯೆ ಟ್ವೀಟ್ ವಾರ್ ನಡೆದಿದೆ. ಬಿಜೆಪಿಯ ಹಲವು ನಾಯಕರು, ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ಯತ್ನಾಳ್ ತಮ್ಮದೇ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿರುವುದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಗಾಗಿ ಮಾಜಿ ಸಚಿವರಾದ ಬಿ.ಸಿ.ಪಾಟೀಲ್ ಅವರು, ಯತ್ನಾಳ್ ವಿರುದ್ಧ ಟ್ವೀಟ್ ಮಾಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ನಾನು ಬಸವನಗೌಡ ಪಾಟೀಲ್ ಅಂದರೆ ಬಿಸಿ ಪಾಟೀಲ್. ಏನು ಪಾಟೀಲ್ ಅವರೇ, ನೀವು ಈ ರೀತಿ ಹೇಳಿಕೆ ಕೊಡುವುದು ಸರಿನಾ ನೀವು ಈ ರೀತಿ ಹೇಳಿಕೆ ಕೊಡುವುದು ನೋಡಿದರೆ ನೀವು ಬಿಜೆಪಿ ಪರವಾಗಿರುವಿರೋ ಅಥವಾ ಕಾಂಗ್ರೆಸ್ ಪರವಾಗಿರುವಿರೋ ಎನ್ನುವುದು ಅನುಮಾನ. ವಿಷಯ ತಿಳಿದುಕೊಂಡು ಮಾತಾಡುವುದು ಬಹಳ ಒಳ್ಳೆಯದು.
ವಿಕೃತ ಮನಸ್ಸುಗಳನ್ನು ಹೊಂದಿರುವಂತಹ ಬಿಕೆ ಹರಿಪ್ರಸಾದ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರು ಸೇರಿ ಒಂದು ಪಕ್ಷವನ್ನು ಪ್ರಾರಂಭಿಸುದು ಒಳ್ಳೆಯದು ಅಂತ ನನ್ನ ಭಾವನೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಟ್ವೀಟ್ ಮಾಡಿದ್ದರು.
ಇದಕ್ಕೆ ಎದುರೇಟು ನೀಡಿರುವ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮ ಸ್ವಂತ ಕ್ಷೇತ್ರದ ಬಗ್ಗೆ ಯೋಚನೆ ಮಾಡಿ, ಪಕ್ಷದ ಬಗ್ಗೆ ಆಮೇಲೆ ಯೋಚಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ನಾನು ಬಸವನಗೌಡ ಪಾಟೀಲ್ ಅಂದರೆ ಬಿಸಿ ಪಾಟೀಲ್. ಏನು ಪಾಟೀಲ್ ಅವರೇ, ನೀವು ಈ ರೀತಿ ಹೇಳಿಕೆ ಕೊಡುವುದು ಸರಿನಾ ನೀವು ಈ ರೀತಿ ಹೇಳಿಕೆ ಕೊಡುವುದು ನೋಡಿದರೆ ನೀವು ಬಿಜೆಪಿ ಪರವಾಗಿರುವಿರೋ ಅಥವಾ ಕಾಂಗ್ರೆಸ್ ಪರವಾಗಿರುವಿರೋ ಎನ್ನುವುದು ಅನುಮಾನ. ವಿಷಯ ತಿಳಿದುಕೊಂಡು ಮಾತಾಡುವುದು ಬಹಳ ಒಳ್ಳೆಯದು.
— B C Patil (@bcpatilkourava) December 25, 2023
ತಮ್ಮ ಸ್ವಂತ ಕ್ಷೇತ್ರದ ಬಗ್ಗೆ ಯೋಚನೆ ಮಾಡಿ, ಪಕ್ಷದ ಬಗ್ಗೆ ಆಮೇಲೆ ಯೋಚಿಸಬಹುದು. https://t.co/UH8ZtNQJOd
— Basanagouda R Patil (Yatnal) (@BasanagoudaBJP) December 26, 2023
ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಸಂಭ್ರಮ: ಮಾಲಾಧಾರಿಗಳಿಂದ ದತ್ತಪಾದುಕೆ ದರ್ಶನ
ದೇವಾಲಯದ ಎತ್ತರ ಮೀರಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ: ಯೋಗಿ ಆದಿತ್ಯನಾಥ್ ಆದೇಶ
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ 100 ಹೊಸ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ