ಯಾತ್ರಾರ್ಥಿಗಳಿದ್ದ ಟ್ರ‍್ಯಾಕ್ಟರ್‌ಗೆ ಟ್ರಕ್ ಢಿಕ್ಕಿ -ಪ್ರಧಾನಿ ಮೋದಿ ಸಂತಾಪ

Jaipura news:

ಜೈಪುರ: ಯಾತ್ರಾರ್ಥಿಗಳಿದ್ದ ಟ್ರ‍್ಯಾಕ್ಟರ್‌ಗೆ ಟ್ರಕ್ ಢಿಕ್ಕಿ ಹೊಡೆದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.

ಜೈಸಲ್ಮೇರ್‌ನ ರಾಮದೇವ್ರಾದ ಬಾಬಾ ರಾಮ್‌ದೇವ್ ದೇವಾಲಯಕ್ಕೆ ತೆರಳಿದ್ದ ಯಾತ್ರಾರ್ಥಿಗಳು ಟ್ರ‍್ಯಾಕ್ಟರ್‌ನಲ್ಲಿ ದೇವಾಲಯದಿಂದ ಹಿಂತಿರುಗುತ್ತಿದ್ದರು. ಈ ವೇಳೆ ಟ್ರ‍್ಯಾಕ್ಟರ್‌ಗೆ ಟ್ರಕ್ ಢಿಕ್ಕಿ ಹೊಡೆದಿದೆ ಎಂದು ಸುಮೇರ್‌ಪುರ ಪೊಲೀಸ್ ಠಾಣೆ ಪ್ರಭಾರಿ ರಾಮೇಶ್ವರ ಭಾಟಿ ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ಅವಘಡಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮುಖಾಂತರ ಸಂತಾಪ ಸೂಚಿಸಿದ್ದಾರೆ. ಪಾಲಿಯಲ್ಲಿ ಸಂಭವಿಸಿದ ಅಪಘಾತ ವಿಷಾದನೀಯ. ಜೀವ ಕಳೆದುಕೊಂಡವರ ಕುಟುಂಬಗಳ ಜೊತೆ ನಾವಿದ್ದೇವೆ ಎಂದು ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಸೊಮಾಲಿಯಾದ ಹೋಟೆಲ್ ಮೇಲೆ ಉಗ್ರರ ದಾಳಿ: ಬಾಂಬ್ ಸ್ಫೋಟ

 

ದಾಳಿ ಮರು ಕಳಿಸಲಿದೆ -ಮುಂಬೈ ಪೊಲೀಸರಿಗೆ ಪಾಕ್‌ ಸಂಖ್ಯೆಯಿಂದ ಬೆದರಿಕೆ ಕರೆ

About The Author