Wednesday, December 4, 2024

Latest Posts

ಜಗದೀಶ್ ಶೆಟ್ಟರ್‌ಗೆ ಮತ್ತೊಮ್ಮೆ ಮುಖಭಂಗ: ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ

- Advertisement -

Hubballi News: ಹುಬ್ಬಳ್ಳಿ: ಡಿಸಿಎಂ ಡಿ.ಕೆ.ಶಿವಕುಮಾರ್, ನೀಡಿದ್ದ ಟಾಸ್ಕ್‌ ನೆರವೇರಿಸಲಾಗದೇ, ಜಗದೀಶ್ ಶೆಟ್ಟರ್ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ. ಇಂದು ಹುಬ್ಬಳ್ಳಿ- ಧಾರವಾಡ ಮೇಯರ್ ಎಲೆಕ್ಷನ್ ನಡೆದಿದ್ದು, ಈ ಬಾರಿಯೂ ಬಿಜೆಪಿ ಗದ್ದುಗೆ ಹಿಡಿದು ಸಂಭ್ರಮಿಸಿದೆ.

ಆಪರೇಷನ್ ಹಸ್ತ ಮಾಡಿ, ಬಿಜೆಪಿಯಿಂದ ಸದಸ್ಯರನ್ನು ಕಾಂಗ್ರೆಸ್‌ಗೆ ತರುವ ರಣತಂತ್ರ ಫ್ಲಾಪ್ ಆಗಿದ್ದು, 22ನೇ ಅವಧಿಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಮೇಲೆ ಬಿಜೆಪಿ ಧ್ವಜವೇ ಹಾರಿದೆ. ಮೇಯರ್ ಆಗಿ ವೀಣಾ ಭರದ್ವಾಡ, ಉಪಮೇಯರ್ ಆಗಿ ಸತೀಶ್ ಹಾನಗಲ್ ಆಯ್ಕೆ ಆಗಿದ್ದಾರೆ.

ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ್ ಸಮ್ಮುಖದಲ್ಲಿ ಕೈ ಎತ್ತುವ ಮೂಲಕ‌ ಆಯ್ಕೆ ನಡೆದಿದ್ದು, ಪಾಲಿಕೆ ಸದಸ್ಯರೆಲ್ಲ ಬಿಜೆಪಿ ಸದಸ್ಯರನ್ನ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಸುವರ್ಣ ಕಲ್ಲಕುಂಟ್ಲ 37 ಮತಗಳು ಪಡೆದು ಸೋಲನ್ನಪ್ಪಿದರೆ, ಬಿಜೆಪಿ ಮೇಯರ್ ಅಭ್ಯರ್ಥಿ 46 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಈ ಬಾರಿಯೂ ಹುಬ್ಬಳ್ಳಿ- ಧಾರವಾಡ ಮೇಯರ್ ಉಪಮೇಯರ್ ಪಟ್ಟ ಬಿಜೆಪಿಗೆ ಸಿಕ್ಕಿದೆ.

ಅಭಿಷೇಕ್- ಅವಿವಾ ವಿವಾಹಕ್ಕೆ ಶುಭಕೋರಿದ ಮಾಜಿ ಪ್ರಧಾನಿ ದೇವೇಗೌಡರು

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಶಾಕ್: ಧಾರವಾಡಕ್ಕೆ ಎಂಟ್ರಿ ಕೊಡಲು ಅನುಮತಿ ನಿರಾಕರಿಸಿದ ಕೋರ್ಟ್

ರಶ್ಮಿಕಾ ಮಂದಣ್ಣಾಗೆ 80 ಲಕ್ಷ ರೂಪಾಯಿ ಮೋಸ ಮಾಡಿದ್ರಾ ಮ್ಯಾನೇಜರ್..?

- Advertisement -

Latest Posts

Don't Miss