ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಚಾರ ಮಾಡಲು ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್ ಮಾಡಿದೆ. ಈ ಲೀಸ್ಟ್‌ನಲ್ಲಿ ಗೌಡರ ಕುಟುಂಬದ ಸೊಸೆಯಂದಿರಾದ, ಅನಿತಾ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣರಿಗೂ ಅವಕಾಶ ಕೊಡಲಾಗಿದೆ.
ಒಟ್ಟು 27 ಮಂದಿ ಸ್ಟಾರ್ ಪ್ರಚಾರಕರಿದ್ದು, ಈಗಾಗಲೇ ಪಂಚರತ್ನ ಯಾತ್ರೆಯಲ್ಲಿ ಸಕ್ಸಸ್ ಆಗಿರುವ ಜೆಡಿಎಸ್, ಮತ್ತಷ್ಟು ಪ್ರಚಾರ ಮಾಡಿ, ಚುನಾವಣೆ ಗೆಲ್ಲಲು ಸಿದ್ಧತೆ ನಡೆಸಿದೆ. ಗೌಡರ ಕುಟುಂಬದಿಂದ 8 ಜನರು ಈ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದು, ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಪ್ರಚಾರ ಮಾಡಲಿದ್ದಾರೆ. ಇವರೊಂದಿಗೆ ಕುಪೇಂದ್ರ ರೆಡ್ಡಿ ಮತ್ತು ಸಿಎಂ ಇಬ್ರಾಹಿಂ ಟಾಪ್ ಟೆನ್ ಲೀಸ್ಟ್‌ನಲ್ಲಿದ್ದಾರೆ.
ಇವರನ್ನು ಬಿಟ್ಟು, ನಜ್ಮಾ ನಜೀರ್, ಶರವಣ, ತಿಪ್ಪೇಸ್ವಾಮಿ, ಭೋಜೇಗೌಡ, ಬಿ.ಎಂ.ಫಾರೂಕ್, ಜಫ್ರುಲ್ಲಾ ಖಾನ್, ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ, ಅಪ್ಪಾಜಿ ಗೌಡ, ರಮೇಶ್ ಗೌಡ, ಎ.ಪಿ.ರಂಗನಾಥ್, ಸಯ್ಯದ್ ರೋಷನ್ ಅಬ್ಬಾಸ್, ಸಲಾಂ ಪಾಷಾ, ಬಾಬಾ ಬುಕರಿ, ಬಸವರಾಜ್ ಕೋಡಾಂಬಲ್, ಶಉಲ್ ಹಕ್ ಬುಕರಿ, ಅಫ್ಜಲ್. ಇವರಿಷ್ಟು ಮಂದಿ ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
‘ಸೇಫ್ಟಿಗಾಗಿ ಹೆಂಡ್ತಿಗೂ ವಾಟ್ಸ್ ಅಪ್ ಕರೆ ಮಾಡ್ತಿನಿ, ಅಷ್ಟು ಭಯದ ವಾತಾವರಣವಿದೆ ‘
‘ಹಾಸನದ 7 ವಿಧಾನಸಭೆ ಕ್ಷೇತ್ರದಲ್ಲಿ ಜಯಗಳಿಸಿ ದೇವೇಗೌಡರ ಹುಟ್ಟುಹಬ್ಬದ ಕೊಡುಗೆ ಕೊಡುತ್ತೆವೆ’
‘ಪ್ರೀತಂಗೌಡ ಮಹಿಳೆಯರಿಗೆ ಲಕ್ಷ್ಮಿ ಪೂಜೆ ಹೆಸರಿನಲ್ಲಿ ಟೋಪಿ ಹಾಕಿದ್ದಾರೆ’