National News: ಜನವರಿ 22ರಂದು ನಡೆಯುವ ಅಯೋಧ್ಯಾ ರಾಮಮಂದಿರ ಕಾರ್ಯಕ್ರಮಕ್ಕೆ ಆಹ್ವಾನ ಬಂದರೂ, ನನಗೆ ಹೋಗಲಾಗುತ್ತಿಲ್ಲ. ಈ ಬಗ್ಗೆ ನನಗೆ ಬೇಸರವಿದೆ ಎಂದು ಜಗ್ಗಿ ವಾಸುದೇವ್ ಗುರೂಜಿ ಹೇಳಿದ್ದಾರೆ.
ಇನ್ನನು ಜಗ್ಗಿ ವಾಸುದೇವ್ ಗುರೂಜಿ ಯಾಕೆ ಅಯೋಧ್ಯಾ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲವೆಂದರೆ, ಅವರಿಗೆ ಈ ಮೊದಲೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕಾರ್ಯಕ್ರಮ ನಿಗದಿಯಾಗಿದೆ. ಈ ಕಾರಣಕ್ಕೆ ಅವರು ಸಿಡ್ನಿಗೆ ಹೋಗಬೇಕಾಗಿದೆ. ಈ ಕಾರಣಕ್ಕಾಗಿ ಗುರೂಜಿಗೆ, ಅಯೋಧ್ಯೆಯ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇದು ನನ್ನ ದುರಾದೃಷ್ಟವೆಂದು ಜಗ್ಗಿ ವಾಸುದೇವ್ ಹೇಳಿದ್ದಾರೆ.
ಇನ್ನು ಕೆಲ ಮಠಾಧೀಶರು, ಅಯೋಧ್ಯಾ ರಾಾಮಮಂದಿರ ಅಪೂರ್ಣವಾಗಿದ್ದು, ಅದನ್ನು ಉದ್ಗಾಟನೆ ಮಾಡುತ್ತಿರುವ ಕಾರಣಕ್ಕೆ, ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗುವುದನ್ನು ಅವರು ಬಹಿಷ್ಕರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಜಗ್ಗಿ ವಾಸುದೇವ್ ಗುರೂಜಿ, ಮೂರು ಅಂತಸ್ತಿನ ದೇವಸ್ಥಾನದ್ಲಲಿ ಒಂದು ಅಂತಸ್ತು ಪೂರ್ಣವಾಗಿದೆ. ಅಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೊಳ್ಳಲಿದ್ದಾನೆ. ಹಾಗಾಗಿ ಆ ದೇವಸ್ಥಾನ ಉದ್ಘಾಟನೆ ಅಪೂರ್ಣವೆನ್ನಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ.