Monday, September 9, 2024

Latest Posts

ಐಎಂಎ ವಂಚನೆ ಪ್ರಕರಣ- ಬಿಜೆಪಿ-ಜೆಡಿಎಸ್ ಕೆಸರೆರಚಾಟ…!!

- Advertisement -

ಬೆಂಗಳೂರು: ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಸಿಎಂ ಎಚ್ಡಿಕೆ ಕುರಿತಾಗಿ ಬಿಜೆಪಿ ವ್ಯಂಗ್ಯ ಮಾಡಿದ್ದು, ಇದಕ್ಕೆ ಜೆಡಿಎಸ್ ಕೂಡ ಟಾಂಗ್ ನೀಡಿದೆ.

ಸಾವಿರಾರು ಜನರಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ಇದೀಗ ನಾಪತ್ತೆಯಾಗಿರೋ ಐಎಂಎ ಜುವೆಲ್ಸ್ ಮಾಲೀಕನ ಪತ್ತೆಗಾಗಿ ಪೊಲೀಸರು ತಲೆಕೆಡಿಸಿಕೊಂಡಿರೋ ಮಧ್ಯೆಯೇ, ಈ ಪ್ರಕರಣ ರಾಜಕೀಯ ದಾಳವಾಗಿ ಬಳಕೆಯಾಗ್ತಿದೆ. ಬಿಜೆಪಿ ಟ್ವಿಟರ್ ಘಟಕದಲ್ಲಿ ಐಎಂಎ ಮಾಲೀಕ ಮನ್ಸೂರ್ ನೊಂದಿಗಿರುವ ಸಿಎಂ ಕುಮಾರಸ್ವಾಮಿ ಪೋಟೋ ಹಾಕಿ ವ್ಯಂಗ್ಯ ಮಾಡಿದೆ. ಮನ್ಸೂರ್ ಜೊತೆ ಸಿಎಂ ಭೋಜನ ಸೇವಿಸುತ್ತಿರೋ ಚಿತ್ರವನ್ನು ಟ್ವೀಟ್ ಮಾಡಿರೋ ಬಿಜೆಪಿ, ನಾನು ತಿನ್ನುತ್ತೇನೆ..‌ನೀವು ತಿನ್ನಿ ಅನ್ನೋದು ಜೆಡಿಎಸ್ ನಡೆಸುತ್ತಿರೋ ಜೀವನ. ಮನ್ಸೂರ್ ನಂತಹ ವಂಚಕರೂ ಕೂಡ ಇದೇ ರೀತಿ ತಿಂದು ಲೂಟಿ ಮಾಡ್ಕೊಂಡು ಪರಾರಿಯಾಗ್ತಾರೆ ಅಂತ ವ್ಯಂಗ್ಯ ಮಾಡಿದೆ.

ಇದಕ್ಕೆ ತಿರುಗೇಟು ನೀಡಿರೋ ಸಿಎಂ ಕುಮಾರಸ್ವಾಮಿ ಬಿಜೆಪಿ ತೀರಾ ಕೀಳು ಮಟ್ಟದ ರಾಜಕೀಯಕ್ಕಿಳಿದಿದೆ. ಹಳೆಯ ಚಿತ್ರಗಳನ್ನ ಹೊಸದಕ್ಕೆ ಜೋಡಿಸಿ ಜನರ ದಾರಿ ತಪ್ಪಿಸುತ್ತಿದೆ. ಸುಳ್ಳು ಹೇಳುವುದು ಬಿಜೆಪಿಯ ಹಳೆಯ ಸ್ಟ್ಯ್ರಾಟರ್ಜಿ. ಐಎಂಎ ವಂಚನೆ ಗಂಭೀರ ಪ್ರಕರಣವಾಗಿದ್ದು, ತಪ್ಪಿಸ್ಥರಿಗೆ ಶಿಕ್ಷೆಯಾಗಲಿದೆ ಅಂತ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇನ್ನು ಜೆಡಿಎಸ್ ಟ್ವಿಟ್ಟರ್ ಘಟಕವೂ ಟಾಂಗ್ ನೀಡಿದ್ದು, ಬಿಜೆಪಿಗೆ ಫೇಕ್ ನ್ಯೂಸ್ ಹಂಚೋದೆ ಕೆಲಸ. ಕೊನೆಗೆ ಜೈಲಿನಲ್ಲಿ ಎಂಡ್ ಆಗುತ್ತೆ. ಇದನ್ನು ಒಪ್ಪಿಕೊಳ್ಳೋದಕ್ಕೆ ಕಷ್ಟ ಆಗ್ಬಹುದು. ಹೀಗಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸೋದನ್ನ ನಿಲ್ಲಿಸಿ ಅಂತ ಟ್ವೀಟ್ ಮಾಡಿದೆ.

ಮೈತ್ರಿ ಮುರಿದುಕೊಳ್ತಾರಾ ದೇವೇಗೌಡ್ರು…?!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=lE8E5jyVWHA

- Advertisement -

Latest Posts

Don't Miss