Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗದಗ, ಹಾವೇರಿ, ಧಾರವಾಡ ಮತ್ತು ಕಾರವಾರ ಜಿಲ್ಲೆಯ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆ ಜರುಗಿತು. ಜೆಡಿಎಸ್ ಕೋರ್ ಕಮಿಟಿಯ 21 ಸದಸ್ಯರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಅಕ್ಟೊಬರ್ 12ರಂದು ಪ್ರಮುಖರ ಸಭೆ ನಡೆಯಲಿದೆ ಎಂದು ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ತಿಳಿಸಿದರು.
ನಗರದಲ್ಲಿ ಬುಧವಾರ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಸೂಚನೆಗೆ ಮೇರೆಗೆ ಈ ಸಭೆ ಆಯೋಜಿಸಲಾಗಿದೆ. ಈಗಾಗಲೇ ಕಲಬುರ್ಗಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಸಭೆ ಮುಗಿದಿದೆ. ಅಕ್ಟೊಬರ್ 11ರಂದು ವಿಜಯಪುರ, 12 ರಂದು ಹುಬ್ಬಳ್ಳಿ ಹಾಗೂ 13ರಂದು ಬೆಳಗಾವಿಯಲ್ಲಿ ವಿಭಾಗ ಹಾಗೂ ಜಿಲ್ಲಾಮಟ್ಟದ ಪ್ರಮುಖರ ಸಭೆ ನಡೆಯಲಿದೆ.
ಕೋರ್‌ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಸೇರಿದಂತೆ ಇತರ ನಾಯಕರು ಭಾಗವಹಿಸುವರು ಎಂದರು. ಬಿಜೆಪಿ ಜತೆ ಮೈತ್ರಿಯಾಗಿದೆ ಎಂದರೆ ಅಲ್ಪಸಂಖ್ಯಾತರಿಗೆ ಭಯ ಬೇಡ. ಅವರನ್ನು ಜೆಡಿಎಸ್ ನಾಯಕರು ರಕ್ಷಿಸಲಿದ್ದಾರೆ. ಈ ಹಿಂದೆ ಬಿಜೆಪಿ ಜತೆ ಕೈಜೋಡಿ ಸರ್ಕಾರ ರಚಿಸಿದಾಗಲೂ ರಕ್ಷಣೆ ಮಾಡಲಾಗಿತ್ತು. ಆಗ ಜಮೀರ್ ಅಹ್ಮದ್ ಅವರೇ ಮುಂದಾಳತ್ವ ವಹಿಸಿದ್ದರು. ಕಾಂಗ್ರೆಸ್ ಬರೀ ಊಹಾಪೋಹ ಹಬ್ಬಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಜತೆ ಮೈತ್ರಿಯಾದರೆ ರಾಜ್ಯದಲ್ಲಿ ಹೆಚ್ಚು ಎಂಪಿ ಸೀಟ್‌ಗಳನ್ನು ಗೆಲ್ಲಲಿದ್ದೇವೆ. ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲಿ ತಲಾ ಒಂದು ಎಂಪಿ ಸೀಟ್‌ಗೆ ಟಿಕೆಟ್ ಕೇಳಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಮಾಜಿ ಸಚಿವ ಕೆ.ಎನ್. ಗಡ್ಡಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪ್ರಮಖರಾದ ಪ್ರಕಾಶ ಅಂಗಡಿ, ಈಶ್ವರ ಕಿತ್ತೂರ, ಹಜರತ್‌ಅಲಿ ಜೋಡುಮನಿ, ನವೀನ್‌ಕುಮಾರ ಮಡಿವಾಳರ ಇತರರು ಇದ್ದರು.
Yallamma Devi : ಬೆಳಗಾವಿ: ಯಲ್ಲಮ್ಮನ ಸನ್ನಿಧಿಯಲ್ಲಿ 1.03 ಕೋಟಿ ಕಾಣಿಕೆ ಸಂಗ್ರಹ
HalaShree: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಾಲಾಶ್ರೀ ಕೋಟಿ ವಂಚನೆ..!
ಸರ್ಕಾರಿ ಕಾಲೇಜಿನಲ್ಲಿ ಸೌಲಭ್ಯವಿರದ ಕಾರಣ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು..!