Friday, October 17, 2025

Latest Posts

ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದ ಜೀನಿ ದಿಲೀಪ್ – ಸೆರಿ ಹಿಟ್ಟು ಬಿಡುಗಡೆ

- Advertisement -

ತುಮಕೂರು : ನಮ್ಮ ತಾತಾ ಮುತ್ತಾತರ ಕಾಲದಲ್ಲಿ ಈ ಬಿಪಿ, ಷುಗರ್, ಗ್ಯಾಸ್ಟ್ರಿಕ್‌ ಸಮಸ್ಯೆಗಳೆ ಇರಲಿಲ್ಲ. ಯಾಕಂದ್ರೆ ನಾವು ತಿನ್ನುವ ಆಹಾರವೇ ಔಷಧವಾಗಿತ್ತು. ಇದೀಗ ಬೇಸಾಯದಲ್ಲಿ ರಸಗೊಬ್ಬರ ಹಾಗೂ ಕೀಟ ನಾಶಕಗಳ ಬಳಕೆ ಆಹಾರವನ್ನೂ ವಿಷವಾಗುವಂತೆ ಮಾಡಿದೆ. ಈ ನಡುವೆ ಸಾಂಪ್ರದಾಯಕ ಪದ್ಧತಿಯಲ್ಲೆ ಸಿರಿಧಾನ್ಯಗಳು ಸೇರಿ 24 ಧಾನ್ಯಗಳನ್ನ ಮಣ್ಣಿನ ಮಡಿಕೆಯಲ್ಲಿ ಹುರಿದು ತಯಾರಿಸಿದ ಜೀನಿ ಒಂದೇ ತಿಂಗಳಲ್ಲಿ ಹಲವು ಆರೋಗ್ಯದ ಸಮಸ್ಯೆಗೆ ರಾಮಬಾಣವಾಗಿ ಇಡೀ ರಾಜ್ಯಾದ್ಯಂತ ಮನೆ ಮಾತಾಗಿದೆ. 2 ವರ್ಷದಿಂದ 12 ವರ್ಷಗಳ ವರೆಗಿನ ಮಕ್ಕಳಿಗೆ ಜ್ಯೂನಿಯರ್ ಜೀನಿ ಎನರ್ಜಿ ತುಂಬುವ ಆಹಾರವಾಗಿ ಮಕ್ಕಳಿಗೂ ಇಷ್ಟವಾಗಿದೆ. ಈ ನಡುವೆ ಸೆರಲ್ಯಾಕ್ ಹಾಗೂ ಲ್ಯಾಕ್ಟೋಜನ್ ರೀತಿ 5ನೇ ತಿಂಗಳಿನಿಂದ ಒಂದೂವರೆ ವರ್ಷದ ನಡುವಿನ ಮಕ್ಕಳಿಗೆ ಧಾನ್ಯಗಳ ಪೌಡರ್ ಬೇಕಾಗಿದೆ ಎಂದು ಗ್ರಾಹಕರು ಒತ್ತಾಯದ ಹಿನ್ನೆಲೆ ಮನೆಯಲ್ಲಿ ಈಗಲೂ ಬಹುತೇಕರು ಮಾಡುವ ಸೆರಿ ಹಿಟ್ಟು ಮಾದರಿಯ ಪೌಡರ್ ಅನ್ನ ಜೀನಿ ಕಂಪನಿ ಬಿಡುಗಡೆ ಮಾಡಿದೆ. ಹೆಚ್ಚು ಪ್ರಮಾಣದಲ್ಲಿ ರಾಗಿ ಭಂಡಾರವನ್ನ ಒಳಗೊಂಡ ಈ ಜೀನಿ ಸೆರಿ ಹಿಟ್ಟು ಕಂದಮ್ಮಗಳಿಗೆ ಸಾಂಪ್ರದಾಯಕ ಆಹಾರ ಕೊಡಲು ಬಯಸುವ ಪೋಷಕರಿಗೆ ಅನುಕೂಲವಾಗಲಿದೆ.

ಜೀನಿ ಸೆರಿ ಹಿಟ್ಟು ತಯಾರಿಕೆ ವಿಶೇಷ..!

ರಾಗಿಯನ್ನ ನೆನೆಸಿ, ನಂತರ ಮೊಳಕೆ ಕಟ್ಟಿ ಅದನ್ನ ಶುದ್ಧವಾದ ಬಟ್ಟೆಯಿಂದ ಉಜ್ಜಿ ನಂತರ ರಾಗಿ ಭಂಡಾರವನ್ನ ಮಾತ್ರ ತೆಗೆದು ಅದರ ಜೊತೆಗೆ ಕೆಲವು ಧಾನ್ಯಗಳನ್ನ ಸೇರಿಸಿ ಈ ಜೀನಿ ಸೆರಿ ಹಿಟ್ಟನ್ನ ತಯಾರು ಮಾಡಲಾಗಿದೆ. ಗ್ರಾಹಕರ ಡಿಮ್ಯಾಂಡ್ ಆಧಾರದ ಮೇಲೆ ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ನಿಮ್ಮ ಹತ್ತಿರದ ಯಾವುದೇ ಮೆಡಿಕಲ್ ಶಾಪ್ ನಲ್ಲಿ ನೀವು ಆರ್ಡರ್ ಮಾಡಿದ ಒಂದು ವಾರದಲ್ಲಿ ಈ ಜೀನಿ ಸೆರಿ ಹಿಟ್ಟು ಲಭ್ಯವಾಗಲಿದೆ.

ದಿಲೀಪ್ ಕಾರ‍್ಯವನ್ನ ಶ್ಲಾಘಿಸಿದ ಮಾಜಿ ಸಚಿವ ಡಿ.ಬಿ ಜಯಚಂದ್ರ

ಇನ್ನು ಜೀನಿ ಸೆರಿ ಹಿಟ್ಟು ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಚಿವ ಟಿ.ಬಿ ಜಯಚಂದ್ರ ದಿಲೀಪ್ ಅವರ ಪ್ರಾಡಕ್ಟ್ ಗಳನ್ನ ವಿಶ್ವಮಟ್ಟಕ್ಕೆ ರಫ್ತು ಮಾಡಿಸುವ ಭರವಸೆ ನೀಡಿದ್ರು. ಕಳೆದ 8-10 ವರ್ಷಗಳ ಹಿಂದೆಯೇ ದಿಲೀಪ್ ಅವರ ಕ್ರೀಯಾಶೀಲತೆ ನೋಡಿ ಜಯಚಂದ್ರ ಅವರು ಸಹೋದ್ಯೋಗಿ ಸಚಿವರಾಗಿದ್ದ ಎಚ್.ಕೆ ಪಾಟೀಲರ ಜೊತೆ ಮಾತುಕತೆಗೆ ವ್ಯವಸ್ಥೆ ಮಾಡಿದ್ದರಂತೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಆಹಾರ ಎಷ್ಟು ಮುಖ್ಯ. ಅದು ನಮ್ಮ ಆರೋಗ್ಯವನ್ನ ಕಾಪಾಡಲು ಎಷ್ಟು ಸಹಕಾರಿ ಅಂತ ಮಾಜಿ ಸಚಿವ ಟಿ.ಬಿ ಜಯಚಂದ್ರ ವಿವರಿಸಿದರು.

ಒಟ್ಟಾರೆ, ಗ್ರಾಮೀಣ ಭಾಗದ ಪ್ರತಿಭೆ ಜೀನಿ ದಿಲೀಪ್ ಅವರು ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದು ಹಳ್ಳಿಯಲ್ಲಿ 400 ಮಂದಿಗೆ ಉದ್ಯೋಗ ನೀಡಿ ಇದೀಗ ಜನರ ಆರೋಗ್ಯದ ದೃಷ್ಟಿಯಿಂದ ಹೊಸ ಹೊಸ ಆಹಾರ ಉತ್ಪನ್ನಗಳನ್ನ ಬಿಡುಗಡೆ ಮಾಡುತ್ತಿರುವುದು ಸಾಧನೆಯೇ ಸರಿ. ದಿಲೀಪ್ ಅವರ ಈ ಕರ‍್ಯಕ್ಕೆ ಎಲ್ಲರೂ ಶುಭ ಹಾರೈಸೋಣ.

ಶಿವಕುಮಾರ್ ಬೆಸಗರಹಳ್ಳಿ ಕರ್ನಾಟಕ ಟಿವಿ

ಜೀನಿಗಾಗಿ ಸಂಪರ್ಕಿಸಿ : 76249331166 / 9731754565

- Advertisement -

Latest Posts

Don't Miss