Hubballi Political News: ಪಕ್ಷ ತೊರೆದ ಆರೇ ತಿಂಗಳಲ್ಲಿ ಮತ್ತೆ ಬಿಜೆಪಿಗೆ ಬಂದಿದ್ದಾರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್.. ಶೆಟ್ಟರ್ ಮುನಿಸಿಗೆ ಬಿಜೆಪಿ ಹೈಕಮಾಂಡ್ ತಲೆ ಬಾಗಿದ್ದು, ದೆಹಲಿಯಲ್ಲಿ ಶೆಟ್ಟರ್ ಸಂಧಾನ ಯಶಸ್ವಿಯಾಗಿದೆ. ಈ ಮೂಲಕ ಲೋಕಸಭಾ ಚುನಾವಣೆಗೆ ಬಿಜೆಪಿ ರ‌್ಯಾಪಿಡ್ ತಯಾರಿ ನಡೆಸಿದೆ. ಶೆಟ್ಟರ್ ಘರವಾಪ್ಸಿ ಹಿಂದೆ ಬಿಜೆಪಿ ಸಾಕಷ್ಟು ಲೆಕ್ಕಾಚಾರಗಳು ಸಹ ಇವೆ..
ರಾಜ್ಯ ರಾಜಕೀಯದಲ್ಲಿ ಇಂದು ಅತ್ಯಂತ ಅಚ್ಚರಿಯ ದಿನ ನಿನ್ನೆ ಕಾಂಗ್ರೆಸ್ ನಲ್ಲಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಇಂದು ಏಕಾಏಕಿ ಬಿಜೆಪಿ ದೆಹಲಿ ಹೈಕಮಾಂಡ್ ಜೊತೆಗೆ ಸೇರಿಕೊಂಡು ವಾಪಸು ಪಕ್ಷಕ್ಕೆ ಬಂದಿದ್ದಾರೆ. ಇಂದು ಬೆಳಗ್ಗೆ ನೋಡು ನೋಡತ್ತಲೇ ದೆಹಲಿ ಅಚ್ಚರಿ ಬೆಳವಣಿಗೆ ನಡೆದು ಶೆಟ್ಟರ್ ಬಿಜೆಪಿ ಸೇರ್ಪಡೆ ಘೋಷಣೆ ಮಾಡಿಯೇ ಬಿಟ್ಟರು.. ಈ ಮೂಲಕ ಬಿಜೆಪಿ ಮೇಲಿದ್ದ ಶೆಟ್ಟರ್ ಕೋಪ ಕೇವಲ ಆರೇ ತಿಂಗಳಿಗೆ ಶಮನವಾಗಿದೆ. ಲೋಕಸಭೆ ಚುನಾವಣೆ ಹೊತ್ತಿನಲ್ಲಿ ರಾಜ್ಯ ನಾಯಕರ ಗಮನಕ್ಕೂ ತರದೆ, ಶೆಟ್ಟರನ್ನು ವಾಪಸು ಪಕ್ಷಕ್ಕೆ ಬರ ಮಾಡಿಕೊಂಡಿದೆ. ಇದರ ಹಿಂದೆ ಬಿಜೆಪಿ ಹೈಕಮಾಂಡ್ ಭಾರಿ ಲೆಕ್ಕಾಚಾರದ ತಂತ್ರಗಾರಿಕೆ ಇರುವುದು ಸ್ಪಷ್ಟವಾಗುತ್ತಿದೆ..
ವಿಧಾನ ಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಭಾರಿ ಅಂತರದಿಂದ ಸೋತ್ತಿದ್ದರು. ಆದರೆ ಶೆಟ್ಟರ್ ಪ್ರಭಾವ ಎರಡು ಪಕ್ಷಗಳಿಗೆ ಪರಿಣಾಮ ಬೀರಿತ್ತು. ಕಾಂಗ್ರೆಸ್ ಪಕ್ಷಕ್ಕೆ ಶೆಟ್ಟರ್ ಆಗಮನ ದೊಡ್ಡ ಪ್ಲಸ್ ಆಗಿ, ಲಿಂಗಾಯತ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಆದರೆ ಇದೆ ಬಿಜೆಪಿಗೆ ಮುಳುವಾಯಿತು. ಚುನಾವಣೆ ಸಮಯದಲ್ಲಿ ಶೆಟ್ಟರ್ ಬಿಟ್ಟ ಬ್ರಾಹ್ಮಣ ವರ್ಸಸ್ ಲಿಂಗಾಯತಾಸ್ತ್ರ ಬಿಜೆಪಿ ಫಲಿತಾಂಶವನ್ನು ಬುಡಮೇಲು ಮಾಡಿತು.
ಈಗ ಇದರಿಂದಾಗಿ ಪಾಠ ಕಲಿತಿರುವ ಬಿಜೆಪಿ ಹೈಕಮಾಂಡ್ ಶೆಟ್ಟರನ್ನು ವಾಪಸು ಕರೆತಂದು ಪ್ಯಾಚ್ಪ್ ಮಾಡುವ ಪ್ರಯತ್ನ ಮಾಡುತ್ತಿದೆ. ಶೆಟ್ಟರ್ ಆಗಮನ ಬಿಜೆಪಿಗೆ ಒಂದು ರೀತಿಯಲ್ಲಿ ಪ್ಲಸ್ ಆಗಲಿದೆ. ಬೆಳಗಾವಿ, ಹಾವೇರಿ, ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಶೆಟ್ಟರ್ ಪ್ರಭಾವ ವರ್ಕೌಟ್ ಆಗಲಿದೆ.. ಶೆಟ್ಟರ್ ಸಂಘಟನಾತ್ಮಕ ಅನುಭವ ಜೊತೆಗೆ ಅವರ ಹಿಂದಿರುವ ಲಿಂಗಾಯತ ಸಮುದಾಯದ ಮೇಲೆ ಕಣ್ಣಿಟ್ಟಿದೆ ಬಿಜೆಪಿ..
ಇನ್ನೂ ಈ ಲೋಕಸಭೆಯಲ್ಲಿ ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಮತಗಳೇ ಬಿಜೆಪಿ ಪ್ರಮುಖ ಟಾರ್ಗೆಟ್.. ಹೀಗಾಗಿ ಯುವಕರು ಹಾಗೂ ಲಿಂಗಾಯತರನ್ನು ಸೆಳೆಯವ ನಿಟ್ಟಿನಲ್ಲಿ ಬಿವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಯಿತು. ಇನ್ನೂ ಒಕ್ಕಲಿಗರನ್ನು ಮೆಚ್ಚಿಸುವ ನಿಟ್ಟಿನಲ್ಲಿ
ಬೆಂಗಳೂರು ಮತ್ತು ಹಳೇ ಮೈಸೂರು ಭಾಗದಲ್ಲಿ ಪ್ರಭಾವ ಬೀರುವ ದೃಷ್ಟಿಯಿಂದ ಆರ್ ಅಶೋಕ್ ರನ್ನು ವಿಪಕ್ಷ ನಾಯಕನನ್ನಾಗಿ ಮಾಡಲಾಯಿತು.
ಹಳೇ ಮೈಸೂರು, ಬೆಂಗಳೂರು, ಮಧ್ಯ ಕರ್ನಾಟಕ ಭಾಗದಲ್ಲಿ ಎಲ್ಲವೂ ಸರಿಯಿದ್ದರೂ, ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ ಸರಿಯಾದ ನಾಯಕತ್ವ ಕೊರತೆ ಬಿಜೆಪಿಗಿತ್ತು.. ಸದ್ಯ ಇರುವ ಶಾಸಕರು ಮತ್ತು ಪ್ರಮುಖ ನಾಯಕರನ್ನು ಬಳಸಿಕೊಂಡು ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಿಟ್ ಗೆಲ್ಲುವುದು ಬಿಜೆಪಿ ಕಷ್ಟದ ಕೆಲಸವಾಗಿತ್ತು. ಇನ್ನೂ ಪ್ರಹ್ಲಾದ್ ಜೋಶಿ ಕೇಂದ್ರ ನಾಯಕರಾಗಿರುವ ಹಿನ್ನೆಲೆ, ಸ್ಥಳೀಯ ಮಟ್ಟದಲ್ಲಿ ಚುನಾವಣೆ ಎದುರಿಸಲು ಹಿರಿಯ ನಾಯಕರ ಹುಡುಕಾಟದಲ್ಲಿ ಬಿಜೆಪಿ ಶೆಟ್ಟರ್ ವಾಪಸಾತಿಯೇ ಸೂಕ್ತ ಎನ್ನಿಸಿದ್ದಂತಿದೆ..
ರತ್ನಗಂಬಳಿಯನ್ನೆನೋ ಹಾಕಿ ಶೆಟ್ಟರ್ ರನ್ನು ಬಿಜೆಪಿ ಬರಮಾಡಿಕೊಂಡಿದೆ. ಆದರೆ ಮತ್ತೆ ಸ್ಥಳೀಯ ಮಟ್ಟದ ಶಾಸಕರಲ್ಲಿ, ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಒಗ್ಗೂಡಿಸುವುದು ಶೆಟ್ಟರ್ ಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಇನ್ನೂ ಸಂಘ ಪರಿವಾರದ ವಿರುದ್ಧ ಶೆಟ್ಟರ್ ನಾಲಿಗೆ ಹರಿಬಿಟ್ಟಿದ್ದು ಕೂಡ ಅವರಿಗೆ ಮೈನಸ್ ಆಗಿದ್ದು, ಸಂಘ ಪರಿವಾರದ ನಂಬಿಕೆ ಗಳಿಸಿಕೊಳ್ಳಲು ಶೆಟ್ಟರ್ ಹರಸಾಹಸ ಪಡಬೇಕಾಗಿದೆ.ಒಟ್ಟಿನಲ್ಲಿ ಶೆಟ್ಟರ್ ಆಗಮನ ಬಿಜೆಪಿ ಸಿಹಿ ಮತ್ತು ಕಹಿ ನೀಡುತ್ತಿದೆ. ಎಲ್ಲವನ್ನೂ ಮರೆತು ಪಕ್ಷವನ್ನು ಕಟ್ಟಬೇಕಾಗಿರುವ ಜವಾಬ್ದಾರಿ ಶೆಟ್ಟರ್ ಮತ್ತು ಕಾರ್ಯಕರ್ತರ ಮೇಲಿದೆ. ಆದರೆ ಬಿಜೆಪಿ ಹೈಕಮಾಂಡ್ ಈ ತಂತ್ರಗಾರಿಕೆ ಯಾವ ಮಟ್ಟದ ಯಶಸ್ವಿ ಆಗುತ್ತೆ ಅಂತ ಕಾದುನೋಡಬೇಕಿದೆ..
ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ
ಕಾಂಗ್ರೆಸ್ ಪಕ್ಷದಲ್ಲಿ ಜಗದೀಶ್ ಶೆಟ್ಟರ್, ಅವರಿಗೆ ಯಾವುದೇ ಅನ್ಯಾಯ, ಅವಮಾನ ಆಗಿಲ್ಲ: ಸಿಎಂ
‘ಕಳೆದ ಬಾರಿ ಬಂದಾಗ ಮೊಟ್ಟೆ ಎಸೆದಿದ್ದರು, ಈ ಬಾರಿ ಹೂವಿನ ಸುರಿಮಳೆ ಸುರಿಸಿದ್ದಾರೆ’
27ರಂದು ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ, 900ಕ್ಕೂ ಹೆಚ್ಚು ಅಪೇಕ್ಷಿತರು: ಪ್ರೀತಂ ಗೌಡ




