Wednesday, August 20, 2025

Latest Posts

‘ಹಿಂದಿ ಆಳ್ವಿಕೆ ಬೇಡ ಕನ್ನಡದ ಪಕ್ಷ ಬೇಕು ಅಂತ ಜನ ನಿರೀಕ್ಷಿಸಿದ್ದಾರೆ’

- Advertisement -

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ರವೀಂದ್‌ರ ಶ್ರೀಕಂಠಯ್ಯ ಅಬ್ಬರದ ಪ್ರಚಾರ ನಡೆಸಿದ್ದು, ಜೆಡಿಎಸ್ ಪರ ಮತಯಾಚಿಸಿದ್ದಾರೆ. ಕೊಡಿಯಾಲ ಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಗ್ರಾಮಸ್ಥರು, ಪಟಾಕಿ ಸಿಡಿಸಿ ಪುಷ್ಪವೃಷ್ಟಿ ಸಲ್ಲಿಸಿದ್ದಾರೆ. ಅಲ್ಲದೇ ಆರತಿಯನ್ನೂ ಬೆಳಗಿದ್ದಾರೆ. ತದನಂತರ ರವೀಂದ್ರ ಶ್ರೀಕಂಠಯ್ಯ, ಚುನಾವಣೆ ಪ್ರಚಾರವನ್ನ ಕೈಗೊಂಡಿದ್ದಾರೆ.

ಈ ವೇಳೆ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಪ್ರಚಾರ ತುಂಬಾ ಚೆನ್ನಾಗಿ ನಡೆಯುತ್ತಿದೆ. ಜನರು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ‌. ಕ್ಷೇತ್ರದ ಜನಾಭಿಪ್ರಾ ಇದೆ. ಮಂಡ್ಯ ಜಿಲ್ಲಾಧ್ಯಂತ ಜೆಡಿಎಸ್ ಗೆ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಪಕ್ಷ ಜೆಡಿಎಸ್. ಕನ್ನಡ ಪರವಾದ ಪಕ್ಷ ಜೆಡಿಎಸ್ ಉಳಿಸಿಕೊಳ್ಳಲು ಜನರು ನಿಂತಿದ್ದಾರೆ. ಇದೀಗ ಕೇಂದ್ರದವರು ಓಟ್ ಕೇಳೋದಕ್ಕೆ ಬಹಳ ಜನ ರಾಜ್ಯಕ್ಕೆ ನುಗ್ಗಿದ್ದಾರೆ ಎಂದು ಹೇಳಿದರು.

ಅಲ್ಲದೇ, ಹಿಂದಿ ಆಳ್ವಿಕೆ ಬೇಡ ಕನ್ನಡದ ಪಕ್ಷ ಬೇಕು ಅಂತ ಜನ ನಿರೀಕ್ಷಿಸಿದ್ದಾರೆ. ಕನ್ನಡ ನಾಡಿನ ಪಕ್ಷ ಜೆಡಿಎಸ್ ಪಕ್ಷ. ಕೆಲವೇ ದಿನಗಳಲ್ಲಿ ದೇವೇಗೌಡ್ರು ಕುಮಾರಸ್ವಾಮಿ ಜಿಲ್ಯಾಂದ್ಯಂತ ಪ್ರಚಾರ ಮಾಡ್ತಾರೆ. ದೇವೇಗೌಡ್ರು ಮಂಡ್ಯಕ್ಕೆ ಬಂದರೆ ಜನರು ಹಬ್ಬದ ರೀತಿ ಆಚರಣೆ ಮಾಡ್ತಾರೆ. ಈ ವಯಸ್ಸಿನಲ್ಲೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ರೈತರ ಪರ ಪ್ರಮಾಣಿಕವಾಗಿ ಹೋರಾಟ ಮಾಡಿದಂತವರು. ರಾಜ್ಯದಲ್ಲಿ ಕನ್ನಡ ಪಕ್ಷ ಉಳಿಯ ಬೇಕು. ಕುಮಾರಣ್ಣನ ಸಿಎಂ ಹಾಗಬೇಕು,ರೈತರಿಗೆ ಒಳ್ಳೆಯದಾಗಬೇಕು ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.

‘ಸುಳ್ಳು ಹೇಳುವುದೇ ಅಭ್ಯಾಸವಾಗಿ ಬಿಟ್ಟರೆ ಸತ್ಯ ತಿಳಿಯುವುದೇ ಇಲ್ಲ’

‘ಈ ಬಾರಿ ಜನರು ಮತ ಕೊಟ್ಟು ಆಶೀರ್ವಾದ ಮಾಡ್ತಾರೆ ಅನ್ನೊ ವಿಶ್ವಾಸ ಇದೆ’

ಇಡುವಾಳು ಸಚ್ಚಿದಾನಂದರ ಕೆಲಸವನ್ನ ನೆಚ್ಚಿ ಹೊಗಳಿದ ಚಾಲೆಂಜಿಂಗ್‌ ಸ್ಟಾರ್..

- Advertisement -

Latest Posts

Don't Miss