state news :
ಹಾಸನದ ಸಕಲೇಶಪುರದಲ್ಲಿ ನಡೆಯುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೆಚ್.ಕೆ. ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ. ನನ್ನವ್ಯಕ್ವಿತ್ವವನ್ನು ಹಾಳು ಮಾಡಬೇಕೆಂದು ವದಂತಿಗಳನ್ನ ಕ್ರಿಯೇಟ್ ಮಾಡ್ತಿದ್ದಾರೆ ಅಂತೇಳಿ ಕುಮಾರಸ್ವಾಮಿ ಗದ್ಗದಿತರಾದರೆ. ಭಾಷಣ ಮಾಡುವಾಗ ಜೆಡಿಎಸ್ ನ ಮಾಜಿ ರಾಜ್ಯಾಧ್ಯಕ್ಷ ಕಣ್ಣೀರಿಟ್ಟಿದ್ದಾರೆ.
ನಾವೆಲ್ಲ ಸೇರಿ ಜನಸಂಘಟನೆ ಮಾಡಿ ಜನರಿಗೆ ಪಕ್ಷದ ಕಾರ್ಯಕ್ರಮಗಳನ್ನು ಹೇಳಿ ನಾವು ಗೆಲ್ಲೋಣ, ಮುಂದೆ ಜನತಾದಳವೇ ಅಧಿಕಾರಕ್ಕೆ ಬರಲಿದೆ. ನಮ್ಮ ಅಭಿವೃದ್ಧಿಯನ್ನು ಯಾರೂ ಕೂಡಾ ನಿಲ್ಲಿಸೋದಕ್ಕೆ ಸಾಧ್ಯವಿಲ್ಲ.ನಾವು ಗೆದ್ದೇ ಗೆಲ್ತೀವಿ ಅನ್ನೋ ಕಾರಣಕ್ಕಾಗಿ ಕೆಲವರು ಕುಚೋದ್ಯೆಯನ್ನು ಶುರುಮಾಡಿದ್ದಾರೆ. ಎಲ್ಲವನ್ನೂ ಬಾಯ್ಬಿಟ್ಟು ಹೇಳೋದಕ್ಕೆ ಆಗೋದಿಲ್ಲ.
ನಿಮ್ಮ ಕುಮಾರಸ್ವಾಮಿ ಇರಬಾರದು, ಜನತಾದಳ ಗೆಲ್ಲಬಾರದು ಅಂತಾರೆ, 14 ವರ್ಷಗಳ ಹಿಂದೆ ಇದ್ದ ಆರೋಪಗಳು ಈಗ ಪ್ರಾರಂಭವಾಗಿವೆ, ಕೊನೆ ವರ್ಷದಲ್ಲಿ ಏನಾದ್ರೂ ಮಾಡಿ ವ್ಯಕ್ತಿತ್ವಕ್ಕೆ ತೊಡಕು ಮಾಡಬೇಕು, ಪಕ್ಷವನ್ನು ಹಾಳು ಮಾಡಬೇಕು ಅಂತೇಳಿಎಲ್ಲಾ ಕ್ರಿಯೇಟ್ ಮಾಡ್ತಾ ಇದ್ದಾರೆ, ಪ್ರಚೋದನೆ ಮಾಡ್ತಾ ಇದ್ದಾರೆ. ನಮ್ಮ ಕಾರ್ಯಕರ್ತರ ಮನಸ್ಸನ್ನು ಕೆಡಿಸೋದಕ್ಕೆ ನೋಡ್ತಾ ಇದ್ದಾರೆದಯಮಾಡಿ ಯಾರೂ ಅದಕ್ಕೆ ಬಲಿಯಾಗಬಾರದು ಎಂದರು.
ನಾವು ಎಂತಹ ಸಂದರ್ಭ ಬಂದರೂ ಮಾನವೀಯತೆಯನ್ನು ಇಟ್ಕೊಂಡು ಪಕ್ಷವನ್ನು ಕಾಪಾಡಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಕಾಯ, ವಾಚ, ಮನಸಾ ನಾವೂ ಕೆಲಸ ಮಾಡ್ತಾ ಇದ್ದೇವೆ. ಕುಮಾರಸ್ವಾಮಿ ಮುಖ್ಯ ಅಲ್ಲ ಇಲ್ಲಿ, ಪಕ್ಷ ಮುಖ್ಯಗೆಲ್ಲಿಸಿಕೊಡಿ, ಆಡಳಿತ ಕೈಗೆ ಕೊಡಿ ಖಂಡಿತಾ ಜನರ ಸೇವೆ ಮಾಡೋದಕ್ಕೆ ಬದ್ದರಾಗಿದ್ದೇವೆ. ಎಂದು ಸಕಲೇಶಪುರ ಪಟ್ಟಣದಲ್ಲಿ ಆಯೋಜನೆಗೊಂಡಿದ್ದ ಜೆಡಿಎಸ್ ತಾಲೂಕು ಕಾರ್ಯಕರ್ತರ ಸಭೆಯಲ್ಲಿ ಶಾಸಕ ಕುಮಾರಸ್ವಾಮಿ ಗದ್ಗಿತಿತರಾಗಿದ್ದಾರೆ. ಇನ್ನೂ ಸಭೆಯ ಅಧ್ಯಕ್ಷತೆಯನ್ನು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಹಿಸಿದ್ರು.