International Stories: ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೂಲ್ಸ್ ಇರುತ್ತದೆ. ಕೆಲವು ಕೆಲಸಗಳನ್ನು ನಾವು ಆ ದೇಶದಲ್ಲಿ ಮಾಡಬಾರದು. ಅಪ್ಪಿ ತಪ್ಪಿ ಆ ಕೆಲಸವನ್ನು ಮಾಡಿದರೆ, ಫೈನ್ ಕಟ್ಟಬೇಕು ಅಥವಾ ಜೈಲಿಗೆ ಹೋಗಬೇಕು. ಹಾಗಾದರೆ ಯಾವ ದೇಶದಲ್ಲಿ ಯಾವ ರೂಲ್ಸ್ ಇದೆ ತಿಳಿಯೋಣ ಬನ್ನಿ..
ಈ ದೇಶದಲ್ಲಿ ನೀವು ಕ್ರಿಸ್‌ಮಸ್ ದಿನ ಬಿಸ್ಕೇಟ್ ತಿನ್ನುವ ಹಾಗಿಲ್ಲ. ಯುಕೆನಲ್ಲಿ ಕ್ರಿಸ್‌ಮಸ್ ಹಬ್ಬದ ದಿನ ಬಿಸ್ಕೇಟ್ ಮತ್ತು ಸ್ವೀಟ್ ಬನ್ ತಿನ್ನುವ ಹಾಗಿಲ್ಲ. ಅಪ್ಪಿ ತಪ್ಪಿ ಇದನ್ನು ತಿಂದಲ್ಲಿ, ಅಂಥವರನ್ನ ಅಪರಾಧಿ ಎನ್ನಲಾಗುತ್ತದೆ.
ಯುಕೆನಲ್ಲಿರುವ ಇನ್ನೊಂದು ರೂಲ್ಸ್ ಅಂದ್ರೆ, ಯಾರೂ ತಿಮಿಂಗಲನ್ನು ಮುಟ್ಟುವಂತಿಲ್ಲ. ಇದು ರಾಣಿ ಎಲಿಜಬೆತ್ ತಂದ ರೂಲ್ಸ್ ಆಗಿದ್ದು, ಇದನ್ನು ಆಕೆಯ ಆಸ್ತಿ ಎಂದು ಪರಿಗಣಿಸಲಾಗಿದೆ. ಹಾಗಾಗಿ ಈ ದೇಶದಲ್ಲಿ ಯಾರೂ ತಿಮಿಂಗಲನ್ನು ಹಿಡಿಯುವಂತಿಲ್ಲ.
ಯುಕೆನಲ್ಲಿರುವ ಮೂರನೇಯ ರೂಲ್ಸ್ ಅಂದ್ರೆ, ಪಾರ್ಲಿಮೆಂಟ್‌ನಲ್ಲಿ ಯಾರೂ ಸಾವನ್ನಪ್ಪುವಂತಿಲ್ಲ. ಇದಕ್ಕೆ ಏನು ಶಿಕ್ಷೆ ನೀಡುತ್ತಾರೆಂದು ಗೊತ್ತಿಲ್ಲ. ಆದರೆ ತೀರಿಹೋದವರ ಮನೆಜನರಿಗೆ ಶಿಕ್ಷೆಯಂತೂ ನೀಡಲಾಗುತ್ತದೆ.
ಚೀನಾದಲ್ಲಿರುವ ವಿಚಿತ್ರ ರೂಲ್ಸ್ ಅಂದ್ರೆ, ಯಾರಾದರೂ ನೀರಿನಲ್ಲಿ ಮುಳುಗುತ್ತಿದ್ದರೆ, ಅವನು ಈಜಿ ದಡ ಸೇರಬೇಕು ವಿನಃ, ಬೇರೆ ಯಾರೂ ಅವನನ್ನು ಕಾಪಾಡಬಾರದು. ಹಾಗೆ ಯಾರಾದರೂ ಅವನನ್ನು ಕಾಪಾಡಿದರೆ, ಅವರಿಗೆ ಅಲ್ಲಿನ ಸರ್ಕಾರ ಕಠಿಣ ಶಿಕ್ಷೆ ನೀಡುತ್ತದೆ. ಇನ್ನು ರೂಲ್ಸ್ ಮಾಡಿರೋದು ಯಾಕೆಂದರೆ, ಅಲ್ಲಿನ ಜನಸಂಖ್ಯೆಯ ಮಟ್ಟ ಇಳಿಸಲು ಈ ರೂಲ್ಸ್ ತರಲಾಗಿದೆ. ಹಾಗಾಗಿ ಚೀನಾದಲ್ಲಿ ಪ್ರತಿಯೊಬ್ಬರೂ ಈಜು ಕಲಿತಿರಬೇಕು.
ಫ್ರಾನ್ಸ್‌ನಲ್ಲಿರುವ ಒಂದು ರೂಲ್ಸ್ ಬಗ್ಗೆ ಕೇಳಿದ್ರೆ, ಹಿಂಗೂ ಇರತ್ತಾ ಅಂತಾ ಆಶ್ಚರ್ಯ ಪಡ್ತೀರಾ. ಯಾಕಂದ್ರೆ ಈ ದೇಶದಲ್ಲಿ ರೈಲ್ವೆ ಸ್ಟೇಶನ್‌ನಲ್ಲಿ ಪತಿ-ಪತ್ನಿ, ಗಂಡ- ಹೆಂಡತಿ ಪರಸ್ಪರ ಕಿಸ್ ಮಾಡುವಂತಿಲ್ಲ. ಪತಿಗೆ ಪತ್ನಿ ಅಥವಾ ಪತ್ನಿಗೆ ಪತಿ ಬೀಳ್ಕೊಡಲು ಬಂದಾಗ, ಕಿಸ್ ಮಾಡಿ ಕಳಿಸುವುದು ವಿದೇಶದಲ್ಲಿ ಕಾಮನ್. ಹಾಗಾಗಿ ಅಂಥ ತಪ್ಪೇನಾದರೂ ಮಾಡಿದರೆ, ನಿಮಗೆ ಫೈನ್ ಹಾಕೋದು ಅಥವಾ ಜೈಲಿಗೆ ಕಳಿಸೋದು ಗ್ಯಾರಂಟಿ. ಈ ಕಾರಣಕ್ಕೆ ಅಲ್ಲಿ ಕಿಸ್ಸಿಂಗ್ ಜೋನ್ ಎಂದು, ಒಂದು ರೂಮ್ ಕಿಸ್ಸಿಗಂತಲೇ ಮೀಸಲಿಡಲಾಗಿದೆ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..
ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..