Friday, December 6, 2024

Latest Posts

ಟೀಕಿಸಿದವರನ್ನು ನಾಯಿ ಎಂದು, ತಮ್ಮನ್ನು ಆನೆ ಎಂದು, ಕೊಟ್ಟ ಹೇಳಿಕೆ ಸಮರ್ಥಿಸಿಕೊಂಡ ಜಗ್ಗೇಶ್

- Advertisement -

Sandalwood News: ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ನಿರ್ದೇಶಕ ಗುರುಪ್ರಸಾದ್ ಬಗ್ಗೆ ನವರಸ ನಾಯಕ ಜಗ್ಗೇಶ್ ಕೆಲವೊಂದು ವಿಷಯಗಳನ್ನು ಹೇಳಿದ್ದರು.

ಗುರುಪ್ರಸಾದ್ ಮಾಡಿಕೊಂಡ ಸಾಲದ ಬಗ್ಗೆ, ಅವರಿಗಿದದ್ದ ಚಟದ ಬಗ್ಗೆ, ಬ್ರಾಹ್ಮಣ್ಯ ಪಾಲಿಸದ ಬಗ್ಗೆ, ತಾಯಿಗೆ ಬೈಯ್ಯುವ ಬಗ್ಗೆ, ಪತ್ನಿಯೊಂದಿಗೆ ಸರಿಯಾಗಿ ಸಂಸಾರ ನಡೆಸದ ಬಗ್ಗೆ, ಅವರಿಗಿದ್ದ ರೋಗದ ಬಗ್ಗೆ, ಗುರುಪ್ರಸಾದ್ ತಮಗೆ ಮಾಡಿದ ಅವಮಾನದ ಬಗ್ಗೆ, ಹೀಗೆ ಹಲವು ವಿಷಯಗಳ ಬಗ್ಗೆ ಹೇಳಿದ್ದರು. ಇದರಿಂದ ಹಲವರಿಗೆ ಬೇಸರವಾಗಿದ್ದು, ಜಗ್ಗೇಶ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡ ಬಳಿಕವೂ, ಸಾವಿನಲ್ಲಿ ಸುಖ ಕಾಣುವ ಸೈಕೋ ಅಂತೆಲ್ಲ ಜಗ್ಗೇಶ್ ಬಗ್ಗೆ ಮಾತನಾಡಿದ್ದರು. ಈ ಮಾತಿಗೆ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಉತ್ತರಿಸಿದ್ದಾರೆ. ತಾವು ಕೊಟ್ಟ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತದೆ ಅದಕ್ಕೆ Scientific ಕಾರಣ “ಭಯ” ಎರಡನೆಯದು ಏನು ನಾವು ನೆಲದಷ್ಟೆ ಹೀಗಿದ್ದೇವೆ ಆನೆ ಮಾತ್ರ ಮುಗಿಲೆತ್ತರ ಬೆಳದಿದೆ ಎಂಬ ಸಂಕಟ. ತಾತ್ಪಾರ್ಯ: ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು. ಶ್ವಾನವು ಅವುಗಳ ಕೆಲಸ ಮಾಡದೆ ಬೇರೆ ವಿಧಿಯಿಲ್ಲಾ ಬೊಗಳುತ್ತದೆ. ಆನೆಯಾಗಲು ಯೋಗ ಬೇಕು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

- Advertisement -

Latest Posts

Don't Miss