ಹಾಸನ: ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣರವರ ವಿರುದ್ಧ ಕೀಳು ಮಟ್ಟದ ರಾಜಕೀಯ ಮಾಡಿ ಹೇಳಿಕೆ ನೀಡಿರುವ, ಹಾಸನದ ಶಾಸಕ ಪ್ರೀತಂ ಗೌಡರ ಹೇಳಿಕೆ ಖಂಡಿಸಿ ಇಂದು ಗುರುವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಎಸ್. ದ್ಯಾವೇಗೌಡ ತಿಳಿಸಿದರು.
‘ಪ್ರೀತಂಗೌಡರಿಗೆ ಸಂಸ್ಕೃತಿಯೇ ಇಲ್ಲದಂತೆ ಕಾಣುತ್ತದೆ..’
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸಂಸದರಾದ ಪ್ರಜ್ವಲ್ ರೇವಣ್ಣ ಮತ್ತು ಭವಾನಿ ರೇವಣ್ಣನವರ ಬಗ್ಗೆ ಶಾಸಕರಾದ ಪ್ರೀತಂ ಗೌಡ ಅವರು ತಮ್ಮ ಕೀಳುಮಟ್ಟದ ಭಾಷೆಯನ್ನು ಬಳಕೆ ಮಾಡಿದ್ದಾರೆ. ಮಹಿಳೆಯರ ಬಗ್ಗೆ ಈ ರೀತಿ ಮಾತನಾಡಬಾರದು. ಮತ್ತೊಬ್ಬರ ಬಗ್ಗೆ ಏನೆ ಹೇಳಿಕೆ ಕೊಡಬೇಕಾದರೇ ಒಂದು ರೀತಿ ನೀತಿಯಲ್ಲಿ ಮಾತನಾಡಬೇಕು. ರಾಜಕೀಯ ನಿಂತ ನೀರಲ್ಲ. ಹರಿದಾಡುತ್ತಾ ಇರುತ್ತದೆ. ಯಾವಾಗ ಯಾರು ಏನು ಬೇಕಾದರೂ ಆಗಬಹುದು. ರಾತ್ರಿ ೨ ಗಂಟೆಯವರೆಗೂ ತಾಯಿ ಮಗ ನಶೇಯಲ್ಲಿ ಇರುತ್ತಾರೆ ಎಂದು ಶಾಸಕರು ತಮ್ಮ ಅನುಭವದಲ್ಲಿ ಹೇಳಿರಬಹುದು ಎಂದರು.
ವಿದ್ಯುತ್ ತಂತಿ ಮೇಲಿದ್ದ ಬೈಕ್ ಕೀ ತೆಗೆಯಲು ಹೋಗಿ ವ್ಯಕ್ತಿ ಸಾವು..
ರಾಜಕೀಯದ ಬಗ್ಗೆ ಮಾತನಾಡಲಿ ಆದ್ರೆ ಇಡೀ ಮಹಿಳಾ ಸಮಾಜದ ಬಗ್ಗೆಯೇ ಮಾತನಾಡಿದ್ದಾರೆ. ಶಾಸಕರ ಹೇಳಿಕೆ ಖಂಡಿಸಲು ಇಂದು ಗುರುವಾರದಂದು ಜೆಡಿಎಸ್ ಪಕ್ಷದವತಿಯಿಂದ ಬೃಹತ್ ಪ್ರತಿಭಟನೆಯನ್ನು ಹ್ಮಮಿಕೊಂಡಿದ್ದೇವೆ. ಬೆಳಿಗ್ಗೆ ೧೦ ಗಂಟೆಗೆ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೂ ಪ್ರತಿಭಟನಾ ಮೆರವಣಿಗೆಯನ್ನು ಮಾಡಿ ಡಿಸಿಗೆ ಮನವಿ ಕೊಡಲಾಗುವುದು. ಭವಾನಿ ಅಂತವರ ಮೇಲೆ ಇಂತಹ ಮಾತನಾಡಿರುವ ಶಾಸಕ ಪ್ರೀತಂ ಗೌಡ ಅವರು ಸಾಮಾನ್ಯ ಮಹಿಳೆ ಮೇಲೆ ಹೇಗೆ ಮಾತನಾಡಬಹುದು? ದೇಶಕ್ಕೆ ಪ್ರಧಾನಿಯನ್ನು ಕೊಟ್ಟಂತಹ ದೇವೇಗೌಡರ ಕುಟುಂಬದಲ್ಲಿ ಎಲ್ಲಾ ಸಂಸ್ಕೃತಿಗಳಿವೆ. ಇಂತಹವರ ಮೇಲೆ ಮಾತನಾಡಿರುವ ಶಾಸಕರು ಯಾವ ಸಂಸ್ಕೃತಿಯಲ್ಲಿದ್ದಾರೆ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಸಯ್ಯಾದ್ ಅಕ್ಬರ್, ವಾಸುದೇವ್, ಕ್ರಾಂತಿ ಪ್ರಸಾದ್ ತ್ಯಾಗಿ, ಮುಖಂಡರಾದ ಬಿದರಿಕೆರೆ ಜಯರಾಮ್, ಗಿರೀಶ್ ಇತರರು ಉಪಸ್ಥಿತರಿದ್ದರು.

