Thursday, October 23, 2025

Latest Posts

ಫೆ.5ರೊಳಗೆ ಬಹುಮತ ಸಾಬೀತುಪಡಿಸಬೇಕಿದೆ ಚಂಪೈ ಸೊರೆನ್‌: ಶಾಸಕರು ಹೈದರಾಬಾದ್ ರೆಸಾರ್ಟ್‌ಗೆ ಶಿಫ್ಟ್

- Advertisement -

Jharkhand News: ಭ್ರಷ್ಟಾಚಾರ ಆರೋಪದಡಿ ಜಾರ್ಖಂಡನ ಮಾಜಿ ಸಿಎಂ ಹೇಮಂತ್ ಸೊರೆನ್ ಜೈಲುಪಾಲಾಗಿದ್ದು, ಚಂಪೈ ಸೊರೆನ್ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದೀಗ ಫೆಬ್ರವರಿ 5ರೊಳಗೆ ಚಂಪೈ ಸೊರೆನ್ ಬಹುಮತ ಸಾಬೀತುಪಡಿಸಬೇಕಿದೆ. ಈ ಕಾರಣ್ಕಾಗಿ ಎಲ್ಲಿ ಶಾಸಕರು ಬೇರೆ ಪಾರ್ಟಿ ಪಾಲಾಗುತ್ತಾರೋ ಎಂಬ ಕಾರಣಕ್ಕೆ, ಅವರನ್ನೆಲ್ಲ ಹೈದರಾಬಾದ್‌ಗೆ ಶಿಫ್ಟ್ ಮಾಡಲಾಗಿದೆ. ಹೈದರಾಬಾದ್‌ನ ರೆಸಾರ್ಟ್‌ನಲ್ಲಿ ಶಾಸಕರನ್ನು ಇರಿಸಿಲಾಾಗಿದ್ದು, ಫೆಬ್ರವರಿ 5ರತನಕ ಇವರನ್ನು ಎಲ್ಲೂ ಹೋಗದಂತೆ ಕಾಪಾಡಿಕೊಂಡು, ಚಂಪೈ ಬಹುಮತ ಸಾಬೀತುಪಡಿಸಬೇಕಿದೆ.

ಹೈದರಾಬಾದ್‌ನ ಲಿಯೋನಿಯಾ ರೆಸಾರ್ಟ್‌ನಲ್ಲಿ 37 ಶಾಸಕರನ್ನು ಇರಿಸಲಾಗಿದೆ. ಇಲ್ಲಿ ಬಂದೋಬಸ್ತ್‌ಗಾಗಿ ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ. ಸಾಮಾನ್ಯ ಜನರು ಅಥವಾ ಮೀಡಿಯಾದವರು ಯಾರನ್ನೂ ಈ ರೆಸಾರ್ಟ್‌ ಒಳಗೆ ಬಿಡಲಾಗುತ್ತಿಲ್ಲ. ಎಷ್ಟರ ಮಟ್ಟಿಗೆ ಬಂದೋಬಸ್ತ್ ಎಂದರೆ, ಶಾಸಕರು ತಮಗೆ ನೀಡಿದ ಕೋಣೆ ಬಿಟ್ಟು ಹೊರಬರುವಂತಿಲ್ಲ. ಅವರಿಗೆ ಅದೇ ಜಾಗದಲ್ಲಿ ಊಟ, ತಿಂಡಿ, ಅವಶ್ಯಕ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದೆ. ಇನ್ನು ನಿನ್ನೆ ಸಂಜೆ ಎಲ್ಲ ಶಾಸಕರು ಸೇರಿ, ಇದೇ ರೆಸಾರ್ಟ್‌ನಲ್ಲಿ ಪಾರ್ಟಿ ಮಾಡಿದ್ದಾರೆಂಬ ಸುದ್ದಿ ಇದೆ.

‘ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದಿಂದ ನೊಂದು ಡಿ.ಕೆ ಸುರೇಶ್‌ ತಮ್ಮ ಆಕ್ರೋಶ ಹೊರಹಾಕಿದ್ದಾರೆ’

ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ, ಹೊಸ ಪಕ್ಷ ಘೋಷಣೆ

ವಿವಾದದ ಬಳಿಕ ಫೋಟೋ ಶೇರ್ ಮಾಡಿದ ಪವಿತ್ರಾಗೌಡ: ಎಲ್ಲರ ಕಣ್ಣು ಟ್ಯಾಟೂ ಮೇಲೆ

- Advertisement -

Latest Posts

Don't Miss