Chamaraj Nagar News: ಚಾಮರಾಜನಗರ: ಚಾಮರಾಜನಗರದಲ್ಲಿ ಇಂದು ಮಾತನಾಡಿದ ಬಿಜೆಪಿ ಹಿರಿಯ ನಾಯಕ, ಶಾಸಕ ಯತ್ನಾಳ್ ಹರಿಹಾಯ್ದಿದ್ದಾರೆ.
ಆಪರೇಷನ್ ಹಸ್ತ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ್, ಜಗದೀಶ್ ಶೆಟ್ಟರ್ ಇಂತಹ ಹಲ್ಕಾ ಕೆಲಸ ಬಿಡಬೇಕು. ಗ್ರಾಮ ಪಂಚಾಯತಿ ಸದಸ್ಯನಾಗಲು ಯೋಗ್ಯವಿಲ್ಲದವನನ್ನು ಬಿಜೆಪಿ ಸಿಎಂ ಮಾಡಿತ್ತು. ಮಂತ್ರಿ ಸ್ಥಾನ ಸೇರಿದಂತೆ ಹಲವಾರು ಹುದ್ದೆ ನೀಡಿತ್ತು. ಆ ವ್ಯಕ್ತಿ ಕಾಂಗ್ರೆಸ್ ಗೆ ಹೋಗಿ ಈಗ ಬಿಜೆಪಿ ಬಗ್ಗೆ ಮಾತನಾಡುತ್ತಾನೆ, ಆ ನೈತಿಕತೆ ಅವನಿಗಿಲ್ಲ. ಉತ್ತರ ಕರ್ನಾಟಕದಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿ ಮಾಜಿ ಶಾಸಕರನ್ನು ಮಾರಾಟ ಮಾಡುವ ಅಂಗಡಿ ತೆರೆದಿದ್ದಾರೆ. ಈಗ ಬಿಜೆಪಿ ಮಾಜಿ ಶಾಸಕರನ್ನು ವ್ಯಾಪಾರ ಮಾಡುವ ಕೆಲಸಕ್ಕಿಳಿದಿದ್ದಾನೆ. ಇಂತಹ ಹಲ್ಕಾ ಕೆಲ್ಸ ವನ್ನು ಶೆಟ್ಟರ್ ಬಿಡಬೇಕು ಎಂದು ಶೆಟ್ಟರ್ ವಿರುದ್ಧ ಯತ್ನಾಳ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಯಲ್ಲಿ ವಿ.ಸೋಮಣ್ಣ ಕಡೆಗಣನೆ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಯತ್ನಾಳ್, ಅವರನ್ನು ಬಿಜೆಪಿ ಕಡೆಗಣಿಸಿಲ್ಲ. ಅವರಿಗೆ ಮುಂದೆ ಪಕ್ಷದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದಿದ್ದಾರೆ. ಬರ ಅಧ್ಯಯನ ತಂಡದಲ್ಲಿ ಸೋಮಣ್ಣನನ್ನ ಕೈ ಬಿಟ್ಟ ವಿಚಾರದ ಬಗ್ಗೆ ಮಾತನಾಡಿದ ಅವರು, ತಂಡದಲ್ಲಿ ಇಲ್ಲ ಅಂದ್ರೆ ಮುಂದೆ ಪಕ್ಷ ಒಳ್ಳೆಯ ಸ್ಥಾನ ನೀಡುತ್ತೆ ಎಂದರ್ಥ ಎಂದಿದ್ದಾರೆ.
ಇನ್ನು ವಿ.ಸೋಮಣ್ಣ ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ್, ಕಾಂಗ್ರೆಸ್ ಗೆ ಹೋದ್ರೆ ಮಣ್ಣು ತಿನ್ನಬೇಕು ಅಷ್ಟೇ. ಅವರೇ 136 ಜನ ಇದ್ದಾರೆ ಅವರಿಗೆ ಸರಿಯಾದ ಸ್ಥಾನ ಸಿಕ್ಕಿಲ್ಲ. ಇನ್ನ ಸೋಮಣ್ಣ ಹೋದ್ರೆ ಅವರಿಗೇನು ಸಿಗುತ್ತೆ. ಈಗ ನಮಗೆ ಲೋಕಸಭೆ ಚುನಾವಣೆ ಅಷ್ಟೇ ಬೇಕು. ಮೋದಿ ಮತ್ತೊಮ್ಮೆ ಪಿಎಂ ಆಗಲು ಹಗಲು ರಾತ್ರಿ ದುಡಿಯಬೇಕು ಭಾರತ ಭಾರತವಾಗಿ ಉಳಿಯಬೇಕು. ಭಾರತ ಮತ್ತೊಂದು ಇಸ್ರೇಲ್ ವಿರುದ್ದ ಹೋಗಿರುವ ಹಮಾಸ್ ಆಗಬಾರದು. ಅದಕ್ಕಾಗಿ 2024ಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದು ಯತ್ನಾಳ್ ಅಭಿಪ್ರಾಯ ಪಟ್ಟಿದ್ದಾರೆ.
ಕೆಎಇ ಮತ್ತು ಎಫ್.ಡಿ. ಎ… ಎಸ್.ಡಿ. ಎ. ಪರೀಕ್ಷೆ ಅಕ್ರಮ ಕುರಿತ ಯತ್ನಾಳ್ ಮಾತನಾಡಿದ್ದು, ಅಕ್ರಮದ ಕಿಂಗ್ ಪಿನ್ ಗಳೆಲ್ಲರು ಕಾಂಗ್ರೆಸ್ ನವರು. ಪಿಎಸ್ಐ ಹಗರಣ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ದ ಮಾತನಾಡುತ್ತಿದ್ದರು. ಈಗ ನಿಮ್ಮದೇ ಸರ್ಕಾರ ಇದೆ ಸಿಬಿಐ ತನಿಖೆ ಮಾಡಿ. ನೀವು ಐದು ತಿಂಗಳಾದರೂ ಯಾವ ತನಿಖೆ ಮಾಡಿಲ್ಲ. ನಿಮಗೆ ಧಮ್, ತಾಖತ್ ಇದ್ರೆ ತನಿಖೆ ಮಾಡ್ಸಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನೇನು ಮಾಡ್ತೀನಿ ಅಂತ ಹೇಳ್ತಿದ್ರು. ಈಗ ಪ್ರಿಯಾಂಕ್ ಖರ್ಗೆ ಎಲ್ಲಿ ಹೋದರು? ಕಾಂಗ್ರೆಸ್ ಪಕ್ಷದವರೇ ಅಕ್ರಮದ ಕಿಂಗ್ ಪಿನ್ ಆಗಿದ್ದಾರೆ. ಇದೆಲ್ಲಾ ನೋಡಿದರೆ ಪಿಎಸ್ಐ ಹಾಗು ಕೆಎಇ ಪರೀಕ್ಷಾ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಕೈವಾಡ ಇದೆ ಎನಿಸುತ್ತದೆ. ನಮ್ಗೆ ಪೇ ಸಿಎಂ ಅಂತ ಹೇಳ್ತಿದ್ರು, ಇಲ್ಲಿ ಪೇ. ಡಿಸಿಎಂ ಆಗಿದೆ. ಇದನ್ನ ಬಿಟ್ಟು ಸಿಎಂ ಅಕೌಂಟ್ ಓಪನ್ ಇದೆ. ಈಗ ಗುತ್ತಿಗೆದಾರರು ಎರಡು ಕಡೆ ಪರ್ಸಂಟೇಜ್ ಕೊಡ್ಬೇಕು ಎಂದು ಯತ್ನಾಳ್ ಆರೋಪಿಸಿದ್ದಾರೆ.
ಜನತಾ ದರ್ಶನದಲ್ಲಿ ಮನೆಗಾಗಿ ಮೊರೆ ಇಟ್ಟ ವಿಶೇಷ ಚೇತನ ಮಹಿಳೆ: ಇದಕ್ಕೆ ಸಚಿವ ಲಾಡ್ ಹೇಳಿದ್ದೇನು..?
ಮಳೆಗೆ ಧನ್ಯವಾದ ತಿಳಿಸಿದ ಸಚಿವ ಲಾಡ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ..!
‘ಕುಮಾರಸ್ವಾಮಿಯವರು ಇಲ್ಲಿ ಬರುತ್ತಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’