ಸ್ವಂತ ತಂಗಿಯ ಬಗ್ಗೆಯೇ ಅಸೂಯೆ: ಮದುವೆಗಿಟ್ಟಿದ್ದ ಆಭರಣ ಕದ್ದ ಅಕ್ಕ

Delhi News: ಸ್ವಂತ ತಂಗಿಯ ಮೇಲೆ ಹೊಟ್ಟಿಕಿಚ್ಚು ಪಡುತ್ತಿದ್ದ ಅಕ್ಕ, ತಂಗಿಯ ಮದುವೆಗೆಂದು ಅಪ್ಪ ಅಮ್ಮ ತೆಗೆದಿಟ್ಟಿದ್ದ ಒಡವೆ, ದುಡ್ಡು ಕದ್ದ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಉತ್ತಮ್ ನಗರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಸೇವಕ್ ಪಾರ್ಕ್ ಬಳಿ ಒಂದು ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಮನೆಯವರು ಜನವರಿ 30ರಂದು ಮನೆಯಲ್ಲಿರುವ ಚಿನ್ನಾಭರಣ, ಹಣ ಕಾಣೆಯಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದಾಗ, ಮನೆಯ ಬೀಗ ಮುರಿದಿರಲಿಲ್ಲ. ಅಥವಾ ಯಾವುದೇ ವಸ್ತು ಚೆಲ್ಲಾಪಿಲ್ಲಿಯಾಗಿಲ್ಲವೆಂದು ಮನೆಯವರು ತಿಳಿಸಿದ್ದಾರೆ. ಆಗ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ, ಮನೆಗೆ ಬುರ್ಖಾಧಾರಿಯೊಬ್ಬಳು ಬಂದಿರುವುದು ಗೊತ್ತಾಗಿದೆ.

ಆಗ ಮನೆಯ ಹಿರಿಯ ಮಗಳ ಮೇಲೆ ಅನುಮಾನ ಬಂದಿದೆ. ಏಕೆಂದರೆ ಕೆಲ ದಿನಗಳ ಹಿಂದೆ ಆಕೆ ತನ್ನ ಮನೆ ಬದಲಾಯಿಸಬೇಕು, ವಸ್ತುಗಳನ್ನು ಶಿಫ್ಟ್ ಮಾಡಬೇಕು. ಸಹಾಯ ಮಾಡಿ ಎಂದು ತಾಯಿಯ ಬಳಿ ಕೇಳಿದ್ದಳು. ತಾಯಿ ಮನೆ ಶಿಫ್ಟಿಂಗ್‌ ಗೆ ಹೆಲ್ಪ್ ಮಾಡುವಾಗ, ತನ್ನ ಮನೆಯ ಕೀಯನ್ನು ಹಿರಿಯ ಮಗಳಿಗೆ ಕೊಟ್ಟಿದ್ದಳು. ಈ ವೇಳೆ ಹಿರಿಯ ಮಗಳು ಸಾಾರ್ವಜನಿಕ ಶೌಚಾಲಯಕ್ಕೆ ಹೋಗಿ, ಬುರ್ಖಾ ಧರಿಸಿ ಬಂದು, ಮನೆಯಲ್ಲಿದ್ದ ಒಡವೆ, ಹಣ ಕದ್ದಿದ್ದಾಳೆ.

ಈ ಅಕ್ಕನಿಗೆ ತಂಗಿಯ ಮೇಲೆ ಹೆಚ್ಚು ಅಸೂಯೆ ಇತ್ತು. ತಂದೆ ತಾಯಿ ತನಗಿಂತ ಹೆಚ್ಚು ಈಕೆಯನ್ನು ಪ್ರೀತಿಸುತ್ತಾರೆ ಎಂದು ಹೊಟ್ಟೆ ಕಿಚ್ಚು ಇತ್ತು. ಮದುವೆಗೆ ರಾಶಿ ರಾಶಿ ಒಡವೆ ಮಾಡಿಸುತ್ತಿದ್ದಾರೆಂಬ ಸಿಟ್ಟಿತ್ತು. ಜೊತೆಗೆ ಅಕ್ಕ ಬೇರೆಡೆ ಸಾಲ ಮಾಡಿಕೊಂಡಿದ್ದಳು. ಆ ಸಾಲ ತೀರಿಸಲು ಈ ದಾರಿ ಕಂಡು ಕೊಂಡಿದ್ದಳು. ಕೊನೆಗೂ ಕಳ್ಳಿ ಸಿಕ್ಕಿಬಿದ್ದಿದ್ದು, ಈ ಬಗ್ಗೆ ಮನೆಯವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯೇಂದ್ರ ಬದಲು ಯತೀಂದ್ರ ಹೆಸರು: ಭಾಷಣದುದ್ದಕ್ಕೂ ಸಚಿವ ಸಂತೋಷ್ ಲಾಡ್ ಯಡವಟ್ಟು

ರಾಜ್ಯಕ್ಕೆ ಅನ್ಯಾಯವಾಗಿದರೂ ಒಬ್ಬ ಸಂಸದರೂ ಧ್ವನಿ ಎತ್ತಿಲ್ಲ- ಡಿಸಿಎಂ ಡಿ.ಕೆ.ಶಿವಕುಮಾರ್..!

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್

About The Author