Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾಧ್ಯಮವನ್ನುದ್ದೇಶಿಸಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿದ್ದು, ನಳೀನ್ ಕುಮಾರ್ ಕಟೀಲು ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ್ದಾರೆ.
ಅದು ಅವರ ಪಕ್ಷದ ಆಂತರಿಕ ವಿಚಾರ. ಇದಕ್ಕೆ ನಾನ ಏನೂ ಮಾತಾಡಲಿ ..? ಬಿಜೆಪಿ ಗೊಂದಲದಲ್ಲಿದೆ, ಹಾಗಾಗಿ ಅವರೇ ಸ್ಪಷ್ಟ ಪಡಿಸಬೇಕಾಗಿದೆ. ಇದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ನಾನು ಹಿಂದೆ ಹೇಳಿರೋದು ಎಲ್ಲವೂ ನಿಜ ಆಗ್ತಿದೆ ಎಂದು ಕಟೀಲು ಹೇಳಿದ್ದರು. ಸೋಲಿಗೆ ಕಾರಣ ಯಾರೂ ಅನ್ನೋದನ್ನ ಅವರೇ ಸ್ಪಷ್ಟ ಪಡಿಸಬೇಕಾಗಿದೆ.. ಸೋಲಿಗೆ ಹಲವಾರ ಕಾರಣ ಇದೆ.. ಸ್ವಯಂಕೃತ ಅಪರಾಧವೂ ಸೋಲಿಗೆ ಕಾರಣ. ಬಿಜೆಪಿ ತಳಪಾಯವೇ ಕುಸಿದು ಹೋಗುತ್ತಿದೆ. ಅದನ್ನು ಗಟ್ಟಿ ಮಾಡೋ ಕೆಲಸ ಆಗ್ತಿಲ್ಲ. ಬಿಜೆಪಿಯ ಅಡಿಪಾಯವೇ ಡಿಸ್ಟರ್ಬ್ ಆಗಿ ಕುಸಿದು ಹೋಗುತ್ತಿದೆ. ಇದು ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರತ್ತೆ. ಲೋಕಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸತ್ತೆ. ಕೇವಲ ಬಿಜೆಪಿದು ಗೋಡೆ ಬರಹ ಎಂದು ಶೆಟ್ಟರ್ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ರಾಜ್ಯಾಧ್ಯಕ್ಷ ಲಿಂಗಾಯತರಿಗೆ ಕೊಡಬೇಕು ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಬಿಜೆಪಿಯೊಂದಿಗೆ ನನ್ನ ಸಂಭಂದ ಮುಗಿದು ಹೋಗಿದೆ. ನಾನ ಏಕೆ ಅದನ್ನು ಹೇಳಲಿ..? ರಾಜ್ಯ ಬಿಜೆಪಿ ಬಹಳ ಗೊಂದಲದಲ್ಲಿದೆ. ವಿಪಕ್ಷ ನಾಯಕ ಯಾರು ಅನ್ನೋದೇ ಗೊತ್ತಿಲ್ಲ. ಪ್ರತಾಪ್ ಸಿಂಹ ಒಂದು ತರಹ ಮಾತಾಡ್ತಾರೆ.. ಏನು ಮಾಡೋದು ಎಲ್ಲ ಮಾಡಿದ್ದಾರೆ. ಪಕ್ಷ ರಿಪೇರಿ ಮಾಡೋಕೆ ಏನು ಉಳಿದಿಲ್ಲ ಎಂದಿದ್ದಾರೆ.
ಇನ್ನು ಮುನೇನಕೊಪ್ಪ ನಮ್ಮ ಜೊತೆ ಏನೂ ಚರ್ಚೆ ಮಾಡಿಲ್ಲ. ಅವರ ಮನಸ್ಸಿನಲ್ಲದೆ ಏನೂ ಗೊತ್ತಿಲ್ಲ. ಅವರು ಪಕ್ಷಕ್ಕೆ ಬರೋದು ಚರ್ಚೆ ಆಗಿಲ್ಲ. ನಾನು ಅವರೊಂದಿಗೆ ಮಾತಾಡಿಲ್ಲ. ಅವರನ್ನ ಸ್ವಾಗತ ಮಾಡೋದ ಬಿಡೋದು ಏನಿಲ್ಲ. ಅವರ ಪಕ್ಷಕ್ಕೆ ಬರೋದರ ಬಗ್ಗೆ ಚರ್ಚೆನೆ ಇಲ್ಲ ಎಂದು ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
‘ಮೊದಲು ಸುಳ್ಳು ಸುದ್ದಿ ಹಬ್ಬಿಸಿರುವ ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು’
ಅಧಿಕಾರಿಗಳು, ಗುತ್ತಿಗೆದಾರರ ಲಂಚಾವತಾರದ ವಿರುದ್ಧ ಪ್ರತಿಭಟನೆ ಎಚ್ಚರಿಕೆ ನೀಡಿದ ನೌಕರರು
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್