Hubli News: ಹುಬ್ಬಳ್ಳಿ: ಲೋಕಸಭೆ ಟಿಕೆಟ್ ವಿಚಾರವಾಗಿ ನನ್ನ ಜೊತೆ ಇನ್ನೂ ಯಾವ ಚರ್ಚೆಗಳಾಗಿಲ್ಲ. ಪಕ್ಷದ ವರಿಷ್ಠರು ಯಾವ ಕ್ಷೇತ್ರಕ್ಕೂ ಸ್ಪರ್ಧಿಸುವಂತೆ ಸೂಚನೆ ನೀಡಿದರೆ ನಾನು ಸ್ಪರ್ಧಿಸಲು ಸಿದ್ಧ. ಧಾರವಾಡ, ಬೆಳಗಾವಿ ಕ್ಷೇತ್ರಗಳ ಬಗ್ಗೆ ಪಕ್ಷದ ನಾಯಕರ ಜೊತೆ ಯಾವುದೇ ಚರ್ಚೆಗಳಾಗಿಲ್ಲ. ಎಲ್ಲೇ ಸ್ಪರ್ಧೆ ಮಾಡುವಂತೆ ಸೂಚನೆ ಬಂದರೂ ಸಿದ್ಧ. ಅಥವಾ ಪಕ್ಷದ ಸಂಘಟನೆ ಸೂಚನೆ ನೀಡಿದ್ರೂ ಅದಕ್ಕೆ ನಾನು ಸಿದ್ಧ. ಇದರ ಬಗ್ಗೆ ಪಕ್ಷದ ವರಿಷ್ಠರೇ ತೀರ್ಮಾನ ಕೈಗೊಳ್ಳುತ್ತಾರೆ. ಮತ್ತೊಮ್ಮೆ ಲೋಕಸಭಾ ಸ್ಪರ್ಧೆಯ ಇಂಗಿತವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ವ್ಯಕ್ತಪಡಿಸಿದ್ದಾರೆ.
ಹಿರಿಯ ಸಂಸದರಿಗೆ ಟಿಕೆಟ್ ಕೈ ತಪ್ಪುವ ವಿಚಾರದ ಪ್ರತಿಕ್ರಿಯೆ ನೀಡಿದ ಜದೀಶ್ ಶೆಟ್ಟರ್ ಅವರು, ಈ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಗಳಾಗುತ್ತಿವೆ. ಆದ್ರೆ ದೆಹಲಿಮಟ್ಟದಲ್ಲಿ ಯಾವ ನಿರ್ಣಯಗಳಾಗುತ್ತಿವೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಆದಷ್ಟು ಬೇಗನೆ ಸರ್ಪೈಜ್ ಕೊಡುತ್ತೇನೆ ಎಂದರು.
ಆಂಧ್ರಪ್ರದೇಶ ಲೋಕಸಭೆ ಚುನಾವಣೆಗೆ ಬಿಜೆಪಿ, ಟಿಡಿಪಿ,ಜೆಎಸ್ಪಿ ಮೈತ್ರಿ ಸ್ಪರ್ಧೆ
ಜಪಾನ್ನಲ್ಲಿ ಅಮೀರ್ ಖಾನ್ ಮಗ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ಪಾರ್ಟಿ..