Monday, June 23, 2025

Latest Posts

ಮೆದುಳು ಶಸ್ತ್ರ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಜಗ್ಗಿ ವಾಸುದೇವ್ ಗುರೂಜಿ

- Advertisement -

National News: ಸದ್ಗುರು ಜಗ್ಗಿ ವಾಸುದೇವ್ ಗುರೂಜಿ ಅವರಿಗೆ ಮೆದುಳಿನ ಶಸ್ತ್ರ ಚಿಕಿತ್ಸೆಯಾಗಿದ್ದು. ರಕ್ತಸ್ರಾವ ಮತ್ತು ಮೆದುಳು ಊದಿದ್ದ ಕಾರಣ, ಗುರೂಜಿ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಡಾ.ವಿನೀತ್ ಸೂರಿ, ಡಾ.ಪ್ರಣವ್ ಕುಮಾರ್, ಡಾ.ಸುಧೀರ್ ತ್ಯಾಗಿ, ಡಾ.ಎಸ್.ಚಟರ್ಜಿ ಎಂಬುವವರು ಸದ್ಗುರು ಜಗ್ಗಿ ವಾಸುದೇವ್ ಗುರೂಜಿಗೆ ಚಿಕಿತ್ಸೆ ನೀಡುತ್ತಿದ್ದರು. ಪ್ರಧಾನಿ ಮೋದಿ, ಕೇಂದ್ರ ಸಚಿವ ಎಸ್‌.ಜಯಶಂಕರ್ ಸೇರಿ ಹಲವು ರಾಜಕೀಯ ಗಣ್ಯರು, ಸೆಲೆಬ್ರಿಟಿಗಳು ಜಗ್ಗಿ ವಾಸುದೇವ್ ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ್ದರು.

ಮಾರ್ಚ್ 17ರಂದು ಗುರೂಜಿ, ದೆಹಲಿಯ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಜಗ್ಗಿ ವಾಸುದೇವ್ ಗುರೂಜಿ ತೀವ್ರ ತಲೆನೋವಿನಿಂದ ಬಳಲುತ್ತಿದ್ದು, ಸಾಮಾನ್ಯ ತಲೆನೋವೆಂದು ತಿಳಿದು ಸುಮ್ಮನಾಗಿದ್ದಾರೆ. ಆದರೆ ಮಾರ್ಚ್ 14ರಂದು ದೆಹಲಿಗೆ ಬಂದಿದ್ದಾಗ, ಗುರೂಜಿಗೆ ತೀವ್ರ ತಲೆನೋವಾಗಿದೆ. ಈ ವೇಳೆ ವೈದ್ಯರ ಬಳಿ ಹೋದಾಗ, ಮೆದುಳು ಊದಿಕೊಂಡು, ರಕ್ತಸ್ರಾವವಾಗಿದ್ದು ಗೊತ್ತಾಗಿದೆ. ಹಾಗಾಗಿ ಆಸ್ಪತ್ರೆಗೆ ದಾಖಲಿಸಿ, ಆಪರೇಷನ್ ಮಾಡಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜಗ್ಗಿ ವಾಸುದೇವ್, ನಾನು ಆರೋಗ್ಯವಾಗಿದ್ದೇನೆ. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿದ್ದೇನೆ. ಇಲ್ಲಿನ ವೈದ್ಯರು ನನ್ನ ತಲೆಯಲ್ಲಿ ಹೇನು ಹುಡುಕಲು ಹೋಗಿದ್ದರು. ಆದರೆ ಹೇನು ಸಿಗಲಿಲ್ಲ. ಕೊನೆಗೆ ಬ್ಯಾಂಡೇಜ್ ಹಾಕಿದ್ದಾರೆಂದು ತಮಾಷೆ ಮಾಡಿದ್ದಾರೆ. ಜೊತೆಗೆ ಮೆದುಳಿಗೆ ಯಾವುದೇ ಹಾನಿಯಾಗಿಲ್ಲವೆಂದು ಹೇಳಿದ್ದರು. ಇದೀಗ ಗುರೂಜಿ ಸುಧಾರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಹುಟ್ಟುಹಬ್ಬದ ದಿನ ಪತ್ನಿ, ಮಗುವಿನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಟ ರಾಮ್‌ ಚರಣ್

ಈ ಸವಾಲು ಸ್ವೀಕರಿಸುವ ದಮ್ಮು ತಾಕತ್ತು ನಿಮಗಿದೆಯಾ?: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಳಗಾವಿಯಲ್ಲಿ ಶೆಟ್ಟರ್ ಪರ ಮಾಜಿ ಸಿಎಂ ಯಡಿಯೂರಪ್ಪ ಭರ್ಜರಿ ಕ್ಯಾಂಪೇನ್

- Advertisement -

Latest Posts

Don't Miss