- Advertisement -
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಎದುರಿಸಿದ್ದ ಜೆಡಿಎಸ್ ಇದೀಗ ಪಕ್ಷದ ಬಲವರ್ಧನೆಗೆ ಮುಂದಾಗಿದ್ದು ರಾಜ್ಯಾದ್ಯಂತ ಪಾದಯಾತ್ರೆ ಕೈಗೊಳ್ಳಲಿದೆ.
ಲೋಕಸಭಾ ಚುನಾವಣೆಯ ಸೋಲಿನ ಪರಾಮರ್ಶೆ ನಡೆಸಿದ ಜೆಡಿಎಸ್ ಇದೀಗ ಪಕ್ಷ ಬಲಪಡಿಸಲು ಹೊರಟಿದೆ. ಹೀಗಾಗಿ ರಾಜ್ಯಾದ್ಯಂತ ಪಾದಯಾತ್ರೆ ಕೈಗೊಳ್ಳೋ ಮೂಲಕ ಜನರಿಗೆ ಹತ್ತಿರವಾಗೋದಕ್ಕೆ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ಈ ತಂತ್ರದ ಮೊರೆಹೋಗಿದ್ದಾರೆ. ಇನ್ನು ಎರಡು ಹಂತಗಳಲ್ಲಿ ನಡೆಯಲಿರೋ ಪಾದಯಾತ್ರೆಗೆ ಶೀಘ್ರವೇ ಜೆಡಿಎಸ್ ವರಿಷ್ಠ ದೇವೇಗೌಡ ಚಾಲನೆ ನೀಡಲಿದ್ದಾರೆ. ಇನ್ನು ದೇವೇಗೌಡರ ಈ ಪಾದಯಾತ್ರೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತಾ ಅನ್ನೋದೊಂದು ಸಣ್ಣ ಅನುಮಾನ ಮೂಡಿಸುತ್ತಿದೆ.
ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ಹಾಳಾಯ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -