Sunday, September 8, 2024

Latest Posts

ಜಪಾನ್‌ ಸರಣಿ ಭೂಕಂಪ: ಮೃತರ ಸಂಖ್ಯೆ 62ಕ್ಕೆ ಏರಿಕೆ

- Advertisement -

International News: ಜಪಾನ್‌ನಲ್ಲಿ ಸರಣಿ ಭೂಕಂಪ ಸಂಭವಿಸಿದ್ದು, ಮೃತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಅಲ್ಲದೇ, ಸಾರ್ವಜನಿಕ ಆಸ್ತಿಪಾಸ್ತಿ, ಕಟ್ಟಡ, ವಾಹನಗಳು ಕೂಡ ಹಾನಿಗೊಳಗಾಗಿದೆ.

ಇನ್ನು ಜಪಾನ್ ಸ್ಥಿತಿ ಎಷ್ಟು ಅಸ್ತವ್ಯಸ್ತವಾಗಿದೆ ಎಂದರೆ, ಕೆಲವು ಪ್ರದೇಶದಲ್ಲಿ ವಾಸಿಸುತ್ತಿದ್ದ ಜನ, ತಮ್ಮ ಮನೆ ಬಿಟ್ಟು, ಪ್ರಾಣ ಉಳಿಸಿಕೊಳ್ಳಲು ಬೇರೆಡೆ ಹೋಗಬೇಕಾಗಿದೆ. ಇಶಿಕಾವಾದಲ್ಲಿ ನಡೆದ ಭೂಕಂಪಕ್ಕೆ, ಹಲವು ಸಾವು ನೋವು ಸಂಭವಿಸಿದೆ. 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಲ್ಲದೇ, ಕಟ್ಟಡಗಳು ಕೂಡ ಉರುಳಿ ಬಿದ್ದಿದೆ. ಈ ಕಾರಣಕ್ಕಾಗಿ ಜಪಾನ್‌ನ ಕೆಲವು ಕಡೆ, ಫೋನ್, ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.

ಜಪಾನ್ ಸೇನೆ ತನ್ನ 1000 ಸೈನಿಕರನ್ನು ಜನರ ರಕ್ಷಣೆಗಾಗಿ, ಅವರಿಗೆ ಊಟ, ನೀರು ನೀಡುವುದಕ್ಕಾಗಿ, ರಕ್ಷಣೆ ಕಾರ್ಯಕ್ಕೆ ಕಳಿಸಿದೆ. ಸದ್ಯ ಸಾವಿರ ಸಂಖ್ಯೆ 62ಕ್ಕೆ ಏರಿಕೆಯಾಗಿದ್ದು, ಇನ್ನು ಹಲವರು ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ, ಈ ಘಟನೆ ಬಳಿಕ, ಹಲವು ವಿಮಾನ ಮತ್ತು ರೈಲು ಪ್ರಯಾಣವನ್ನು ರದ್ದುಗೊಳಿಸಲಾಗಿದೆ.

ಗೋದ್ರಾ ದುರಂತ ಮರುಕಳಿಸುತ್ತದೆ ಅಂದ್ರೆ ಏನು..? ಹಿಂದೂಗಳನ್ನು ಸುಡ್ತೀರಾ..?: ಬೆಲ್ಲದ್ ಪ್ರಶ್ನೆ..

ನಾವು ರಾಮ ಭಕ್ತರಾಗಿ ಬಂದಿದ್ದೇವೆ,ಆಂಜನೇಯ ಆಗೋಕೆ ಬಿಡಬೇಡಿ: ಪೊಲೀಸರಿಗೆ ಆರ್.ಅಶೋಕ್ ಎಚ್ಚರಿಕೆ

“ರಾಮಭಕ್ತರನ್ನು ಕೆಣಕಿದರೆ ಕಾಂಗ್ರೆಸ್ ಸರ್ಕಾರ ಧೂಳಿಪಟವಾದೀತು ಎಚ್ಚರ”

- Advertisement -

Latest Posts

Don't Miss