ಮಂಡ್ಯ: ಪರ್ಸಂಟೇಜ್ ಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದ್ದು, ರಾಜ್ಯದಲ್ಲಿ ಇಬ್ಬರ ಮಧ್ಯೆ ನೇರ ಸ್ಪರ್ಧೆ ಇದೆ. ಅದರಿಂದ ಚುನಾವಣೆ ಗೆಲ್ಲುವುದಕ್ಕಾಗಲ್ಲ ಎಂದು ಮದ್ದೂರಿನಲ್ಲಿ ಪಂಚರತ್ನ ರಥಯಾತ್ರೆ ವೇಳೆ ಮಾಜಿ ಸಿಎಂ ಹೆಚ್.ಡಿ..ಕುಮಾರಸ್ವಾಮಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದರೆ ಎಷ್ಟು ಪರ್ಸಂಟೇಜ್ ಪಡೆಯಲಿ ಅನ್ನೋದಕ್ಕೆ ಸ್ಪರ್ಧೆ ಇರೋದು. ರಾಜ್ಯದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಮೂರು ಬಾರಿ ಅಧಿಕಾರ ನಡೆಸಿದೆ. ಅದಾದ ನಂತರ ಒಂದು ಬಾರಿ 38, ಮತ್ತೊಮ್ಮೆ 62, ಇನ್ನೊಮ್ಮೆ 78 ಸ್ಥಾನ ಪಡೆಯಿತು. ಈ ಬಾರಿ ಅವರಿಗೆ ಗೆಲ್ಲುವ ಶಕ್ತಿ ಇರೋದು 50-70 ಸೀಟ್ ಅಷ್ಟೇ ಎಂದು ಹೇಳಿದರು.
ಮದ್ದೂರಿಗೆ ಆಗಮಿಸಿದ ಪಂಚರತ್ನ ರಥಯಾತ್ರೆ
ಇನ್ನೂ ಯಾಕೆ ಜೆಡಿಎಸ್‌ನ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದೀರ ಸಂಪೂರ್ಣ ಬಹುಮತ ಬರುತ್ತೆ ಅನ್ನೋರು ಈ ರೀತಿ ಕೆಲಸ ಯಾಕೆ ಮಾಡ್ತಿದ್ದೀರ? ಇನ್ನೂ ಕಾಂಗ್ರೆಸ್ಸಿಗರು ಜೆಡಿಎಸ್‌ನ ಹಲವರ ಮನೆ ಕಾಯುತ್ತಿದ್ದಾರೆ. ಇವತ್ತು ನಾನು ಹೇಳ್ತಿದ್ದೀನಿ ಬರೆದಿಟ್ಟುಕೊಳ್ಳಿ. ರಾಜ್ಯದಲ್ಲಿ ಜನತಾದಳದ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ. ನಮ್ಮ ಸರ್ಕಾರ ಬರುವುದನ್ನ ಎರಡೂ ರಾಷ್ಟ್ರೀಯ ಪಕ್ಷಗಳಿಂದ ತಡೆಯಲಾಗುವುದಿಲ್ಲ. ಮತ್ತೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುವ ಸಾಧ್ಯತೆ ಇಲ್ಲವೆಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಡಿ. 22 ರಿಂದ ಕೇರಳಕ್ಕೆ 51 ರೈಲುಗಳ ಸಂಚಾರ

