Saturday, July 5, 2025

Latest Posts

ಜಗದೀಶ್ ಶೆಟ್ಟರ್ ಲೋಕಸಭಾ ಅಭ್ಯರ್ಥಿ ಆಗಬೇಕು, ನನ್ನಿಂದ ಮುಕ್ತ ಆಹ್ವಾನ: ಶಾಸಕ ಮಹೇಶ್ ಟೆಂಗಿನಕಾಯಿ

- Advertisement -

Political News: ಹುಬ್ಬಳ್ಳಿ: ರಾಮಮಂದಿರ ಉದ್ಘಾಟನೆ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರನ್ನು ಉದ್ಘಾಟನೆಗೆ ಆಹ್ವಾನ ಕೊಡುವುದು ಟ್ರಸ್ಟ್’ನ ಕಮಿಟಿಗೆ ಬಿಟ್ಟ ವಿಚಾರ. ಹೀಗಾಗಿ ಪಕ್ಷದಿಂದ ಯಾರನ್ನು ಕಡೆಗಣಿಸುವ ಪ್ರಶ್ನೆಯಿಲ್ಲ, ಕಾರ್ಯಕ್ರಮಕ್ಕೆ ಜ.22 ರವರೆಗೆ ಸಮಯ ಅವಕಾಶವಿದ್ದು, ಆಹ್ವಾನಿಸಬಹುದು ಎಂದು ಶಾಸಕ ಮಹೇಶ ತೆಂಗಿನಕಾಯಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರು ಮಂದಿರ ನಿರ್ಮಾಣಕ್ಕೆ ಮುತುವರ್ಜಿವಹಿಸಿದ್ದಾರೆ. ಅವತ್ತಿನ ಮೆರವಣಿಗೆಗೆ ನರೇಂದ್ರ ಮೋದಿ ಅವರು ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಯಾರನ್ನು ಕಡೆಗಣಿಸುವ ಪ್ರಶ್ನೆಯಿಲ್ಲ, ಮೊದಲ ಹಂತದಲ್ಲಿ ಸ್ವಾಮೀಜಿ ಅವರನ್ನು ಕರೆದಿದ್ದಾರೆ. ಎರಡನೇ, ಮೂರನೇ ಹಂತದಲ್ಲಿ ಕರೆಯಬಹುದು ಎಂದರು.

ಅಡ್ವಾಣಿ ಅವರು ನಮ್ಮ ಸರ್ವೋಚ್ಚ ನಾಯಕರು, ಪ್ರತಿ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ಭೇಟಿಯಾಗಿ ಸಲಹೆ ಪಡೆದುಕೊಂಡಿರುತ್ತಾರೆ. ಪಕ್ಷದ ವಿಷಯ ಬಂದಾಗ ಅವರನ್ನು ಮುಂದಿಟ್ಟುಕೊಂಡೇ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ರಾಮಮಂದಿರ ನಮ್ಮ ಪಕ್ಷದ ಅಜೆಂಡಾ ಅಲ್ಲ ಎಂದು ತಿಳಿಸಿದರು..

ಬೆಳಗಾವಿಯ ವಂಟಮೂರಿ ಘಟನೆಯನ್ನು ಬಿಜೆಪಿ ರಾಜಕೀಯ ಮಾಡುತ್ತಿಲ್ಲ, ಬದಲಾಗಿ ಕಾಂಗ್ರೆಸ್ ಇದನ್ನು ರಾಜಕೀಯಕ್ಕೆ ಬಳಕೆ ಮಾಡುತ್ತಿದೆ. ಇದುವರೆಗೆ ಗೃಹ ಸಚಿವರನ್ನು ಬಿಟ್ಟರೆ ಸಿಎಂ, ಡಿಸಿಎಂ ಯಾವೊಬ್ಬ ಸಚಿವರು ಭೇಟಿಯಾಗಲಿಲ್ಲ. ಜಗದೀಶ್ ಶೆಟ್ಟರ್ ಸಹಿತ ಹೋಗಿ ಮಾತನಾಡಿಸುವ ಕೆಲಸ ಮಾಡಲಿಲ್ಲ ಎಂದರು‌.

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದರಾದ ಪ್ರಲ್ಹಾದ್ ಜೋಶಿ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಈ ಮೂಲಕ ಧಾರವಾಡಕ್ಕೆ ಕೀರ್ತಿ ತರುವ ಕೆಲಸ ಮಾಡಿದ್ದಾರೆ. ಹೀಗಾಗಿ ಯಾವುದೇ ಆಕಾಂಕ್ಷಿಗಳಿಲ್ಲ. ಕೆಲವರು ಕೇಳಿದಕ್ಕೆ ಹೇಳಿಕೆ ಕೊಟ್ಟಿರಬಹುದು. ಆದರೆ ನಮ್ಮ ಅಪೇಕ್ಷೆ ಪ್ರಲ್ಹಾದ್ ಜೋಶಿ ಅವರು ಅಭ್ಯರ್ಥಿಯಾಗಬೇಕೆಂಬುದು. ಪಕ್ಷ ಏನೂ ತಿರ್ಮಾಣ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ಮೇಲೆ ಶೆಟ್ಟರ್ ಪ್ರಭಾವ ಬೀರಲಿದೆಯೇ ಎಂಬ ಪ್ರಶ್ನೆಗೆ ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಪಂಚರಾಜ್ಯ ಚುನಾವಣೆ ಮೇಲೆ ತಮ್ಮ ಪರಿಣಾಮ ಬೀರುತ್ತದೆ ಎಂದು ಹೇಳಿದರು ಅದರಂತೆ ನಿಜವಾಗಿಯೂ ಪರಿಣಾಮ ಬೀರಿದೆ. ಅವರು ಸೋಲು ಕಂಡಂತೆ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಯಲ್ಲಿ ಸೋಲು ಕಂಡಿದೆ. ಅವರು ಹೇಳಿದರಲ್ಲಿ ಯಾವುದೇ ತಪ್ಪಿಲ್ಲ ಎಂದು ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆಗೆ ಜಗದೀಶ್ ಶೆಟ್ಟರ್ ಅವರು ಸ್ಪರ್ಧೆ ಮಾಡಲಿ ಎಂದು ಶೇ.100 ರಷ್ಟು ಆಹ್ವಾನ ನೀಡುತ್ತೇನೆ. ಈ ಬಾರಿ ರಾಜ್ಯದಲ್ಲಿ 20-22 ಸ್ಥಾನದಲ್ಲಿ ಜಯಗಳಿಸಲಿದೆ. ಇದೀಗ ಕಾಂಗ್ರೆಸ್ ಕೇವಲ ಯಾವುದೇ ಹವಾ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಲೋಕಸಭಾ ಮುನ್ನ, ಬಳಿಕ ಬಹುದೊಡ್ಡ ರಾಜಕೀಯ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಯಾವುದೇ ಕಾರಣಕ್ಕೆ ಟಿಪ್ಪು ಸುಲ್ತಾನ್ ಹೆಸರನ್ನು ಇಡಬಾರದು ಎಂದು ಈಗಾಗಲೇ ಪಕ್ಷದಿಂದ ವಿರೋಧ ಮಾಡಿದ್ದೇವೆ. ಸದನದಲ್ಲಿ ಮಾತನಾಡಿದ್ದೇವೆ. ಆದರೂ ಸರ್ಕಾರ ಮುಂದಾದರೆ ನಾವು ವಿರೋಧ ಮಾಡತ್ತೇವೆ ಎಂದು ಮಹೇಶ ತೆಂಗಿನಕಾಯಿ ತಿಳಿಸಿದರು.

ಪ್ರಧಾನಿ ಮೋದಿಯವರನ್ನು ಭೇಟಿಯಾಗ ಹೊರಟ ಸಿಎಂಗೆ ಆರ್.ಅಶೋಕ್ ಕಿವಿಮಾತು

ಕುಮಾರಸ್ವಾಮಿನೇ ಇರ್ತಾರೋ ಇಲ್ವೋ ಗೊತ್ತಿಲ್ಲಾ: ಮಾಜಿ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಆರೋಗ್ಯ ಸಚಿವರು

2ನೇಯ ಮದುವೆ ಬಗ್ಗೆ ಮಾತನಾಡಿದ ನಟಿ ಸಮಂತಾ

- Advertisement -

Latest Posts

Don't Miss