Political News:
ಮೀಸಲಾತಿ ಬಗ್ಗೆ ಮತ್ತೆ ಗದ್ದಲ ಶುರುವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ತಾಯಿ ಮೇಲೆ ಆಣೆ ಮಾಡಿ ಕೊಟ್ಟ ಮಾತು ತಪ್ಪಿದ್ದಾರೆ. ಈಗಾಗಲೇ ಸರಕಾರ ನೀಡಿರುವ 2ಡಿ ಮೀಸಲಾತಿ ನಮಗೆ ತೃಪ್ತಿ ತಂದಿಲ್ಲ. 2ಎ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಖಡಕ್ ಆಗಿ ಹೇಳಿಕೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ಜ.12ರೊಳಗೆ 2ಎ ಮೀಸಲಾತಿ ಘೋಷಿಸಿ ನೋಟಿಫಿಕೇಷನ್ ಹೊರಡಿಸಬೇಕು. ಇಲ್ಲದಿದ್ದರೆ ಜ. 12ರಂದು ಶಿಗ್ಗಾಂವಿಯಲ್ಲಿರುವ ಸಿಎಂ ಬೊಮ್ಮಾಯಿ ನಿವಾಸದ ಬಳಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.http://ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವರಿಂದ ಬಗರ್ ಹುಕ್ಕುಂ ಸಾಗುವಳಿ ಪತ್ರ ವಿತರಣೆ
HDK ಹೊಸ ಬಾಂಬ್..! ಸಂಕ್ರಾಂತಿಗೆ ಕಾದಿದ್ಯಾ ನಾಯಕರಿಗೆ ಬಿಗ್ ಶಾಕ್…!?
ರಾಜ್ಯ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಸ್ಯಾಂಟ್ರೋ ರವಿ ವಿಚಾರ. ಇದೀಗ ಹೆಚ್ ಡಿ ಕುಮಾರಸ್ವಾಮಿ ಕೂಡಾ ಈ ಬಗ್ಗೆ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ಸ್ಯಾಂಟ್ರೋ ರವಿ ಜತೆ ಲಿಂಕ್ ಇರುವ ನಾಯಕರ ರಹಸ್ಯ ಸಿಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಳಿಯಿದ್ದು, ಸಂಕ್ರಾಂತಿಗೆ ರಿಲೀಸ್ ಆಗಬಹುದೆಂದು ವರದಿಯಾಗಿದೆ. ಹೆಚ್.ಡಿ ಕುಮಾರಸ್ವಾಮಿ, ‘ಸ್ಯಾಂಟ್ರೋ ರವಿ ಯಾರವ? ಸಿಎಂ ಅವನನ್ನ ಸಾರ್ ಎನ್ನುತ್ತಾರೆ. ನನ್ನ ಕೆಣಕಿದರೆ ಇವನ ಜತೆ ಇರುವ ವ್ಯಕ್ತಿಗಳ ಹೊರಬಿಡುವ ಬಹಳ ವಿಷಯ ನನ್ನಲ್ಲಿವೆ. ಹುಷಾರ್..’ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ ಹೆಚ್ ಡಿ ಕುಮಾರ ಸ್ವಾಮಿ.