‘|| ಜೈ ಶ್ರೀರಾಮ್ || ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ’

Political News: ಇಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಡೆಯುತ್ತಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬವೂ ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸಂತಸ ವ್ಯಕ್ತಪಡಿಸಿದ್ದು, ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ ಎಂದಿದ್ದಾರೆ.‌

|| ಜೈ ಶ್ರೀರಾಮ್ || ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ.‌ ಅಸಂಖ್ಯಾತ ಕರಸೇವಕರ ಹೋರಾಟ, ತ್ಯಾಗ-ಬಲಿದಾನದ ಫಲ ಸಾಕಾರವಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಪ್ರಧಾನಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನೆರವೇರುತ್ತಿದೆ. ಈ ಎಲ್ಲಾ ಕರಸೇವಕರ ಪರಿಶ್ರಮದ ಫಲದಿಂದ ಇಂತಹ ದಿವ್ಯಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವ ಪುಣ್ಯ ನನಗೆ ಧಕ್ಕಿದೆ ಮತ್ತು ಶ್ರೀರಾಮ ದೇವರಿಗೆ ಭಕ್ತಿ ಸಮರ್ಪಣೆ ಮಾಡುವ ಸುದೈವವೂ, ಅವಕಾಶವು ನನ್ನದಾಗಿದೆ. ಎಲ್ಲ ಕರಸೇವಕರನ್ನೂ ಸ್ಮರಿಸುತ್ತಾ, ಈ ಸುಸಂದರ್ಭದಲ್ಲಿ ಸಮಸ್ತ ರಾಮಭಕ್ತರಿಗೆ ಶುಭಾಶಯಗಳನ್ನು ಕೋರುತ್ತೇನೆ. ಪ್ರತಿಯೊಬ್ಬರಿಗೂ ಆ ರಾಮದೇವರು ಸುಖ-ಶಾಂತಿ, ನೆಮ್ಮದಿ-ಸಮೃದ್ಧಿಯನ್ನು ಕರುಣಿಸಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ವಿಶೇಷ ವಿಮಾನದಲ್ಲಿ ಅಯೋಧ್ಯೆ ಕಾರ್ಯಕ್ರಮಕ್ಕೆ ಹೊರಟ ಮಾಜಿ ಪ್ರಧಾನಿಗಳ ಕುಟುಂಬ

ಅಯೋಧ್ಯೆ ರಾಮಮಂದಿರಕ್ಕೆ ಅಫ್ಘಾನಿಸ್ತಾನದಿಂದ ಬಂದಿದೆ ಉಡುಗೊರೆ

ಅಯೋಧ್ಯೆ ಹನುಮನ ಮಂದಿರದ ಅಂಗಳ ಗುಡಿಸಿದ ನಟಿ ಕಂಗನಾ

About The Author