Tuesday, November 18, 2025

Latest Posts

ಹಾಸನಾಂಬೆಯ ಮಡಿಲಲ್ಲಿ ಒಗ್ಗಟ್ಟು ತೋರಿಸಿದ ಜೆಡಿಎಸ್ ಶಾಸಕರು

- Advertisement -

Hassan Political News: ಹಾಸನ: ಹಾಸನದಲ್ಲಿ ಹಾಸನಾಂಬಾ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಜೆಡಿಎಸ್ ಸೈನ್ಯ, ದೇವಿಯ ಮಡಿಲಲ್ಲಿ ಒಗ್ಗಟ್ಟು ಪ್ರದರ್ಶಿಸಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ, ಜೆಡಿಎಸ್ ನಾಯಕರೆಲ್ಲ ಸೇರಿ ಹಾಸನಾಂಬೆಯ ದರ್ಶನ ಮಾಡಿ, ಬಳಿಕ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಇಷ್ಟೇ ಅಲ್ಲದೇ, ಜೆಡಿಎಸ್ ಶಾಸಕರಿಗೆ ಜಿಲ್ಲಾಡಳಿತ ವತಿಯಿಂದ, ಅದ್ಧೂರಿ ಸನ್ಮಾನವೂ ನಡೆಯಿತು. ಈ ವೇಳೆ ಕುಮಾರಸ್ವಾಮಿಯವರಿಗೆ ಸನ್ಮಾನ ಮಾಡುವ ವೇಳೆ, ಅವರು ತಮ್ಮ ಶಾಲನ್ನು ತೆಗೆದು ಶಾಸಕ ಸ್ವರೂಪ್ ಪ್ರಕಾಶ್ ಗೆ ಹಾಕಿ, ಸನ್ಮಾನ ಮಾಡಿದ್ದಾರೆ. ಆದರೆ ತಾಯಿಯ ದರ್ಶನ ಮಾಡುವಾಗ, ಮಾಜಿ ಸಚಿವ ರೇವಣ್ಣ ಮಾತ್ರ ಮಿಸ್ಸಿಂಗ್.

ಇನ್ನು ಹಾಸನಾಂಬೆಯ ದರ್ಶನದ ಬಳಿಕ ಹೆಚ್ಡಿಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರಿಗೆ ಒಂದು ಮಾತು ಹೇಳ್ತೀನಿ . ತಾನೂ ಒಂದು ಬಗೆದರೆ ಬೇರೆ ಒಂದು ಬಗೆಯವುದು ದೈವ. ಶಿವಲಿಂಗೆಗೌಡರೆ (ಸಿದ್ದರಾಮಯ್ಯ)  ಭಾವ ಚಿತ್ರ ಇಟ್ಟುಕೊಂಡು ಮೇರೆಸುತ್ತಿದ್ದಿರಿ .ನಿಮ್ಮ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ. ದಿನೇ ದಿನೇ ಪ್ರಯಾಣಿಕ ಸಂಖ್ಯೆ ಏರುತ್ತ ಇದೆಯೋ ಅಥವಾ ಹೆಣ್ಣು ಮಕ್ಕಳ ಹೆಸರಲ್ಲಿ ಲೂಟಿ ಮಾಡಿ ಯಾವ ರಾಜ್ಯಕ್ಕೆ ದುಡ್ಡು ಕೊಡ್ತಾ ಇದ್ದೀರಾ..? ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಇಂದಿರಾ ಕ್ಯಾಂಟೀನ್ ಅಲ್ಲಿಯೂ ಇದೇ ಹಗರಣ. ಜನರ ಬದುಕು ಕಟ್ಟಲು ತೆರೆಗೆ ಹಣ ಬಳಸಿ. ನಿಮ್ಮ ಸರ್ಕಾರ 5 ವರ್ಷ ಇದ್ರೆ, 10 ಲಕ್ಷ ಕೋಟಿ ಸಾಲ ಮಿರಿಸುತ್ತೀರಿ. ನಿಮ್ಮ ವಿಶ್ವ ಮಾನ್ಯ ಆರ್ಥಿಕ ತಜ್ಞ  ರೈತನೂ ಉಳಿಸ್ರಪ್ಪ ಎಂದು ಹೇಳುವ ಮೂಲಕ, ಆಡಳಿತ ಪಕ್ಷದ ವಿರುದ್ಧ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಶರಣು ಗೌಡ ಪಾಟೀಲ್ ಹೊರತುಪಡಿಸಿ, ಉಳಿದ 18 ಶಾಸಕರೂ ಭಾಗವಹಿಸಿದ್ದಾರೆ. ಒಟ್ಟಾರೆ 19 ಶಾಸಕರಲ್ಲಿ 18 ಶಾಸಕರು  ಭಾಗಿಯಾಗಿದ್ದಾರೆ. ಶರಣುಗೌಡ  ನಮ್ಮ ಮನೆ ಮಗ ಇದ್ಧಹಾಗೆ. ಅಲ್ಪ ಸ್ವಲ್ಪ  ಗೊಂದಲದಲ್ಲಿ ಇದ್ದರೆ  ಅದನ್ನ ಸರಿ ಮಾಡ್ತೀವಿ. ಯಾರು ಸಹ ಯಾವುದೇ ಆಮಿಷಕ್ಕೆ ಪಕ್ಷ ಬಿಟ್ಟು ಹೋಗಲ್ಲ. ಕಾಂಗ್ರೆಸ್ ಬಲವಂತಕ್ಕೆ ಪಕ್ಷ ತೋರೆಯೋರು ಯಾರು ಇಲ್ಲ.  ನಮ್ಮ ಶಾಸಕರ ಬಗ್ಗೆ ಅನುಮಾನ ಪಡುವಂತದ್ದು ಯಾವ್ದು ಇಲ್ಲ.

ಈಗ ರಾಜ್ಯದಲ್ಲಿ  ಕಷ್ಟ ಇದೆ. ಹೀಗಾಗಿ ರಾಜ್ಯದಿಂದ ಹೊರಗೆ ಹೋಗೋದು ಬೇಡಾ ಅಂತಾ ಹಾಸನದಲ್ಲಿ ಸಭೆ ಕರೆದವು. ಜೊತೆಗೇ ಹಾಸನಾಂಬ ದರ್ಶನ ಪಡೆದು ಸಭೆ ಮಾಡೋದು ಸೂಕ್ತ. ಅಂಥ ಇಲ್ಲಿ ಸ್ಥಳ ನಿಗದಿ ಮಾಡಿ ಇದ್ದೀವಿ. ನಾನು ದುಬೈ ಅಲ್ಲಿ ಇದ್ದಾಗ  ಕೆಲವು ಮಾಧ್ಯಮ  ಜೆಡಿಎಸ್ನ 8-9 ಜನ ಜೆಡಿಎಸ್ ಬಿಡ್ತಾರೆ ಅಂತ ಸೃಷ್ಟಿ ಮಾಡಿದ್ದರು. ಅದಕ್ಕೆ ಸಭೆ ಕರೆದಿದ್ದೇವೆ.

ಜೊತೆಗೇ ಡಿಸಿಎಂ ಬಹಳ ಜನ ಬಹಳ ಅಷ್ಟು ಜನ ಬರ್ತಾರೆ ಅಂತ ಹೇಳ್ತಾ ಇದ್ದಾರೆ. ಇಂಟೆಲಿಜೆನ್ಸ್ ಮಾಹಿತಿ ಸರ್ಕಾರಕ್ಕೆ ಬಂದಿದೆ. ಇನ್ನೊಂದು ಕಡೆ ನಾವು 136 ಜನ ಇದ್ದೀವಿ. ಕಾಂಗ್ರೆಸ್ ನಮ್ಮನ್ನು ಯಾರು ಅಲುಗಾಡಿಸಲು ಸದ್ಯ ಇಲ್ಲಾ ಅಂತಾರೆ . ಡಿಸಿಎಂ ಸಿಎಂ ಆದ್ರೆ, ನಾವು ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದೇನೆ. ಇದನ್ನು ಕೆಲವರು ವ್ಯಂಗ್ಯ, ತಮಾಷೆ ಎಂದು ತಿಳಿದಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮೋದಿ ಪರ ನಿಂತ ಅಹಿಂಸಾ ಚೇತನ್‌! ಸಂತೋಷ್‌ ಲಾಡ್‌ಗೆ ಅಜ್ಞಾನಿ ಸಚಿವರೇ ಎಂದು ವ್ಯಂಗ್ಯ

ಅರ್ಚಕರು, ಸಂತರು ಅತ್ಯಾಚಾರಿಗಳು ಎಂದ ಕಾಂಗ್ರೆಸ್‌ ಶಾಸಕ ಅಫ್ತಾಬುದ್ದೀನ್‌ ಮುಲ್ಲಾ ಬಂಧನ

ಸ್ತ್ರೀಯರು ಕಲಿತರೆ ಜನಸಂಖ್ಯೆ ನಿಯಂತ್ರಣ: ನಿತೀಶ್‌ ಕ್ಷಮೆಯಾಚನೆಗೆ ಪಟ್ಟು

- Advertisement -

Latest Posts

Don't Miss