Monday, September 9, 2024

Latest Posts

ದೋಸ್ತಿ ಮಾರ್ಗ ಅನುಸರಿಸಿದ ಜೆಡಿಎಸ್- ಮೂವರು ಅನರ್ಹ ಶಾಸಕರ ಉಚ್ಚಾಟನೆ

- Advertisement -

ಬೆಂಗಳೂರು: ಅನರ್ಹತೆಗೊಳಿಸಲಾಗಿದ್ದ 14 ಶಾಸಕರನ್ನು ನಿನ್ನೆ ಎಐಸಿಸಿ ಪಕ್ಷದಿಂದ ಉಚ್ಚಾಟನೆ ಮಾಡಿರೋ ಬೆನ್ನಲ್ಲೇ ಇದೀಗ ಜೆಡಿಎಸ್ ಕೂಡ ತಮ್ಮ ಪಕ್ಷದ ಅನರ್ಹ ಶಾಸಕರನ್ನು ಪಕ್ಷದಿಂದ ಹೊರದಬ್ಬಿದೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ನಿನ್ನೆ ಎಐಸಿಸಿ, ಪಕ್ಷದ ವಿರುದ್ಧ ಬಂಡೆದ್ದು ರಾಜ್ಯ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಕಾರಣಕರ್ತರಾಗಿದ್ದ 14 ಮಂದಿ ಅನರ್ಹ ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಿತ್ತು. ಅಲ್ಲದೆ ನಿನ್ನೆಯೇ 11 ಮಂದಿ ಅನರ್ಹ ಶಾಸಕರ ಕ್ಷೇತ್ರಗಳ ವ್ಯಾಪ್ತಿಯ 23 ಮಂದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನೂ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಇದೀಗ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು ತಮ್ಮ ಪಕ್ಷದ ಮೂವರು ಅನರ್ಹ ಶಾಸಕರಾದ ಕೆ.ಆರ್ ಪೇಟೆಯ ನಾರಾಯಣಗೌಡ, ಹುಣಸೂರಿನ ಎ.ಎಚ್ ವಿಶ್ವನಾಥ್ ಹಾಗೂ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಕೆ.ಗೋಪಾಲಯ್ಯರನ್ನು ಪಕ್ಷದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಈ ಮೂವರೂ ಶಾಸಕರಿಗೆ ವರಿಷ್ಠರು ಜೆಡಿಎಸ್ ಬಾಗಿಲು ಬಂದ್ ಮಾಡಿದ್ದಾರೆ.

ಇನ್ನು ಕಾಂಗ್ರೆಸ್-ಜೆಡಿಎಸ್ ನಾಯಕರ ಈ ನಡೆ ತಮ್ಮನ್ನು ಇನ್ನಿಲ್ಲದಂತೆ ಆಟವಾಡಿಸಿದ್ದ ಅತೃಪ್ತರಿಗೆ ತಕ್ಕ ಪಾಠ ಕಲಿಸಿದ್ದು, ಮತ್ತೊಂದೆಡೆ ಮೈತ್ರಿ ಮುಂದುವರಿಸುವ ಮುನ್ಸೂಚನೆ ನೀಡಿದಂತೆ ಭಾಸವಾಗ್ತಿದೆ.

- Advertisement -

Latest Posts

Don't Miss