Monday, September 9, 2024

Latest Posts

ಬಿಜೆಪಿ ಸೇರ್ಪಡೆ ಸುಳಿವು ನೀಡಿದ್ರಾ ಜೆಡಿಎಸ್ ನ ದೇವೇಗೌಡ…?

- Advertisement -

ಬೆಳಗಾವಿ: ಅತ್ತ ರಾಜ್ಯ ಮೈತ್ರಿ ಸರ್ಕಾರ ಉಳಿಸಿಕೊಳ್ಳೋ ನಿಟ್ಟಿನಲ್ಲಿ ಸಂಪುಟ ಪುನಾರಚನೆ, ವಿಸ್ತರಣೆ ಕಸರತ್ತು ನಡೀತಿದ್ರೆ, ಇತ್ತ ಜೆಡಿಎಸ್ ನ ಸಚಿವ ಜಿ.ಟಿ ದೇವೇಗೌಡ ಬಿಜೆಪಿ ಸೇರ್ಪಡೆಯಾಗುವ ಅನುಮಾನ ಮೂಡಿಸಿದ್ದಾರೆ.

ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಘಟಿಕೋತ್ಸದಲ್ಲಿ ಮಾತನಾಡುತ್ತಿದ್ದ ಸಚಿವ ಜಿ.ಟಿ ದೇವೇಗೌಡ ಎಂದೂ ಇಲ್ಲದೆ ಇವತ್ತು ಮೋದಿಯವರನ್ನ ಕೊಂಡಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ 2ನೇ ಬಾರಿ ಬಾರಿ ಅಂತರದಿಂದ ಗೆದ್ದಿದ್ದಾರೆ. ನರೇಂದ್ರ ಮೋದಿಗೆ ಸ್ವಾರ್ಥವಿಲ್ಲ,ದೇಶದ ಹಿತಕೋಸ್ಕರ ಮೋದಿ ತಮ್ಮನ್ನು ತಾವು ಅರ್ಪಿಸಿಕೊಂಡು ಇದೀಗ ಮತ್ತೆ ಪ್ರಧಾನಿಯಾಗಿದ್ದಾರೆ ಅಂತ ಕೊಂಡಾಡಿದರು.

ಮೋದಿ ಯಾವಾಗಲೂ ದೇಶ ದೇಶ ದೇಶ ಅಂತಾ ಹೇಳ್ತಾರೆ. ನೀವು ನಾವು ಎಲ್ಲರೂ ದೇಶಕ್ಕಾಗಿ ದುಡಿಯಬೇಕೆಂದು ಮೋದಿ ಹೇಳ್ತಾರೆ. ಒಬ್ಬ ಪ್ರಧಾನಿ ನಾನು ಸಂಸದನಂತೆ ಸರಳವಾಗಿರ್ತೀನಿ ಅಂತಾ ಹೇಳ್ತಾರೆ. ಮೋದಿ ಚಹಾ ಮಾರಿ ಕಷ್ಟಪಟ್ಟು ಬಂದಿದ್ದೇನೆ ಎಂದು ಹೇಳ್ತಾರೆ. ಮೋದಿ ತಮ್ಮ ತಾಯಿಯವರಿಗೆ ಕಾಲು ಮುಗಿದು ನಮಸ್ಕಾರ ಮಾಡ್ತಾರೆ ಅಂತ ಮೋದಿಯನ್ನ ಕೊಂಡಾಡಿದ್ರು.

ಆದ್ರೆ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಪ್ರಧಾನಿ ಮೋದಿಯನ್ನು ಕೊಂಡಾಡಿದ ಇತಿಹಾಸವೇ ಇಲ್ಲದ ಜೆಡಿಎಸ್ ಸಚಿವ ಜಿ.ಟಿ.ದೇವೇಗೌಡ ಇವತ್ತು ಈ ರೀತಿ ಭಾಷಣ ಮಾಡೋ ಮೂಲಕ ಬಿಜೆಪಿ ಸೇರ್ಪಡೆ ಸುಳಿವು ಕೊಟ್ಟರಾ ಅನ್ನೋ ಸಂಶಯ ಮೂಡುವಂತೆ ಮಾಡಿದ್ದಾರೆ.

25 ಸೀಟ್ ಗೆಲ್ಲಿಸಿದ್ದು ಇದಕ್ಕೇನಾ…?ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss