Sunday, September 8, 2024

Latest Posts

ರಜತ್ ಒತ್ತಡಕ್ಕೆ ಮಣಿದ ಜೋಶಿ: ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಉಳ್ಳಾಗಡ್ಡಿಮಠ

- Advertisement -

Political News: ಹುಬ್ಬಳ್ಳಿ: ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ವಿಶೇಷ ರೈಲು ಸೇವೆ ಪುನರ್ ಆರಂಭವಾಗಿದ್ದು, ಇದನ್ನು ಸ್ವತಃ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಬಂದ್ ಆದ ಹಿನ್ನೆಲೆ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಅನುಭವಿಸಿದರು. ಈ ಹಿನ್ನೆಲೆ ಪ್ರಯಾಣಿಕರು ರೈಲ್ವೆ ಇಲಾಖೆ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ರೈಲು ರದ್ದಾಗಿರೋದನ್ನು ವಿರೋಧಿಸಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಪೌನತಿ ಜೋಶಿ ಎಂಬ ಅಭಿಯಾನ ಕೂಡಾ ಆರಂಭಿಸಿ, ಕೇಂದ್ರ ಸಚಿವರಿಗೆ ತಮ್ಮ ಕ್ಷೇತ್ರದ ಹಿತ ಬೇಕಾಗಿಲ್ಲ, ಅವರಿಗೆ ಬೇಕಿರೋದು ರಾಜಕೀಯ ಅಧಿಕಾರ, ಹೀಗಾಗಿಯೇ ರಾಜಸ್ಥಾನಕ್ಕೆ ಅಧಿಕಾರ ಬಳಸಿ ರೈಲು ಕಳಿಸಿಕೊಟ್ಟಿದ್ದಾರೆ ಎಂಬ ಆರೋಪ ಮಾಡಿದರು‌.

ಇದಾದ ಬೆನ್ನಲ್ಲೇ ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರೈಲು ಪುನಾರಂಭಕ್ಕೆ ಇಲಾಖೆಯ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು. ಇದೀಗ ಹುಬ್ಬಳ್ಳಿ – ಬೆಂಗಳೂರು ಸೂಪರ್‌ ಫಾಸ್ಟ್ ಎಕ್ಸ್ಪ್ರೆಸ್ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದ್ದು, ರೈಲ್ವೆ ಅಧಿಕಾರಿಗಳು ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನೂ ರೈಲು ಆರಂಭಕ್ಕೆ ಅಭಿಯಾನ ಆರಂಭಿಸಿದ ರಜತ್ ಉಳ್ಳಾಗಡ್ಡಿಮಠ ಒತ್ತಡಕ್ಕೆ ಪ್ರಲ್ಹಾದ್ ಜೋಶಿ ಮಣಿದರಾ ಎಂಬ ಮಾತುಗಳು ಕೇಳಿಬರುತ್ತಿವೆ.

ಇಂದು 17 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಹುಬ್ಬಳ್ಳಿ-ಧಾರವಾಡ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಕಮಿಷನರ್ ರೇಣುಕಾ ಸುಕುಮಾರ್

- Advertisement -

Latest Posts

Don't Miss